For Quick Alerts
  ALLOW NOTIFICATIONS  
  For Daily Alerts

  ರಮ್ಯಾರನ್ನು ಓವರ್‌ಟೇಕ್ ಮಾಡಿದ ರಾಗಿಣಿ ದ್ವಿವೇದಿ

  By Rajendra
  |

  "ತುಪ್ಪ ಬೇಕ ತುಪ್ಪ" ಎಂಬ ಹಾಡಿಗೆ ಕುಣಿದು ಪಡ್ಡೆಗಳ ಪಾಲಿಗೆ ಕನಸಿನ ರಾಣಿಯಾದ ರಾಗಿಣಿ ಈಗ ಕನ್ನಡದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ತಾರೆಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಓರಗೆಯರ ತಾರೆಯನ್ನು ಓವರ್ ಟೇಕ್ ಮಾಡುವುದರ ಜೊತೆಗೆ ಗೋಲ್ಡನ್ ಗರ್ಲ್ ರಮ್ಯಾರನ್ನು ಹಿಂದಿಕ್ಕಿರುವುದು ವಿಶೇಷ.

  ಗಾಂಧಿನಗರದ ಮೂಲಗಳ ಪ್ರಕಾರ ಚಿತ್ರವೊಂದಕ್ಕೆ ರಾಗಿಣಿ ರು.33 ಲಕ್ಷ ಸಂಭಾವನೆ ಎಣಿಸಿದ್ದಾರೆ. ಅರ್ಜುನ್ ಎಂಬ ಹೊಸಬನೊಂದಿಗಿನ 'ಹನುಮಾನ್' ಎಂಬ ಚಿತ್ರಕ್ಕೆ ರಾಗಿಣಿ ಈ ಪಾಟಿ ಸಂಭಾವನೆ ಪಡೆದಿರುವುದು ವಿಶೇಷ. ರಾಗಿಣಿ ಸಂಭಾವನೆಯಲ್ಲಿ ಏರಿಕೆಯಾಗಿರುವ ಬಗ್ಗೆ ರಾಗಿಣಿ ಪ್ರತಿಕ್ರಿಯಿಸಿದ್ದು, ಹಾರ್ಡ್‌ವರ್ಕ್‌ಗೆ ಸಿಕ್ಕ ಬಳುವಳಿ ಇದು ಎಂದಿದ್ದಾರೆ.

  'ಕಳ್ಳ ಮಳ್ಳ ಸುಳ್ಳ' ಚಿತ್ರದ ಗ್ಲಾಮರ್ ಪಾತ್ರದ ಬಳಿಕ ರಾಗಿಣಿ ಪಾತ್ರಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಕ್ಯಾಲೆಂಡರ್‌ಗಾಗಿ ಬಿಕಿನಿ ತೊಡಲು ಒಲ್ಲೆ ಎಂದಿದ್ದರು. ಸದ್ಯಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಶಿವ' ಚಿತ್ರದಲ್ಲಿ ರಾಗಿಣಿ ಬಿಜಿಯಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Actress Ragini Dwivedi has become the highest paid starlet in Kannada. The buzz is that Ragini is getting a whopping Rs 33 lakhs for her role in the new movie Hanuman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X