ಚೂರುಪಾರು: ಉಪ್ಪಿಗೆ ನಾಯಕಿ ರಾಧಿಕಾ
- ಸಿನಿಡೆಸ್ಕ್, ದಟ್ಸ್‌ಕನ್ನಡ
- ಕೆ.ಸಿ.ಎನ್.ಕುಮಾರ್ ನಿರ್ಮಾಣದ ಹೊಸ ಚಿತ್ರ ಸೆಟ್ಟೇರಿದ ಕೂಡಲೆ ನಿರ್ದೇಶಕರು ಬದಲಾಗಿದ್ದಾರೆ. ಮೊದಲು ಕೆ.ವಿ.ರಾಜು ಇದ್ದರು. ಈಗ ಸಾಯಿಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ಸುದೀಪ್- ರಕ್ಷಿತಾ ಜೋಡಿಯ ಹೊಸ ಚಿತ್ರವಿದು.
- ಕೆ.ಶಿವರಾಮು ನಟನೆಯ ‘ ತಾಖತ್ ’ ಎಂಬ ಚಿತ್ರದ ಹೆಸರು ‘ನಾಗ ’ ಎಂದು ಬದಲಿಸಲಾಗಿದೆ. ಹಾಗೆಯೇ
- ರಾಧಿಕಾ ನಟನೆಯ ತವರಿನ ಕನಸು ಚಿತ್ರಕ್ಕೆ ‘ಹೆತ್ತವರ ಕನಸು’ ಎಂದು ಸಾಯಿಪ್ರಕಾಶ್ ಮರು ನಾಮಕರಣ ಮಾಡಿದ್ದಾರೆ. ಕನ್ನಡ ಚಿತ್ರದಲ್ಲೀಗ ಬದಲಾವಣೆಯ ಕಾಲ!
- ‘ ಮೌರ್ಯ ’ ಚಿತ್ರದ ತಂದೆಯ ಪಾತ್ರದ ನಂತರ,‘ಗೌರಮ್ಮ ’ ಚಿತ್ರದಲ್ಲೂ ತಂದೆಯ ಪಾತ್ರ ಮಾಡುವಂತೆ ದೇವರಾಜ್‌ಗೆ ಆಫರ್ ಬಂದಿತ್ತಂತೆ. ಆದರೆ ಕೆಂಡಾಮಂಡಲವಾದ ದೇವರಾಜ್, ಆ ಪಾತ್ರ ನಿರಾಕರಿಸಿದ್ದಾರಂತೆ. ಈಮುನ್ನ ಖಾಕಿಗೆ ಬ್ರಾಂಡ್ ಆದಂತೆ, ಈಗ ಅಪ್ಪನ ಪಾತ್ರಕ್ಕೆ ಬ್ರಾಂಡ್ ಆಗುವ ಭಯ ದೇವರಾಜ್‌ರದು. ಅಂದಹಾಗೆ, ಇದೀಗ ಗೌರಮ್ಮ ಚಿತ್ರದ ಅಪ್ಪನ ಪಾತ್ರಕ್ಕೆ ಅಂಬರೀಷ್‌ರನ್ನು ಓಲೈಸುವ ಪ್ರಯತ್ನ ನಡೆದಿದೆ. ಗೌಡ್ರು ಒಪ್ಪಿಕೊಳ್ತಾರಾ?
- ಉಪೇಂದ್ರರ ಎದುರ ಎರಡನೇ ನಾಯಕಿಯಾಗಿ ‘ಆಟೋ ಶಂಕರ್’ ಚಿತ್ರದಲ್ಲಿ ರಾಧಿಕಾ ನಟಿಸುತ್ತಿದ್ದಾರೆ.
- ಬರಗೂರು ರಾಮಚಂದ್ರಪ್ಪನವರ ‘ಜಾನಪದ ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಅಂದರೆ ಇನ್ನೊಂದು ಪ್ರಶಸ್ತಿ ?
- ‘ಹೆಂಡತಿಯಾಬ್ಬಳು ಮನೆಯಾಳಗಿದ್ದರೆ ’ ಚಿತ್ರದಲ್ಲಿ ಶರಣ್, ಶಿವಾನಿ ಮಾದಕವಾಗಿ ನರ್ತಿಸಿರುವ ಇಡೀ ಹಾಡೊಂದಕ್ಕೆ ಕತ್ತರಿ ಪ್ರಯೋಗ ಮಾಡಬೇಕೆಂದು ಸೆನ್ಸಾರ್ ಮಂಡಳಿ ಹೇಳಿದೆಯಂತೆ. ನಿರ್ಮಾಪಕ ಕೃಷ್ಣೇಗೌಡರು ಕಂಗಾಲಾಗಿದ್ದಾರೆ.
