ತಿಮ್ಮಪ್ಪನ ಲಾಡುಗಿಂತ ಡಾ.ರಾಜ್ ಲಾಡು ರುಚಿ, ಏನಂತೀರಿ?

ಬಂಗಾರದ ಪಂಜರ ಚಿತ್ರದಲ್ಲಿ ರಾಜಕುಮಾರ್ ಲಾಡು ತಿನ್ನುವ ಒಂದು ಸನ್ನಿವೇಶವಿದೆ. ಈ ಚಿತ್ರದ ಚಿತ್ರೀಕರಣದ ನಂತರ ಅಣ್ಣಾವ್ರಿಗೆ ಲಾಡು ಎಂದರೆ ಪಂಚಪ್ರಾಣವಾಯಿತಂತೆ. ಮೊದಲೇ ರಾಜ್ ಅಭಿಮಾನಿಯಾಗಿರುವ ಸದಾಶಿವ ರಾವ್ ತಮ್ಮ ಪಾಕದ ಮನೆಯಲ್ಲಿ ಡಾ.ರಾಜ್ ಲಾಡು ತಯಾರಿಸಿ ಅಣ್ಣಾವ್ರ ಮನೆಗೆ ಹೋಗಿ ಅವರಿಗೆ ವಿನಯಪೂರ್ವಕವಾಗಿ ನೀಡಿದರಂತೆ.
ಅಂದಿನಿಂದ ನಾನು ಅಣ್ಣಾವ್ರ ಅಭಿಮಾನಿಯಾದರೆ ಅವರು ನಾನು ತಯಾರಿಸುವ ಲಾಡುವಿನ ಅಭಿಮಾನಿ ಆದರು. ಹೀಗಾಗಿ ಇದಕ್ಕೆ ಡಾ.ರಾಜ್ ನಾಮಕರಣ ಆಯಿತು ಎಂದು ರಾವ್ ಭಾವುಕರಾಗಿ ಹೇಳುತ್ತಾರೆ.
ಈ ಲಾಡು ತಿರುಪತಿ ತಿಮ್ಮಪ್ಪನ ಲಾಡುಗಿಂತ ರುಚಿ. ಇದನ್ನು ರಾಜ್ ಅವರ ಜನ್ಮದಿನದಂದು ಉಚಿತವಾಗಿ ಅಭಿಮಾನಿಗಳಿಗೆ ವಿತರಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುವ ರಾವ್, ಇಂದಿಗೂ ರಾಜ್ ಕುಟುಂಬ ತಮ್ಮ ಈ ಲಾಡುಗಳನ್ನು ತಪ್ಪದೆ ಖರೀದಿಸುತ್ತಿದೆ ಎನ್ನುತ್ತಾರೆ.
ಡಾ. ರಾಜ್ ಲಾಡು ಮತ್ತು ಮೈಸೂರು ಪಾಕ್ ಈ ಅಂಗಡಿಯ ಸ್ಪೆಷಲ್ ಐಟಂ. ಈ ಲಾಡುಗಳನ್ನು ಬೆಂಗಳೂರು ಮೂಲದ ಹಲವು ಅನಿವಾಸಿ ಭಾರತೀಯರು ಕೊಂಡೊಯ್ಯುತ್ತಿದ್ದು, ವಿದೇಶದಲ್ಲೂ ಈ ಲಾಡು ಮೂಲಕ ಅಣ್ಣಾವ್ರ ಸವಿ ಸವಿ ನೆನಪು ಮತ್ತೆ ಮತ್ತೆ ಮೂಡುತ್ತದೆ ಎಂದು ಸದಾಶಿವ ರಾವ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂದ ಹಾಗೆ, ಈ ಅಂಗಡಿ ಚಾಮರಾಜಪೇಟೆಯ ಈದ್ಗಾ ಮೈದಾನದ ಎದುರಿಗಿದೆ. ನೀವೂ ಒಂದು ಸಲ ಟ್ರೈ ಮಾಡಿ ಮತ್ತೆ.


Click it and Unblock the Notifications











