»   » ‘ಕಾವೇರಿ’ಸಿದ ಕನ್ನಡ ಚಿತ್ರೋದ್ಯಮ.. ಅಂಬಿ ನಾಪತ್ತೆ!

‘ಕಾವೇರಿ’ಸಿದ ಕನ್ನಡ ಚಿತ್ರೋದ್ಯಮ.. ಅಂಬಿ ನಾಪತ್ತೆ!

Posted By: Staff
Subscribe to Filmibeat Kannada
After Karnataka bandh that brought life to a grinding halt yesterday, Kannada filmdom today took out a procession in the city against the Cauvery River Disputes Tribunal final verdict.
ಬೆಂಗಳೂರು : 'ಕಾವೇರಿ ನಮ್ಮದು" ಎನ್ನುವ ಘೋಷಣೆ ಕೂಗುತ್ತ ಕನ್ನಡ ಚಿತ್ರೋದ್ಯಮ ಮಂಗಳವಾರ ಬೀದಿಗಿಳಿಯಿತು. ಕಾವೇರಿಗಾಗಿ ಹಕ್ಕೋತ್ತಾಯವನ್ನು ಮಂಡಿಸಿತು.

ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಪ್ರತಿಭಟಿಸಿ ನಡೆದ ಚಿತ್ರೋದ್ಯಮದ ಬೃಹತ್‌ ಮೆರವಣಿಗೆಯಲ್ಲಿ ವಿಷ್ಣುವರ್ಧನ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ತಾರಾ, ಮಾಲಾಶ್ರೀ, ಜಯಂತಿ ಮತ್ತಿತರ ನಟ-ನಟಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು, ಹಂಚಿಕೆದಾರರು ಸೇರಿದಂತೆ ಅನೇಕರು ಹಾಜರಿದ್ದರು. ಶಕ್ತಿಪ್ರದರ್ಶನದಂತೆ ಕಂಡು ಬಂದ ಚಿತ್ರೋದ್ಯಮದ ಮೆರವಣಿಗೆ, ತನ್ನ ಒಗ್ಗಟ್ಟನ್ನು ಪ್ರದರ್ಶಿಸಿತು. ನಾಡಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ರವಾನಿಸಿತು.

ರಾಜಭವನಕ್ಕೆ ಮೆರವಣಿಗೆ ಮೂಲಕ ತೆರಳಿದ ಚಿತ್ರೋದ್ಯಮದ ಪ್ರಮುಖರು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ನಾಡಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದರು. 3000ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 2000 ಪೊಲೀಸರು ಶಾಂತಿಸುವ್ಯವಸ್ಥೆ ಕಾರ್ಯ ನಿರ್ವಹಿಸಿದರು.

ಕಾವೇರಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಯಲಿದೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಈ ಸಂದರ್ಭದಲ್ಲಿ ಸ್ಪಷ್ಪಪಡಿಸಿದ್ದಾರೆ. ಪ್ರತಿಭಟನಾ ಮೆರವಣಿಗೆಯಿಂದಾಗಿ ಇಂದು ಮಧ್ಯಾಹ್ನದ ವರೆಗೆ ರೇಸ್‌ ಕೋರ್ಸ್‌ ರಸ್ತೆ, ಕುಮಾರ ಕೃಪಾ ಮತ್ತು ರಾಜಭವನದ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅಂಬರೀಷ್‌ ಗೈರು ಹಾಜರಿ ಎದ್ದು ಕಾಣುತ್ತಿತ್ತು.
(ಯುಎನ್‌ಐ)

English summary
After Karnataka bandh that brought life to a grinding halt yesterday, Kannada filmdom today took out a procession in the city against the Cauvery River Disputes Tribunal final verdict.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada