twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾಗಿ ತಾರಾ

    By Prasad
    |

    Actress Tara
    ಬೆಂಗಳೂರು, ಮಾ. 13 : ಖ್ಯಾತ ಕನ್ನಡ ಚಲನಚಿತ್ರ ಕಲಾವಿದೆ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ವೇಣು ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಇವರ ಕಾಲಾವಧಿ ಮೂರು ವರ್ಷ. ಈ ಮೊದಲು ನಿರ್ದೇಶಕ ಟಿಎಸ್ ನಾಗಾಭರಣ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದರು.

    ತಾರಾ ಅವರ ಜೊತೆ ಮತ್ತೊಬ್ಬ ಖ್ಯಾತ ತಾರೆ 'ಗಿರಿಕನ್ಯೆ' ಜಯಮಾಲಾ ಅವರ ಹೆಸರು ಕೂಡ ಕೇಳಿ ಬಂದಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿರುವ ಅವರ ಹೆಸರು ಮುಂಚೂಣಿಯಲ್ಲಿತ್ತು. ಅಂತಿಮವಾಗಿ ತಾರಾ ಅವರಿಗೆ ಈ ಪಟ್ಟ ಒಲಿದಿದೆ.

    ಈ ಹುದ್ದೆಗೆ ಅನುರಾಧಾ ಅಲಿಯಾಸ್ ತಾರಾ ಅವರು ನಿಜಕ್ಕೂ ಅರ್ಹ ವ್ಯಕ್ತಿ. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅಭಿನಯದ ಮುಖಾಂತರ ಚಿತ್ರರಸಿಕರ ಮನ ಗೆದ್ದಿರುವ ತಾರಾ ಅವರು ರಂಗದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ ಮತ್ತು ಚಿತ್ರರಂಗದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಪಿ. ಶೇಷಾದ್ರಿಯವರ ಹಸೀನಾ ಚಿತ್ರದಲ್ಲಿ ನೀಡಿದ ಅದ್ಭುತ ಅಭಿನಯಕ್ಕಾಗಿ 2005ರಲ್ಲಿ ತಾರಾ ಅವರು ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಕೂಡ ಪಡೆದಿದ್ದಾರೆ.

    ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ದುಡಿದಿರುವ ತಾರಾ ಅವರು ಕನ್ನಡವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕೂಡ ಅಭಿನಯ ಚಾತುರ್ಯವನ್ನು ಮೆರೆದಿದ್ದಾರೆ. ಆರಂಭದಲ್ಲಿ ಅಕ್ಕ ತಂಗಿಯ ಪಾತ್ರಗಳನ್ನೇ ಮಾಡುತ್ತಿದ್ದ ತಾರಾ ಅವರಿಗೆ ಉತ್ತಮ ಬ್ರೇಕ್ ನೀಡಿದ ಚಿತ್ರ ಕಾನೂರು ಹೆಗ್ಗಡತಿ. ಆ ಚಿತ್ರದ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಭಿಸಿತು. ಸೈನೈಡ್, ದಿ ಇನ್ ಸೈಡ್ ಸ್ಟೋರಿ ಚಿತ್ರ ಕೂಡ ಅವರಿಗೆ ಉತ್ತಮ ಹೆಸರು ತಂದು ಕೊಟ್ಟಿತು. ಸದ್ಯಕ್ಕೆ ಅವರು ರಾಜಕಾರಣಿಯಾಗಿಯೂ ಮಿಂಚುತ್ತಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ)ಯನ್ನು ಸೇರಿದ್ದಾರೆ.

    English summary
    National award winning Kannada actress Tara has been elected as new president of Karnataka film academy. Tara will replace director TS Nagabharana as the academy president. Actress Jayamala's name was also in the list of probables.
    Tuesday, June 5, 2012, 14:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X