»   » 'ಜೋಶ್'ನಲ್ಲಿ ಅಪಾರ ವೆಚ್ಚದ ಸುಂದರ ಗೀತೆ

'ಜೋಶ್'ನಲ್ಲಿ ಅಪಾರ ವೆಚ್ಚದ ಸುಂದರ ಗೀತೆ

Subscribe to Filmibeat Kannada

ಹಲವು ಹೊಸತುಗಳ ಹರಿಕಾರ, ವಿಶಿಷ್ಟ ಸಾಧನೆಗಳ ಮಹಾಪೂರರೆಂದೆ ಖ್ಯಾತರಾಗಿರುವ ನಿರ್ಮಾಪಕ ಎಸ್.ವಿ.ಬಾಬು ಅವರ ಪುತ್ರ ಸಂಜಯ್‌ಬಾಬು ನಿರ್ಮಾಣದ 'ಜೋಶ್' ಚಿತ್ರಕ್ಕೆ ನೂತನ ಕಲಾವಿದರ ಅಭಿನಯದಲ್ಲಿ, ಅಪಾರವೆಚ್ಚದಲ್ಲಿ ಸುಂದರ ಗೀತೆಯೊಂದು ಚಿತ್ರೀಕೃತವಾಗಿದೆ.

''ನಮಸ್ಕಾರ ಸಾರ್, ನಾವೆಲ್ಲಾ ನಿಮ್ಮ ಮನೆ ಹುಡುಗರೇನೆ ನಮ್ಮನೆಲ್ಲಾ ನೀವು ಹರಸಿಚಂದವೋ ಚೆಂದ ಚೆಂದ ನಮ್ಮ ಜಮ್ಮಾನ ನೋಡಿರಿ ನೋಡಿ ನೋಡಿ ನಮ್ಮ ಕಥೇನ''ಎಂಬ ಗೀತೆಯನ್ನು ನಗರದ ಬಿ.ಜಿ.ಎಸ್.ಅಂತರರಾಷ್ಟ್ರೀಯ ಶಾಲೆ, ವಂಡರ್ ಲಾ, ವೈಟ್ ಫೀಲ್ಡ್ ನಲ್ಲಿರುವ ಕಂಟೈನಲ್ಸ್ ಕಾರ್ಖಾನೆಯಲ್ಲಿ ನಿರ್ದೇಶಕ ಶಿವಮಣಿ ಚಿತ್ರೀಕರಿಸಿಕೊಂಡರು. ಬಾಲಿವುಡ್‌ನ 'ದಸ್' ಚಿತ್ರಕ್ಕೆ ನೃತ್ಯ ನೀಡಿದ್ದ ಸ್ಟ್ಯಾನ್ಲಿ ಡಿ ಕೋಸ್ಟಾ ಈ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ.

ನಿರ್ದೇಶಕರೇ ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿದೆ. ವರ್ಧನ್ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ, ಸ್ಟಾನ್ಲಿ ಡಿ ಕೋಸ್ಟಾ, ನೊಬಲ್ ಹಾಗೂ ಬೃಂದಾ ನೃತ್ಯ, ಬಿ.ಎ.ಮಧು ಸಂಭಾಷಣೆ, ರವೀಶ್ ಸಹನಿರ್ದೇಶನ ಹಾಗೂ ಮೈಸೂರುಕೃಷ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣುಪ್ರಸನ್ನ, ಅಕ್ಷಯ್, ಅಲೋಕ್, ಜಗನ್ನಾಥ್, ಅಮಿತ್, ರೋಬೊಗಣೇಶ್, ಪೂರ್ಣ, ಸ್ನೇಹ, ಚೇತನ್, ನಾಯಕಿಯಾಗಿ ನಿತ್ಯಾ, ಮಂಡ್ಯರಮೇಶ್, ಕರಿಬಸವಯ್ಯ, ಮನದೀಪ್‌ರಾಯ್, ಶ್ರೀನಿವಾಸಪ್ರಭು, ಸುಧಾಬೆಳವಾಡಿ, ತುಳಸಿಶಿವಮಣಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ನಿತ್ಯಾ ಎಂಬ ಚಿಗರೆ ಕಂಗಳ ಪೋರಿಯ ಚಿತ್ರಮಾಲಿಕೆ
ಜೈಪುರದಲ್ಲಿ ಜೋಶ್ಹಾಡಿಗೆ ಕುಣಿದ ಹುಡುಗರು
ಕನ್ನಡಕ್ಕೆ ರಾಘವೇಂದ್ರ ಎಂಬ ಚಾಕ್ಲೆಟ್ ಹೀರೊ !
ನಿತ್ಯಾ ಎಂಬ ಮಂಗಳೂರು ಪೋರಿ ಸೆರೆ ಸಿಕ್ಕಳು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada