ಶಾದಿ ಡಾಟ್ ಕಾಂನಲ್ಲಿ ಇಷಾ, ರಾಹುಲ್ ಗಾಂಧಿ!

By Rajendra

ಆನ್ ಲೈನ್ ವಧುವರರ ಅನ್ವೇಷಣಾ ತಾಣ ಶಾದಿ ಡಾಟ್ ಕಾಂಗೂ ಇವರಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಅಂತೀರಾ? ಇತ್ತೀಚೆಗೆ ಈ ತಾಣ ಮುಂಬೈಗರ ಮುಂದೆ ಭಾರತದ "ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು" ಎಂಬ ಪ್ರಶ್ನೆಯನ್ನಿಟ್ಟಿತ್ತ್ತು. ಈ ಪ್ರಶ್ನೆಗೆ ಮುಂಬೈಗರು ಅಚ್ಚರಿ ಉತ್ತರ ನೀಡಿದ್ದಾರೆ.

ಅವರೆಲ್ಲರ ಉತ್ತರ ಒಂದೇ ಪುರುಷನಾದರೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ. ಮಹಿಳೆಯಾದರೆ ಬಾಲಿವುಡ್ ತಾರೆ ಇಷಾ ಡಿಯೋಲ್ ಎಂದು ಏಕ್ ಮಾರ್ ಧೋತುಕಡಾ ಎಂಬಂತೆ ಹೇಳಿದ್ದಾರೆ. ಮತದಾನದಲ್ಲಿ ರಾಹುಲ್ ಗಾಂಧಿಗೆ ಶೇ. 34.69 ಮತಗಳು ಬಿದ್ದಿದ್ದು ಅತ್ಯಂತ ಅರ್ಹ ಅವಿವಾಹಿತನಾಗಿ ಹೊರಹೊಮ್ಮಿದ್ದಾರೆ.

ಒಲಂಪಿಕ್‌ನಲ್ಲಿ ಕಂಚಿನ ಪದಕ ಪಡೆದ ಬಾಕ್ಸರ್ ವಿಜೇಂದರ್ ಸಿಂಗ್ ಪರ ಶೇ.18.36 ಮತಗಳು ಬಿದ್ದಿವೆ. ಉದ್ಯಮಿ ನೆಸ್ ವಾಡಿಯಾಗೆ ಶೇ.16.32 ಮತಗಳು ಹಾಗೆಯೇ ಸಿನಿಮಾ ತಾರೆಗಳಾದ ರಾಹುಲ್ ಖನ್ನಾಗೆ ಶೇ.12.24 ಮತಗಳು, ಕೂನಲ್ ಕಪೂರ್‌ಗೆ ಶೇ.10.23 ಹಾಗೂ ರಾಹುಲ್ ಬೋಸ್‌ಗೆ ಶೇ.8.16ರಷ್ಟು ಮತಗಳು ಬಿದ್ದಿವೆ.

ಮಹಿಳಾ ಸ್ಪರ್ಧಿಗಳಲ್ಲಿ ಇಷಾ ಡಿಯೋಲ್‌ಗೆ ಶೇ.40.81 ರಷ್ಟು ಅತ್ಯಧಿಕ ಮತಗಳು ಬಿದ್ದು ಅವರ ಕೊರಳಿಗೆ ವಿಜಯ ಮಾಲೆ ಬಿದ್ದಿದೆ. ನಂತರದ ಸ್ಥಾನದಲ್ಲಿ ಸುಶ್ಮಿತಾ ಸೇನ್ (ಶೇ.24.48), ಅನುಷ್ಕಾ ಶರ್ಮಾ (ಶೇ.12.24 ), ಸೋನಂ ಕಪೂರ್ ಹಾಗೂ ಮಲ್ಲಿಕಾ ಶೆರಾವತ್ (ತಲಾ ಶೇ.8.16) ಹಾಗೂ ಬ್ಯಾಡ್ಮಿಟನ್ ತಾರೆ ಸೈನಾ ನೆಹ್ವಾಲ್ (ಶೇ.6.15 )ಅವರಂತೂ ಠೇವಣಿ ಕಳೆದುಕೊಂಡಿದ್ದಾರೆ. [ಮದುವೆ]

More from Filmibeat

English summary
Congress General Secretary Rahul Gandhi and actress Esha Deol were voted as the most eligible bachelors by the people of Mumbai in a recent poll. The poll conducted by matrimonial website Shaadi.com, gave Rahul 34.69 percent votes, while Esha Deol topped the list with 40.81 percent votes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X