ಚೈತ್ರದ ಪ್ರೇಮಾಂಜಲಿ ರಘುವೀರ್ ಈಗ ಆಟೋ ಡ್ರೈವರ್!
'ಚೈತ್ರದ ಪ್ರೇಮಾಂಜಲಿ' ಮೂಲಕ ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಅಚ್ಚೊತ್ತಿದ ನಟ ರಘುವೀರ್ ಈಗ ಆಟೋ ಡ್ರೈವರ್ ಆಗಿ ಬದಲಾದರೆ! ಅವರು ಕೆಲಸ ಮಾಡುತ್ತಿರುವ ಹಳ್ಳಿಗೆ ರಿಯಲ್ ಎಸ್ಟೇಟ್ ಕಾಲಿಡುತ್ತದೆ. ಅಲ್ಲಿನ ಜನ ಭೂಮಿ ಕಳೆದುಕೊಳ್ಳುತ್ತಾರೆ. ಅವರ ಪರ ರಘುವೀರ್ ಧ್ವನಿಎತ್ತಿದ್ದಾರೆ. ಇದೆಲ್ಲಾ ರಿಯಲ್ ಅಂದುಕೊಂಡ್ರಾ? ಸಾರಿ ಇದು ರೀಲ್ ಸ್ಟೋರಿ. ಅವರ ಮುಂದಿನ ಚಿತ್ರದ ಕಥೆಯಿದು.
ಬಹಳ ದಿನಗಳ ಬಳಿಕ ರಘುವೀರ್ ಮತ್ತೆ ಬಣ್ಣ ಹಚ್ಚಿಕೊಂಡಿದ್ದಾರೆ. ಅವರು ನಟಿಸುತ್ತಿರುವ ಚಿತ್ರದಹೆಸರು 'ಉಯ್ಯಾಲೆ'. ಬಹುತೇಕ ಹೊಸಬರೆ ತುಂಬಿರುವ ಚಿತ್ರವಿದು. ಚಿತ್ರದಲ್ಲಿ ರಘುವೀರ್ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನಾಯಕ ನಟ ಪ್ರಭು, ನಾಯಕಿ ಶಿಲ್ಪಾ.
ನಾಯಕನ ತಂದೆ ಪಾತ್ರದಲ್ಲಿ ರಮೇಶ್ ಭಟ್ ಕಾಣಿಸಲಿದ್ದಾರೆ. ಉಳಿದಂತೆ ಟೆನ್ನಿಸ್ ಕೃಷ್ಣ, ದೊಡ್ಡಣ್ಣ, ಪದ್ಮಜಾರಾವ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದಿನೇಶ್ ನಿರ್ದೇಶಿಸಿರುವ ಈ ಚಿತ್ರವನ್ನು ಜಿ ದೊರೈಸ್ವಾಮಿ ನಿರ್ಮಿಸಿದ್ದಾರೆ. ರಿಕ್ಕಿ ಸಂಗೀತ, ಎಂ ಆರ್ ಸೀನು ಛಾಯಾಗ್ರಹಣ ಚಿತ್ರಕ್ಕಿದೆ. ನವೆಂಬರ್‍ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.


Click it and Unblock the Notifications











