ಜೋಗಯ್ಯನ ಜೊತೆ ಪೂಜಾಗಾಂಧಿಗೆ ಭರ್ಜರಿ ಚಾನ್ಸ್
ಹ್ಯಾಟ್ರಿಕ್ ನಿರ್ದೇಶಕ್ ಪ್ರೇಮ್ ನಿರ್ದೇಶಿಸುತ್ತಿರುವ ಅದ್ದೂರಿ ಚಿತ್ರ 'ಜೋಗಯ್ಯ'. ಪ್ರೇಮ್ ಚಿತ್ರ ಅಂದರೆ ಕೇಳಬೇಕೆ, ಆರಂಭದಿಂದಹಿಡಿದು ಬಿಡುಗಡೆಯತನಕ ಒಂದಿಲ್ಲೊಂದು ಸುದ್ದಿ ಮಾಡುತ್ತಲೆ ಇರುತ್ತಾರೆ. ಪ್ರೇಕ್ಷಕರ ನಾಡಿಮಿಡಿತವನ್ನು ಅರಿತ ನಿರ್ದೇಶಕ ಎಂದು ಹೇಳಬಹುದು.
'ಜೋಗಿ' ಚಿತ್ರದ ಗೆಲುವು 'ಜೋಗಯ್ಯ' ಚಿತ್ರವನ್ನು ಕುತೂಹಲದಿಂದ ನಿರೀಕ್ಷಿಸುವಂತೆ ಮಾಡಿದೆ. ಚಿತ್ರಕ್ಕೆ ಈಗಾಗಲೆ ನಾಯಕಿಯಾಗಿ ಸುಮಿತ್ ಕೌರ್ ಅತ್ವಾಲ್ ಆಯ್ಕೆಯಾಗಿದ್ದಾರೆ. ಈಗ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಪೂಜಾಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.
'ಜೋಗಯ್ಯ'ನ ಪರ ವಕೀಲೆಯಾಗಿ ಪೂಜಾಗಾಂಧಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ಭೂಗತ ಜಗತ್ತಿನ ದಂತಕಥೆ ಜೋಗಯ್ಯನ ಪರ ನ್ಯಾಯಾಲಯದಲ್ಲಿ ವಾದ ಮಾಡಲಿದ್ದಾರೆ. ಜೋಗಯ್ಯ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಪೂಜಾಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ.
More from Filmibeat
ಜೋಗಯ್ಯ ಪ್ರೇಮ್ ಶಿವರಾಜ್ ಕುಮಾರ್ ಪೂಜಾಗಾಂಧಿ ರಕ್ಷಿತಾ ಪ್ರೇಮ್ jogaiah shiva rajkumar prem pooja gandhi sumit kaur atwal rakshita prem


Click it and Unblock the Notifications











