twitter
    For Quick Alerts
    ALLOW NOTIFICATIONS  
    For Daily Alerts

    ಕನಸಿನ ಕಣ್ಮಣಿ, ನಟಿ 'ಜ್ಯೂಲಿ ಲಕ್ಷ್ಮೀ' ಹುಟ್ಟುಹಬ್ಬ

    |

    Julie Laksmi
    ಮತ್ತೆಮತ್ತೆ ನೋಡಬೇಕೆಂಬ ಮುಖ, ಆಕರ್ಷಕ ದನಿ, ಕಣ್ಣಲ್ಲೇ ಕಾದಂಬರಿ ಬರೆಯಬಲ್ಲ ಚೆಲುವಿನ ಖನಿ ಈ ಲಕ್ಷ್ಮೀ, ದಕ್ಷಿಣ ಭಾರತದ ಸುಂದರ ನಟಿ. ಕೇವಲ ಸಿನಿಮಾ ಅಲ್ಲದೇ, ಸಿನಿಮೇತರ ಚಟುವಟಿಕೆಯಿಂದಲೂ ಸಾಕಷ್ಟು ಪ್ರಸಿದ್ಧರಾದವರು. ಕನ್ನಡದಲ್ಲಿ 'ಕತೆಯಲ್ಲ, ಜೀವನ', ಅದಕ್ಕೂ ಮೊದಲು ತಮಿಳಿನಲ್ಲಿ 'ಅಚ್ಚುಮಿಲೈ ಅಚ್ಚುಮಿಲೈ' ಕಾರ್ಯರ್ಕ್ರಮದ ಮೂಲಕ ಸಾಮಾಜಿಕ ಕಳಕಳಿ ಮೆರೆದವರು.

    ಇಂಥ 'ಸೌಂದರ್ಯ ಲಕ್ಷ್ಮೀ' ಬಿರುದಿನ ನಟಿ ಲಕ್ಷ್ಮೀ ಯವರ ಹುಟ್ಟುಹಬ್ಬ ಇಂದು. ಇವರ ಜನುಮ ದಿನಾಂಕ, 13.12-1952. ಇವರ ತಂದೆ ಕನ್ನಡದ ಮೊದಲ ಚಿತ್ರ 'ಸತಿ ಸುಲೋಚನಾ' ದ ನಿರ್ದೇಶಕ ವೈ.ವಿ. ರಾವ್. ತಾಯಿ ಹೆಸರಾಂತ ತಮಿಳು ಕಲಾವಿದೆ ಕುಮಾರಿ ರುಕ್ಮಿಣಿ. ಹುಟ್ಟಿದ್ದು ಚೆನ್ನೈನಲ್ಲಿ.

    15 ನೇ ವಯಸ್ಸಿನಲ್ಲಿಯೇ ಲಕ್ಷ್ಮೀ ಅವರ ಮೊದಲನೆ ಚಿತ್ರ ತಮಿಳಿನ ಜೀವನಾಂಶಂ. ಆದರೆ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದು 1975 ರಲ್ಲಿ ಬಂದ ' ಜ್ಯೂಲಿ' ಚಿತ್ರದಿಂದ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಹೀಗೆ ಐದು ಭಾಷೆಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡ ಕಲಾವಿದೆ ಈಕೆ. ಹುಟ್ಟುಹಬ್ಬದ ಆಚರಣೆಯಲ್ಲಿರುವ ಲಕ್ಷ್ಮೀ ಅವರಿಗೆ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)

    English summary
    Today, on 13th December, South Indian Actress Julie Lakshmi Birthday. Her Date of birth is 13.12.1952. 
 
    Tuesday, December 13, 2011, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X