ನಟ ದೇವರಾಜ್ ಪುತ್ರ ಪ್ರಜ್ವಲ್ ಪ್ರಜ್ವಲಿಸುವನೇ?
ಗುರುವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಪ್ರಜ್ವಲ್ ಅಭಿನಯದ ಹೊಸ ಚಿತ್ರ‘ಸಿಕ್ಸರ್’ ಆರಂಭಗೊಂಡಿದೆ. ನಟ ಪುನೀತ್‌ರಾಜ್‌ಕುಮಾರ್ ಈ ಸಂದರ್ಭದಲ್ಲಿ ಶುಭಕೋರಿದರು.
ದೇವಕಿ ಮತ್ತು ಸ್ಮಿತಾ ಚಿತ್ರದ ಇಬ್ಬರು ನಾಯಕಿಯರಾಗಿ ಆಯ್ಕೆಗೊಂಡಿದ್ದಾರೆ. ಉಷಾಕಿರಣ್ ಮೂವೀಸ್ ನಿರ್ಮಾಣದ ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸುತ್ತಿದ್ದಾರೆ.
ನೀಳಕಾಯದ, ಚಾಕಲೇಟ್ ಹೀರೋನಂತಿರುವ ಪ್ರಜ್ವಲ್ ಬಿಬಿಎಂನ ಮೊದಲ ವರ್ಷದ ವಿದ್ಯಾರ್ಥಿ. ನನ್ನ ಚಿತ್ರಕ್ಕೆ ನಾನೇ ಧ್ವನಿ ನೀಡುತ್ತೇನೆ ಎನ್ನುವ ಪ್ರಜ್ವಲ್‌ಗೆ ಖಳನಾಯಕನ ಪಾತ್ರ ಮಾಡಲು ಆಸಕ್ತಿ ಇಲ್ಲ. ಪ್ರಜ್ವಲ್ ಎಂಟ್ರಿ ಮೂಲಕ ಮತ್ತೊಬ್ಬ ತಾರಾಕುಮಾರ, ಸ್ಯಾಂಡಲ್‌ವುಡ್‌ಗೆ ಜಿಗಿದಂತಾಗಿದೆ.
ರಾಜ್‌ಕುಮಾರ್, ತೂಗುದೀಪ ಶ್ರೀನಿವಾಸ್, ರಾಜೇಂದ್ರ ಸಿಂಗ್ ಬಾಬು, ಶ್ರೀನಿವಾಸ ಮೂರ್ತಿ ಮತ್ತಿತರ ಚಿತ್ರಗಣ್ಯರ ಪುತ್ರರು ಈಗಾಗಲೇ ಗಾಂಧಿನಗರದಲ್ಲಿ ಗೆದ್ದಿದ್ದಾರೆ... ಬಿದ್ದಿದ್ದಾರೆ. ಪ್ರಜ್ವಲ್ ಚಿತ್ರ ಬದುಕು ಪ್ರಜ್ವಲಿಸಲಿ ಎಂದು ದಟ್ಸ್‌ಕನ್ನಡ ಹಾರೈಸುತ್ತದೆ.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications