ಬುಧವಾರ ರಾತ್ರಿ ಲ್ಯಾಂಡ್ ಆಗಲಿದ್ದಾರೆ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಬುಧವಾರ (ಜು.13) ಸಿಂಗಪುರದಿಂದ ಚೆನ್ನೈಗೆ ಆಗಮಿಸುತ್ತಿದ್ದಾರೆ. ಇಂದು ರಾತ್ರಿ(ಸುಮಾರು 10.30ಕ್ಕೆ)ವೇಳೆಗೆ ಅವರು ಚೆನ್ನೈ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಲಿದ್ದಾರೆ. ತನ್ನ ಅಭಿಮಾನಿ ದೇವರುಗಳನ್ನು ಏರ್‌ಪೋರ್ಟ್‌ನಲ್ಲೇ ಭೇಟಿ ಮಾಡಲಿದ್ದಾರೆ ಎಂದು ರಜನಿ ಅಭಿಮಾನಿಗಳ ಸಂಘ ಸಂದೇಶ ರವಾನಿಸಿದೆ.
ಅನಾರೋಗ್ಯದ ನಿಮಿತ್ತ ಅವರು ಚಿಕಿತ್ಸೆಗಾಗಿ ಸಿಂಗಪುರಕ್ಕೆ ಹೋಗಿದ್ದರು. ಅಲ್ಲಿ ಆರು ವಾರುಗಳ ಕಾಲ ಚಿಕಿತ್ಸೆ ಪಡೆದು ಈಗ ಸ್ವದೇಶಕ್ಕೆ ಆಗಮಿಸುತ್ತಿದ್ದಾರೆ. ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ಈಗ ರಜನಿ ಸಂಪೂರ್ಣ ಗುಣಮುಖರಾಗಿದ್ದು 'ರಾಣಾ' ಚಿತ್ರಕ್ಕೆ ಬಣ್ಣಹಚ್ಚಿಕೊಳ್ಳಲು ಸಿದ್ಧರಾಗಿದ್ದಾರೆ.
ರಜನಿಯನ್ನು ನೋಡಲು ಅವರ ಅಪಾರ ಅಭಿಮಾನಿಗಳು ಚೆನ್ನೈನತ್ತ ದೌಡಾಯಿಸಿದ್ದಾರೆ. ಆದರೆ ಖಾಸಗಿ ವಾಹನಗಳಲ್ಲಿ ಬರದೆ, ಸರ್ಕಾರಿ ಬಸ್ಸು ಅಥವಾ ರೈಲುಗಳಲ್ಲಿ ಬರಲು ರಜನಿ ಅವರ ಧರ್ಮಪತ್ನಿ ಲತಾ ಅವರು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ರಜನಿ ಆಗಮನದ ಹಿನ್ನೆಲೆಯಲ್ಲಿ ಚೆನ್ನೈ ಏರ್‌ಪೋರ್ಟ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಕಲ್ಪಿಸಲಾಗಿದೆ. (ಏಜೆನ್ಸೀಸ್)


Click it and Unblock the Notifications











