ತಬ್ಬಲಿಗಳನ್ನು ತಬ್ಬಿ ಬರ್ತ್‌ಡೇ ಸೆಲಿಬ್ರೇಟ್ ಮಾಡಿದ ಸ್ನೇಹಾ
ನಟಿ ಸ್ನೇಹಾ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಕೊಂಡಿದ್ದಾರೆ. ದೈಹಿಕ ವಿಕಲಚೇತನ ಮಕ್ಕಳೊಂದಿಗೆ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಅಕ್ಟೋಬರ್ 12ರಂದು ಸ್ನೇಹಾ ಆಚರಿಸಿಕೊಂಡರು. ಚೆನ್ನೈನ ಅನಾಥಾಶ್ರಮಕ್ಕೆ ಭೇಟಿ ಅಲ್ಲಿನ ಮಕ್ಕಳೊಂದಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ತಮಿಳುನಾಡಿನ ಮೈಲಾಪುರದ ಕಪಾಲೀಶ್ವರ ಮಂದಿರಕ್ಕೆ ತಮ್ಮ ಕುಟುಂಬ ಸಮೇತ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಂಧ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅವರ ಬಾಯಿ ಸಿಹಿಮಾಡಿ ತಮ್ಮ ಮನಸ್ಸಿನಲ್ಲೂ ಸಿಹಿಗಾಳಿ ತುಂಬಿಸಿಕೊಂಡಿದ್ದಾರೆ.
ಅನಾಥಾಶ್ರಮದ ಮಕ್ಕಳೊಂದಿಗೆ ಕೆಲ ಸಮಯ ಕಳೆದು ಅವರ ಸಂತಸಕ್ಕೂ ಕಾರಣರಾದರು. ಬಳಿಕ ಛಾಯಾಗ್ರಾಹಕರಿಗೂ ಪೋಸು ನೀಡಿದರು. ಕಳೆದ ವರ್ಷವೂ ತಮ್ಮ ಬರ್ತ್‌ಡೇಯನ್ನು ಅನಾಥಾಶ್ರಮದ ಮಕ್ಕಳೊಂದಿಗೆ ಸ್ನೇಹಾ ಆಚರಿಸಿಕೊಂಡಿದ್ದರು. ಅನಾಥಾಶ್ರಮಕ್ಕೆ ಅವರು ಸಲ್ಲಿಸುತ್ತಿರುವ ಸೇವೆಗೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
Beautiful lass Sneha, like her previous years, celebrated her birthday with physically challenged children. The actress, who turned 30 on October 12, visited an orphanage in Chennai and spent some precious time with disabled kids.


Click it and Unblock the Notifications