- ‘ಈಶ ’ ಚಿತ್ರದಲ್ಲಿ ತಾರಾ, ನಾಯಕಿ ನೀತಾಳ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಚಿತ್ರ ಸೆಟ್ಟೇರುವ ಮುಂಚೆಯೇ ಕುಂಟುತ್ತಿರುವುದರಿಂದ, ನೀತಾ, ತಾರಾ ಇಬ್ಬರೂ ಬಚಾವಾಗಿದ್ದಾರೆ ಎಂಬುದು ಗಾಂಧಿನಗರದ ಕುಹಕ. ಅಂದಹಾಗೆ ನೀತಾ,‘ಜೋಕ್ ಫಾಲ್ಸ್ ’ ನಲ್ಲಿ ರಮೇಶ್‌ಗೆ ಸರಿಸಾಟಿ ಅಭಿನಯ ನೀಡಿ ಗಮನ ಸೆಳೆದವಳು.
- ಗಾಯಕಿ ನಂದಿತಾ ಸಂಗೀತಾ ನಿರ್ದೇಶಕಿಯಾಗಲು ತಯಾರಿ ನಡೆಸುತ್ತಿದ್ದಾರೆ. ಆಲ್ ದಿ ಬೆಸ್ಟ್ .
- ಜೋಗಿ ಚಿತ್ರತಂಡ ರಾಜಸ್ಥಾನದಲ್ಲಿ ಚಿತ್ರೀಕರಣ ಮುಗಿಸಿ ನಗರಕ್ಕೆ ವಾಪಸಾಗಿದೆ.
- ಚಂದ್ರಚಕೋರಿ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಮಿಂಚಿದ ಶ್ರೀನಗರ ಕಿಟ್ಟಿ ಈಗ ನಾಯಕ ನಟರಾಗುತ್ತಿದ್ದಾರೆ. ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರದ ಹೆಸರು ‘ಗಿರಿ’.
- ಕೋಡ್ಲು ರಾಮಕೃಷ್ಣ ಮತ್ತೊಂದು ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ, ಚಿತ್ರದ ಹೆಸರು ಇಂಡಿಯಾ- ಪಾಕಿಸ್ತಾನ. ಹೆಸರು ಚೆನ್ನಾಗಿದೆ ಅಲ್ವಾ? ಚಿತ್ರ ಹೇಗಿರುತ್ತೋ....?
- ರಾಕ್‌ಲೈನ್ ವೆಂಕಟೇಶ್‌ರ ನಿರ್ಮಾಣದ ‘ಮೌರ್ಯ’ ಚಿತ್ರದ ಯಶಸ್ಸಿನ ಬೆನ್ನಿಗೇ ರಾಕ್‌ಲೈನ್‌ರ ಇನ್ನೊಂದು ಚಿತ್ರ, ‘ವರ್ಷ ’ ಸಿದ್ಧಗೊಳ್ಳುತ್ತಿದೆ . ಇದಾದ ನಂತರ ವಿಷ್ಣುವರ್ಧನ್ ಮತ್ತು ಉಪೇಂದ್ರ ಅವರನ್ನು ಹಾಕಿಕೊಂಡು ಒಂದು ಚಿತ್ರ ಮಾಡುವ ಉತ್ಸಾಹ ರಾಕ್‌ಗಿದೆ. ಇದನ್ನು ನಾಗಭರಣ ನಿರ್ದೇಶಿಸಲಿದ್ದಾರೆ.
- 2003-04ರ ಸಾಲಿನ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದಿರುವ ಅಮಾಸ ಚಿತ್ರದ ಅಮೋಘ ವರ್ಷ ಬೆಂಗಳೂರಿನ ವಿಜಯ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ. ಈ ಹುಡುಗ ಲೇಖಕ ಕೋಟಗಾನಹಳ್ಳಿ ರಾಮಯ್ಯನವರ ಮಗ. ಎಂ.ಟೆಕ್.ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಬಯಕೆ ಅಮೋಘ ವರ್ಷನಿಗೆ.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications