»   » ತಂಗ್ಯಮ್ಮನ ಬಂಗಲೆಯಿಂದ, ರಕ್ಷಮ್ಮನ ಮದ್ವೆವರೆಗೆ! ಅಲ್ಲಿಂದ...

ತಂಗ್ಯಮ್ಮನ ಬಂಗಲೆಯಿಂದ, ರಕ್ಷಮ್ಮನ ಮದ್ವೆವರೆಗೆ! ಅಲ್ಲಿಂದ...

Posted By:
Subscribe to Filmibeat Kannada


ಡಾಲರ್ಸ್‌ ಕಾಲನಿಯಲ್ಲಿ ಕರ್ನಾಟಕದ ತಂಗ್ಯಮ್ಮ(ಅದೇ ಸ್ವಾಮಿ ನಮ್ಮ ಗುಡ್‌ಲಕ್‌ ರಾಧಿಕಾ) ಒಂದು ಬಂಗಲೆಯಂಥ ಮನೆ ಖರೀದಿಸಿದ್ದಾರಂತೆ! ಆ ಮನೆ ಬೆಲೆ ಕೇವಲ 13ಕೋಟಿ ರೂ. ಎನ್ನುವುದು ಗಾಂಧಿನಗರದಲ್ಲಿ ಸದ್ಯದ ಪಿಸುಗುಸು. ಕರಾವಳಿ ನಗುವಿನ ರಾಧಿಕಾ, ಗೃಹಪ್ರವೇಶಕ್ಕೆ ಕರೀತಾರಾ?
*
‘ಸುಂಟರಗಾಳಿ’ ರಕ್ಷಿತಾ, ಈಗ ತಂಗಾಳಿಯಂತೆ. ಯಾರ ಪಾಲಿಗೆ ಅನ್ನುವ ಪ್ರಶ್ನೆ ಮಾತ್ರ ಕೇಳುವಂತಿಲ್ಲ. ಮಾರ್ಚ್‌ನಲ್ಲಿ ಪ್ರೇಮ್‌ ಜೊತೆ ಮದುವೆಯಾಗುವುದಾಗಿ ಅವರು ಈಗಾಗಲೇ ಘೋಷಿಸಿದ್ದಾರೆ. ಹೊಸ ಹೆಂಡತಿ ಬರೋ ಖುಷಿಯಲ್ಲಿ, ಪ್ರೇಮ್‌ ಹೊಸ ಮನೆ ಮೇಲೆ ಖರೀದಿಸಿದ್ದಾರಂತೆ!
*
ಮಾನ್ಯಅವರಿಗೆ ಒಂದು ಸಂಶಯ. ನನ್ನ ಬಿಕಿನಿ ಪುರಾಣವನ್ನು ಯಾರು ನಂಬುತ್ತಿಲ್ಲ ಎನ್ನುವ ಸಂದೇಹ. ಹೀಗಾಗಿ ಪತ್ರಿಕಾಗೋಷ್ಠಿಗೆ ತಮ್ಮ ತಾಯಿಯನ್ನು ಕರೆತಂದಿದ್ದರು. ನಮ್ಮ ತಾಯಾಣೆಗೂ ನಾನು ಹೇಳಿದ್ದೆಲ್ಲ ಸತ್ಯ ಎಂದು ಆಣೆ ಮಾಡಿದರು!
*
ಸಂಕ್ರಾಂತಿ ದಿನ(ಜ.15) ‘ಭೂಪತಿ’ ಕ್ಯಾಸೆಟ್‌ ಬಿಡುಗಡೆಯಾಗುತ್ತಿದೆ. ಇದು ದರ್ಶನ್‌ರ 25ನೇ ಚಿತ್ರ.
*
‘ಈ ರಾಜೀವ್‌... ಗಾಂಧಿ ಅಲ್ಲ’, ‘ತಾಯಿಯ ಮಡಿಲು’ --ಇವು ಸದ್ಯಕ್ಕೆ ರಕ್ಷಿತಾರ ಕಡೆಯ ಸಿನಿಮಾಗಳು. ಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಂಡಿಲ್ಲ... ಒಪ್ಪಿಕೊಳ್ಳುವುದೂ ಇಲ್ಲವಂತೆ. ‘ಮದುವೆಯಾದ ಮೇಲೆ ಕಂಡೋರ ಜೊತೆ ಹೆಂಡತಿಯಾದವಳು, ಹಾಡಿ ಕುಣಿದರೆ ಏನ್‌ ಚೆನ್ನಾಗಿರುತ್ತೆ’ ಅನ್ನೋದು ರಕ್ಷಿತಾ ನೀಡೋ ಸಮಜಾಯಿಷಿ.
*
ರಕ್ಷಿತಾರಂತೆಯೇ, ಮದುವೆ ನಂತರ ಐಶ್ವರ್ಯ ರೈ ಚಿತ್ರರಂಗಕ್ಕೆ ಗುಡ್‌ ಬೈ ಹೇಳ್ತಾರಂತೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅಭಿಷೇಕ್‌ ಬಚ್ಚನ್‌ಗೆ ಈ ಹೇಳಿಕೆ ಖುಷಿ ನೀಡಿರಬಹುದು!
*
ಅತ್ಯಂತ ಕಷ್ಟಪಟ್ಟು ‘ತನನಂ ತನನಂ’, ‘ಕೇರಾಫ್‌ ಫುಟ್‌ ಪಾತ್‌’, ಮತ್ತು ‘ಕನ್ನಡದ ಕಂದ’ 50ದಿನ ಪೂರೈಸಿವೆ.
ನಿಮ್ಮ ಅನಿಸಿಕೆ ಬರೆಯಿರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada