twitter
    For Quick Alerts
    ALLOW NOTIFICATIONS  
    For Daily Alerts

    ರಮ್ಯಾ ಜೊತೆ ಗೆಳೆತನವೊಂದೇ ಇತ್ತು ಎಂದ ಆನಂದ್

    |
    <ul id="pagination-digg"><li class="next"><a href="/news/13-actor-anand-apology-actress-ramya-barna-aid0172.html">Next »</a></li></ul>

    Anand
    "ನಮ್ಮ ನಡುವೆ ಗೆಳೆತನದ ಸಂಬಂಧ ಬಿಟ್ಟರೆ, ಬೇರೇನೂ ಇರಲಿಲ್ಲ. ನಾವು 'ಮನಸುಗಳ ಮಾತು ಮಧುರ' ಚಿತ್ರದ ನಂತರ ಅತ್ಯುತ್ತಮ ಫ್ರೆಂಡ್ಸಾಗಿದ್ದೆವು. ಸ್ವತಃ ರಮ್ಯಾ ತಾಯಿ ನನ್ನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಸಾಕಷ್ಟು ಬಾರಿ ಅವರ ಮನೆಯೂಟವನ್ನೇ ಮಾಡಿದ್ದೇನೆ. ಆ ಕುಟುಂಬಕ್ಕೆ ನಾನು ಹತ್ತಿರವಾಗಿದ್ದೆ. ಆದರೆ ನನ್ನ ಮತ್ತು ಪತ್ನಿ ಭರಣಿ ವಿವಾದದಲ್ಲಿ ರಮ್ಯಾರನ್ನು ಅನಗತ್ಯವಾಗಿ ಎಳೆದು ತರಲಾಯಿತು.

    ನಮ್ಮ ವೈಯಕ್ತಿಕ ಸಮಸ್ಯೆಗೆ ರಮ್ಯಾ ಬಲಿಯಾಗಿದ್ದು ನನಗೆ ತೀವ್ರ ನೋವನ್ನುಂಟುಮಾಡಿದೆ. ಕ್ಷಮೆ ಕೇಳಬೇಕು ಅನ್ನೋದು ನನ್ನ ಬಹುದಿನಗಳ ಬಯಕೆಯಾಗಿತ್ತು. ಆದರೆ ಬಿಕ್ಕಟ್ಟನ್ನು ಬಗೆಹರಿಸಲು ನನಗೆ ಗೊತ್ತಿರಲಿಲ್ಲ. ಹೀಗಾಗಬಾರದಿತ್ತು, ಈಗ ನಿಮ್ಮ ಮೂಲಕ ರಮ್ಯಾ ಮತ್ತು ಆಕೆಯ ತಾಯಿಯ ಕ್ಷಮೆ ಕೇಳುತ್ತಿದ್ದೇನೆ.

    ನಾನೂ ಸಹೋದರಿಯರ ನಡುವೆ ಬೆಳೆದವನು. ಆರೋಪಗಳಿಂದ ಆಗುವ ನೋವಿನ ಅರಿವು ನನಗಿದೆ. ಈಗಲೂ ನನ್ನ ಬಗ್ಗೆ ಅಪಪ್ರಚಾರ ಮುಂದುವರಿಯುತ್ತಿದೆ. ಇದಾದ ನಂತರ ರಮ್ಯಾ ಅಥವಾ ಆಕೆಯ ತಾಯಿ ಜತೆ ನಾನು ಮಾತನಾಡಿಯೇ ಇಲ್ಲ. ಅವರನ್ನು ಎದುರಿಸುವ ಧೈರ್ಯ ನನಗಿಲ್ಲ" ಎಂದು ಬೆಂಗಳೂರು ಮಿರರ್' ಪತ್ರಿಕೆಗೆ ಆನಂದ್ ಕಣ್ಣೀರು ಸುರಿಸುತ್ತಾ ಹೇಳಿದ್ದಾರೆ. ರಮ್ಯಾ ಸ್ಥಿತಿ ಏನಾಗಿತ್ತು ಎಂಬುದಕ್ಕೆ ಮುಂದಿನ ಪುಟ ನೋಡಿ...

    <ul id="pagination-digg"><li class="next"><a href="/news/13-actor-anand-apology-actress-ramya-barna-aid0172.html">Next »</a></li></ul>

    English summary
    Actor Anand asked apology to actress Ramya Barna through Bangalore Mirror. He told they are good friends. &#13; &#13; &#13;
    Sunday, November 13, 2011, 16:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X