ಕನಸುಗಾರ ರವಿಚಂದ್ರನ್ ಜೊತೆ ಮೋಹಿನಿ ಸದಾ

By Rajendra

ಶಿವರಾಜ್ ಕುಮಾರ್ ಅವರ 99ನೇ ಚಿತ್ರ 'ಮೈಲಾರಿ' ಹಾಗೂ ಇಂದ್ರಜಿತ್ ಲಂಕೇಶ್ ಅವರ 'ಹುಡುಗ ಹುಡುಗಿ' ಚಿತ್ರಗಳನ್ನು ಮುಗಿಸಿರುವ ಸದಾ ಮೊಹಮ್ಮದ್ ಸಯೀದ್(ಸದಾ ಎಂದೇ ಖ್ಯಾತ) ಈಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈಗಾಗಲೆ ಭರದಿಂದ ಚಿತ್ರೀಕರಣ ಸಾಗಿರುವ ಕ್ರೇಜಿ ಸ್ಟಾರ್ 'ಮಲ್ಲಿಕಾರ್ಜುನ' ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಮುಂಬೈ ಮೂಲದ ಈ ಬೆಡಗಿ ಆರಂಭದಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ಬಳಿಕ ತಮಿಳು, ಮಲಯಾಳಂ ಚಿತ್ರರಂಗದಲ್ಲೂ ಒಂದು ಸುತ್ತುಹಾಕಿಕೊಂಡು ಬಂದರು. ಈಗ ಕನ್ನಡ ಚಿತ್ರರಂಗದಲ್ಲಿ ಒಂದು ಕೈ ನೋಡುತ್ತಿದ್ದಾರೆ. ಸೆಪ್ಟೆಂಬರ್ 15ರಿಂದ ಮೈಸೂರಿನಲ್ಲಿ ಸದಾ ಮತ್ತು ರವಿಚಂದ್ರನ್ ಭಾಗದ ಚಿತ್ರೀಕರಣ ನಡೆಯಲಿದೆ.

ಉಪೇಂದ್ರ ಅಭಿನಯದ 'ನಾಗರ ಹಾವು' ಹಾಗೂ ಶಿವರಾಜ್ ಕುಮಾರ್ ಅಭಿನಯ 'ಸಂತ' ಚಿತ್ರಗಳನ್ನು ನಿರ್ದೇಶಿಸಿದ್ದ ಮುರಳಿ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ದ್ವಿಪಾತ್ರದಲ್ಲಿ ಕಾಣಿಸಲಿದ್ದಾರೆ. ದಿನೇಶ್ ಗಾಂಧಿ ನಿರ್ಮಿಸುತ್ತಿರುವ ಚಿತ್ರದ ತಾರಾಬಳಗದಲ್ಲಿ ರವಿಚಂದ್ರನ್, ಸೀತಾ, ರಾಗಿಣಿ, ಸುದೀಪ್‌ತೋ, ಆಶೀಷ್‌ವಿದ್ಯಾರ್ಥಿ, ಹೇಮಾಚೌಧರಿ, ಆದಿ ಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ರಾಜುತಾಳಿಕೋಟೆ, ದಿನೇಶ್‌ಗಾಂಧಿ ಮುಂತಾದವರ ಅಭಿನಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X