ದೋಸ್ತಿಗಳ ವಿಷ್ಯದಲ್ಲಿ 13 ವರ್ಷದ ಹಿಂದೆ ನಡೆದ ಘಟನೆ ಮತ್ತೆ ಮರುಕಳಿಸುತ್ತಾ?

Recommended Video

13 ವರ್ಷದ ಹಿಂದೆ ನಡೆದ ಆ ಘಟನೆ ಏನು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ಸ್ನೇಹ ಸದ್ಯಕ್ಕೆ ಹೇಳಿಕೊಳ್ಳುವಂತಿಲ್ಲ. ಇಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ ಭೇಟಿಯಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಕುಚುಕು ಗೆಳೆಯರಂತಿದ್ದ ದಾಸ ಮತ್ತು ಕಿಚ್ಚ ಒಂದೇ ವೇದಿಕೆ ಹಂಚಿಕೊಂಡು ವರ್ಷಗಳೇ ಕಳೆದುಹೋಗಿದೆ.

ಹೀಗಿರುವಾಗ ಇವರಿಬ್ಬರ ಸಿನಿಮಾ ಒಂದೇ ದಿನ ತೆರೆಗೆ ಬರುವ ತಯಾರಿ ನಡೆಸಿದೆ. ಸುದೀಪ್ ಅಭಿನಯದ ಪೈಲ್ವಾನ್ ಮತ್ತು ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.

ಈ ಎರಡು ಸಿನಿಮಾ ಒಟ್ಟಿಗೆ ಬರುವುದರಿಂದ ಬಾಕ್ಸ್ ಆಫೀಸ್ ನಲ್ಲಿ ಕಾಳಗ ಆಗುತ್ತೆ, ಫ್ಯಾನ್ಸ್ ವಾರ್ ಆಗುತ್ತೆ, ಪೈಪೋಟಿ ಹೆಚ್ಚಾಗುತ್ತೆ ಎಂದೆಲ್ಲಾ ಹೇಳುತ್ತಿದ್ದಾರೆ. ಅಂದ್ಹಾಗೆ, ಇವರಿಬ್ಬರ ವಿಷ್ಯದಲ್ಲಿ ಇಂತಹದೊಂದು ಘಟನೆ 13 ವರ್ಷಗಳ ಹಿಂದೆಯೇ ಆಗಿದೆ. ಈಗ ಆಗುವುರದಲ್ಲಿ ಹೊಸದೇನು ಇಲ್ಲ. ಹೌದು, ಏನಿದು ಘಟನೆ? ಮುಂದೆ ಓದಿ.....

ಪೈಲ್ವಾನ್ vs ಕುರುಕ್ಷೇತ್ರ

ಪೈಲ್ವಾನ್ vs ಕುರುಕ್ಷೇತ್ರ

ಮೊದಲೇ ದರ್ಶನ್ ಮತ್ತು ಸುದೀಪ್ ನಡುವೆ ಸಂಬಂಧ ಚೆನ್ನಾಗಿಲ್ಲ. ಹೀಗಿರುವಾಗ ಈ ಎರಡು ಚಿತ್ರಗಳು ಒಟ್ಟಿಗೆ ಬಂದ್ರೆ ಅದು ಆರೋಗ್ಯಕರ ಬೆಳವಣಿಗೆ ಆಗಲ್ಲ. ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂಬುದು ಗಾಂಧಿನಗರದ ಹಿರಿಯ ಚಿತ್ರೋಧ್ಯಮಿಗಳ ಅಭಿಪ್ರಾಯ. ಬಟ್, ಸಾಮಾನ್ಯವಾಗಿ ವಾರಕ್ಕೆ ನಾಲ್ಕೈದು ಸಿನಿಮಾಗಳು ಬರುತ್ತೆ. ಅದೇ ರೀತಿ ಇವರಿಬ್ಬರ ಸಿನಿಮಾನೂ. ಏನೂ ಎಫೆಕ್ಟ್ ಆಗಲ್ಲ ಎಂಬ ಮಾತು ಕೂಡ ಇದೆ.

