ವಿಷ್ಣುವರ್ಧನ ಒಂದೇ ವಾರದಲ್ಲಿ ಆರು ಕೋಟಿ ಲೂಟ್
ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರ ಬಾಕ್ಸಾಫೀಸಲ್ಲಿ ಒಂದೇ ವಾರದಲ್ಲಿ ಆರು ಕೋಟಿ ಲೂಟಿ ಮಾಡಿದೆ. ಕಳೆದ ವಾರ ರಾಜ್ಯದಾದ್ಯಂತ ತೆರೆಕಂಡ ಈ ಚಿತ್ರವನ್ನು ಚಿತ್ರ ಪ್ರೇಮಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಚಿತ್ರದ ವಿತರಕ ಕುಮಾರ್ ಎಂಎನ್ ಅವರು 'ವಿಷ್ಣುವರ್ಧನ' ಚಿತ್ರ ಒಂದು ವಾರದ ಗಳಿಕೆ ರು.6 ಕೋಟಿ ಎಂದು ಬಹಿರಂಗಪಡಿಸಿದ್ದಾರೆ.
ಒಂದು ಚಿತ್ರ ಯಶಸ್ವಿಯಾಗಬೇಕು ಎಂದರೆ ಆ ಚಿತ್ರಕ್ಕೆ ನಾಯಕ ನಟನ ಪಾತ್ರ ಅತ್ಯಂತ ಮುಖ್ಯ ಎಂದಿರುವ ದ್ವಾರಕೀಶ್, ಸುದೀಪ್ ಅವರ ಪ್ರೊಫೆಷನಲ್ ಗುಣಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿತ್ರದ ಸಂಪೂರ್ಣ ಯಶಸ್ಸು ಸುದೀಪ್ ಅವರಿಗೇ ಸಲ್ಲುತ್ತದೆ ಎಂದಿದ್ದಾರೆ ದ್ವಾರ್ಕಿ.
ಆರಂಭದಿಂದಲೂ ತಮ್ಮ ಚಿತ್ರಕ್ಕೆ ಬಹುತೇಕೆ ಅಡ್ಡಿ ಆತಂಕಗಳು ಎದುರಾದವು. ಅವುಗಳೆಲ್ಲವನ್ನೂ ನಿಭಾಯಿಸಿಕೊಂಡು ಮುನ್ನುಗ್ಗಿ ಚಿತ್ರಕ್ಕೆ ಸಕ್ಸಸ್ ತಂದಿದ್ದು ನಿಜಕ್ಕೂ ಗ್ರೇಟ್ ಎಂದು ದ್ವಾರಕೀಶ್ ತಮ್ಮ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಇಷ್ಟದಿಂದ ಮಾತನಾಡಿದ್ದಾರೆ. (ಏಜೆನ್ಸೀಸ್)
More from Filmibeat
English summary
Sudeep lead Vishnuvardhana first week collections and records! The movie got mixed talk. Despite these mixed talks Vishnuvardhana got huge first week collections.


Click it and Unblock the Notifications











