ಹ್ಯಾಟ್ರಿಕ್ ಹೀರೋ ಹೊಸ ಚಿತ್ರ ಮಹಾ ಶಿವರಾತ್ರಿ
ಒಟ್ಟೊಟ್ಟಿಗೆ ಹಲವು ಚಿತ್ರಗಳನ್ನು ಒಪ್ಪಿಕೊಳ್ಳುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಶೈಲಿ. ಈಗಾಗಲೆ ಅವರ ಕೈಯಲ್ಲಿ 'ಜೋಗಯ್ಯ' ಚಿತ್ರ ಸೇರಿದಂತೆ ಪುಣ್ಯವಂತ, ಮೈಲಾರಿ, ಕ್ಷತ್ರಿಯ, ಭಕ್ತ ಕುಂಬಾರ, ಆಪರೇಷನ್ ಗೋಲ್ಡನ್ ಗ್ಯಾಂಗ್...ಹೀಗೆ ಹಲವಾರು ಚಿತ್ರಗಳಿವೆ.
ಈಗ ಈ ಸಾಲಿಗೆ ಮತ್ತೊಂ ದು ಹೊಸ ಚಿತ್ರ ಸೇರ್ಪಡೆಯಾಗಿದೆ. ಚಿತ್ರದ ಹೆಸರು 'ಮಹಾ ಶಿವರಾತ್ರಿ'. ಈ ಚಿತ್ರವನ್ನು ಕಿಶೋರ್ ಮತ್ತು ಕಿರಣ್ ನಿರ್ಮಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಶಿವಣ್ಣನ ಈ ಚಿತ್ರಕ್ಕೆ ಚಾಲನೆ ನೀಡಲಾಗಿದೆ.
ಶಿವಣ್ಣನ ನೂರನೆ ಚಿತ್ರ 'ಜೋಗಯ್ಯ' ಎಂಬುದು ಈಗಾಗಲೆ ಜಗಜ್ಜಾಹೀರಾಗಿದೆ. ನೂರೊಂದನೆ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರ 'ಪುಣ್ಯವಂತ ಸನ್ ಆಫ್ ಭಾಗ್ಯವಂತ' ಎಂದು ತಿಳಿದುಕೊಂಡರೆ ತಪ್ಪಾಗುತ್ತದೆ. 'ಮಹಾ ಶಿವರಾತ್ರಿ' ಚಿತ್ರವೇ ನೂರೊಂದನೆ ಚಿತ್ರ ಎನ್ನುತ್ತಿದ್ದಾರೆ ನಿರ್ಮಾಪಕರು.
ಶ್ರೀಲಕ್ಷ್ಮಿ ಕುಮಾರಸ್ವಾಮಿ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಮುಸ್ಸಂಜೆ ಮಹೇಶ್ ಹೊತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೂಲ್' ಚಿತ್ರದಿಂದ ಹೊರಬಂದಿದ್ದರು. ಈ ಚಿತ್ರಕ್ಕೆ ಪಿ ಎಚ್‌ಕೆ ದಾಸ್ ಅವರ ಛಾಯಾಗ್ರಹಣ, ವಿ ಶ್ರೀಧರ್ ಅವರ ಸಂಗೀತವಿದೆ.


Click it and Unblock the Notifications











