For Quick Alerts
  ALLOW NOTIFICATIONS  
  For Daily Alerts

  ಪೂಜಾಗಾಂಧಿ ಮಿನುಗು ಚಿತ್ರೀಕರಣ ಮುಕ್ತಾಯ

  By Staff
  |

  ಬಣ್ಣದ ಲೋಕದ ನಟಿಯೊಬ್ಬಳ ವೈಯಕ್ತಿಕ ಜೀವನದ ಪ್ರೀತಿ-ಪ್ರೇಮ, ನೋವು-ನಲಿವುಗಳ ಕಥೆಯನ್ನು ಹೊಂದಿರುವ ಮಿನುಗು ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಅರ್ಪಿತಾ ಚಿತ್ರ ಲಾಂಛನದಲ್ಲಿ ಬಿ. ಗಜೇಂದ್ರ ನಿರ್ಮಿಸುತ್ತಿರುವ ಈ ಚಿತ್ರವನ್ನು ಎ. ಜಯವಂತ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

  ಬೆಂಗಳೂರು ಹಾಗೂ ಸಕಲೇಶಪುರ ಸುತ್ತಮುತ್ತ ರಮಣೀಯ ಹೊರಾಂಗಣದಲ್ಲಿ 52 ದಿನಗಳ ಕಾಲ ಚಿತ್ರೀಕರಣ ನಡೆಸಿ, ಚಿತ್ರೀಕರಣ ಪೂರೈಸಿದೆ. ಲವ್ ಸ್ಟೋರಿಯಾದರೂ ಆತಂಕಕಾರಿ ದೃಶ್ಯಗಳೊಂದಿಗೆ ಸಾಗುವ ಈ ಚಿತ್ರದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸುನಿಲ್ ಕುಮಾರ್ ಸಿಂಗ್ ಅವರು ಈ ಚಿತ್ರದ ಸಂಭಾಷಣೆಗಳನ್ನು ಬರೆದಿದ್ದು, ಸತೀಶ್ ಕುಮಾರ್ ಛಾಯಾಗ್ರಹಣ ಕೆಲಸ ನಿರ್ವಹಿಸಿದ್ದಾರೆ.

  ಫುಲ್‌ಪವರ್ ಗೋಪು ಅವರ ಸಂಗೀತ ಸಂಯೋಜನೆ, ಶ್ರೀಕಾಂತ ಕೆ. ತೋಟ ಅವರ ಸಂಕಲನ, ಚಲಪತಿ ಅವರ ಕಲಾನಿರ್ದೇಶನ, ಅರವಿಂದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುನೀಲ್ ರಾವ್, ಅಜಿತ್ ಹಂಡೆ, ಅಕ್ಷತಾ, ಉಮೇಶ್, ಋತು ಹಾಗೂ ಗುರು ಹೆಗ್ಗಡೆ ಪ್ರಮುಖ ತಾರಾಗಣದಲ್ಲಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಮಿನುಗು ತಾರೆಯಾಗಿ ಪೂಜಾಗಾಂಧಿ
  ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X