13 ವರ್ಷದ ಹಿಂದಿನ ಘಟನೆ

13 ವರ್ಷದ ಹಿಂದಿನ ಘಟನೆ

ಹಾಗ್ನೋಡಿದ್ರೆ 13 ವರ್ಷಗಳ ಹಿಂದೆ ಇವರಿಬ್ಬರು ಮುಖಾಮುಖಿ ಆಗಿದ್ದರು. ಆಗ ಇಬ್ಬರೂ ಆಪ್ತ ಸ್ನೇಹಿತರೇ ಆಗಿದ್ದರು. ಆದರೂ ಒಂದೇ ದಿನ ಇಬ್ಬರ ಚಿತ್ರಗಳನ್ನ ಬಿಡುಗಡೆ ಮಾಡಿದ್ದರು. ಅದೃಷ್ಟ ಅಂದ್ರೆ ಎರಡೂ ಸಿನಿಮಾನೂ ಹಿಟ್ ಆಯ್ತು. ಇಂದಿಗೂ ಆ ಎರಡು ಚಿತ್ರಗಳು ಒಳ್ಳೆಯ ಅಭಿಪ್ರಾಯವೇ ಹೊಂದಿದೆ.

ಆಟೋಗ್ರಾಫ್ vs ಸುಂಟರಗಾಳಿ

ಆಟೋಗ್ರಾಫ್ vs ಸುಂಟರಗಾಳಿ

ಮಾಸ್ ಗೆ ಹೇಳಿ ಮಾಡಿಸಿದ್ದ ಸಿನಿಮಾ ಸುಂಟರಗಾಳಿ ಮತ್ತು ಕ್ಲಾಸ್ ಗೆ ಸೂಕ್ತವಾಗಿದ್ದ ಮೈ ಆಟೋಗ್ರಾಫ್ ಚಿತ್ರಗಳು 2006 ಫೆಬ್ರವರಿ 17 ರಂದು ತೆರೆಕಂಡಿತ್ತು. ದರ್ಶನ್ ಹುಟ್ಟುಹಬ್ಬ ಆಗಿ ಒಂದು ದಿನದ ಬಳಿಕ ಈ ಸಿನಿಮಾಗಳು ರಿಲೀಸ್ ಆಗಿತ್ತು. ಅಲ್ಲಿಗೆ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಸಂಭ್ರಮ ಹೆಚ್ಚಿಸಿತ್ತು.

ಆಗ ಬೇರೆ ಸಂದರ್ಭ, ಈಗ ಬೇರೆ ಸಂದರ್ಭ

ಆಗ ಬೇರೆ ಸಂದರ್ಭ, ಈಗ ಬೇರೆ ಸಂದರ್ಭ

13 ವರ್ಷಗಳ ಹಿಂದೆ ಎಲ್ಲವೂ ಕೂಲ್ ಆಗಿತ್ತು. ಸಿನಿಮಾ, ಪ್ರಚಾರ ಅಂದ್ರೆ ಕೇವಲ ಟಿವಿ (ಒಂದೆರಡು ಚಾನಲ್ ಮಾತ್ರ) ಮತ್ತು ಪತ್ರಿಕೆಗಳಲ್ಲಿಯೇ ಓದಿ ತಿಳಿಯಬೇಕಿತ್ತು. ಈಗ ಕಾಲಾ ಬದಲಾಗಿದೆ. 24/7 ಸುದ್ದಿವಾಹಿನಿಗಳು, ಸೋಶಿಯಲ್ ಮೀಡಿಯಾ ಎಂಬ ತಂತ್ರಜ್ಞಾನದಲ್ಲಿ ನಾವುಗಳಿದ್ದು, ಅಭಿಮಾನಿಗಳು ಕೂಡ ಅದಕ್ಕೆ ಹೊಂದಿ ಕೊಂಡಿದ್ದಾರೆ.

ಯಾರಾದರೂ ಮುಂದಕ್ಕೆ ಹೋಗಬಹುದು.!

ಯಾರಾದರೂ ಮುಂದಕ್ಕೆ ಹೋಗಬಹುದು.!

ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಆಗಸ್ಟ್ 8 ರಂದೆ ನಾವು ಬರೋದು ಎಂದು ಗಟ್ಟಿಯಾಗಿ ಹೇಳಿದ್ದಾರೆ. ಈ ಕಡೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಿವಿ ಎಂದಿರುವ ಪೈಲ್ವಾನ್ ತಂಡ ದಿನಾಂಕ ಘೋಷಿಸಿಲ್ಲ. ಇನ್ನೂ ಸಮಯವಕಾಶ ಇದೆ. ಆರೋಗ್ಯಕರ ದೃಷ್ಟಿಯಿಂದ ಯಾರಾದರೂ ಮುಂದಕ್ಕೆ ಹೋಗಬಹುದು ಎಂಬ ನಿರೀಕ್ಷೆ ಇದೆ. ಕಾದು ನೋಡೋಣ.

More from Filmibeat

English summary
13 Years back sudeep starrer my autograph and darshan starrer suntaragaali movies has released same day (february 17th 2006). now Darshan kurukshetra and sudeep pailwaan movies have decided to come on varamahalakshmi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X