twitter
    For Quick Alerts
    ALLOW NOTIFICATIONS  
    For Daily Alerts

    ತಿಮ್ಮಪ್ಪನ ಲಾಡುಗಿಂತ ಡಾ.ರಾಜ್ ಲಾಡು ರುಚಿ, ಏನಂತೀರಿ?

    By Srinath
    |

    rajarati-bagarada-panjara
    ಬೆಂಗಳೂರು, ಜು 13: ಮಂಗಳೂರು ಮೂಲದ ಸದಾಶಿವ ರಾವ್ ಎಂಬುವವರು ಅಣ್ಣಾವ್ರ ಅಪ್ಪಟ ಅಭಿಮಾನಿ. ನಳಪಾಕದಲ್ಲಿ ಪ್ರವೀಣರಾಗಿರುವ ಇವರು ನಗರದ ಚಾಮರಾಜಪೇಟೆಯಲ್ಲಿ ಗಣೇಶ್ ಸ್ವೀಟ್ಸ್ ಅಂಗಡಿ ಇಟ್ಟು ಕೊಂಡಿದ್ದಾರೆ. ಅವರ ಪಾಕದ ಮನೆಯಲ್ಲಿ ತಯಾರುಗುತ್ತಿರುವುದೇ ಡಾ.ರಾಜ್ ಲಾಡು. ಬಾದಾಮಿ, ಪಿಸ್ತಾ, ಗೋಡಂಬಿ, ದ್ರಾಕ್ಷಿ, ಹಾಲು, ಏಲಕ್ಕಿ ಹಾಗೂ ನಂದಿನಿ ತುಪ್ಪದಿಂದ ಇದನ್ನು ತಯಾರಿಸುತ್ತಿದ್ದಾರೆ.

    ಬಂಗಾರದ ಪಂಜರ ಚಿತ್ರದಲ್ಲಿ ರಾಜಕುಮಾರ್ ಲಾಡು ತಿನ್ನುವ ಒಂದು ಸನ್ನಿವೇಶವಿದೆ. ಈ ಚಿತ್ರದ ಚಿತ್ರೀಕರಣದ ನಂತರ ಅಣ್ಣಾವ್ರಿಗೆ ಲಾಡು ಎಂದರೆ ಪಂಚಪ್ರಾಣವಾಯಿತಂತೆ. ಮೊದಲೇ ರಾಜ್ ಅಭಿಮಾನಿಯಾಗಿರುವ ಸದಾಶಿವ ರಾವ್ ತಮ್ಮ ಪಾಕದ ಮನೆಯಲ್ಲಿ ಡಾ.ರಾಜ್ ಲಾಡು ತಯಾರಿಸಿ ಅಣ್ಣಾವ್ರ ಮನೆಗೆ ಹೋಗಿ ಅವರಿಗೆ ವಿನಯಪೂರ್ವಕವಾಗಿ ನೀಡಿದರಂತೆ.

    ಅಂದಿನಿಂದ ನಾನು ಅಣ್ಣಾವ್ರ ಅಭಿಮಾನಿಯಾದರೆ ಅವರು ನಾನು ತಯಾರಿಸುವ ಲಾಡುವಿನ ಅಭಿಮಾನಿ ಆದರು. ಹೀಗಾಗಿ ಇದಕ್ಕೆ ಡಾ.ರಾಜ್ ನಾಮಕರಣ ಆಯಿತು ಎಂದು ರಾವ್ ಭಾವುಕರಾಗಿ ಹೇಳುತ್ತಾರೆ.

    ಈ ಲಾಡು ತಿರುಪತಿ ತಿಮ್ಮಪ್ಪನ ಲಾಡುಗಿಂತ ರುಚಿ. ಇದನ್ನು ರಾಜ್ ಅವರ ಜನ್ಮದಿನದಂದು ಉಚಿತವಾಗಿ ಅಭಿಮಾನಿಗಳಿಗೆ ವಿತರಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುವ ರಾವ್, ಇಂದಿಗೂ ರಾಜ್ ಕುಟುಂಬ ತಮ್ಮ ಈ ಲಾಡುಗಳನ್ನು ತಪ್ಪದೆ ಖರೀದಿಸುತ್ತಿದೆ ಎನ್ನುತ್ತಾರೆ.

    ಡಾ. ರಾಜ್ ಲಾಡು ಮತ್ತು ಮೈಸೂರು ಪಾಕ್ ಈ ಅಂಗಡಿಯ ಸ್ಪೆಷಲ್ ಐಟಂ. ಈ ಲಾಡುಗಳನ್ನು ಬೆಂಗಳೂರು ಮೂಲದ ಹಲವು ಅನಿವಾಸಿ ಭಾರತೀಯರು ಕೊಂಡೊಯ್ಯುತ್ತಿದ್ದು, ವಿದೇಶದಲ್ಲೂ ಈ ಲಾಡು ಮೂಲಕ ಅಣ್ಣಾವ್ರ ಸವಿ ಸವಿ ನೆನಪು ಮತ್ತೆ ಮತ್ತೆ ಮೂಡುತ್ತದೆ ಎಂದು ಸದಾಶಿವ ರಾವ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂದ ಹಾಗೆ, ಈ ಅಂಗಡಿ ಚಾಮರಾಜಪೇಟೆಯ ಈದ್ಗಾ ಮೈದಾನದ ಎದುರಿಗಿದೆ. ನೀವೂ ಒಂದು ಸಲ ಟ್ರೈ ಮಾಡಿ ಮತ್ತೆ.

    English summary
    Its a story of Dr. Rajkumar and his penchant love for Laddu. Sadashiva Rao a big fan of Dr. Rajkumar prepares laddu which is more famous than Tirupati Laddu. You wanna taste it, then visit Ganesh Sweet Stall in Chamraj pet, Bangalore.
    Wednesday, July 13, 2011, 13:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X