»   » ‘ಅಪ್ಪು’ ಯಶಸ್ಸು ಹಾಗೂ ಅದರ ತೆಲುಗು ರೀಮೇಕ್‌ ‘ಈಡಿಯಟ್‌’ನ ಗ್ಲ್ಯಾಮರಸ್‌ ಫೇಮ್‌ನಿಂದ ಎತ್ತರಕ್ಕೇರಿದ ರಕ್ಷಿತಾಗೆ ತಮಿಳು ನಾಯಕಿಯಾಗುವ ಅವಕಾಶ ಬಂದಿದೆ.

‘ಅಪ್ಪು’ ಯಶಸ್ಸು ಹಾಗೂ ಅದರ ತೆಲುಗು ರೀಮೇಕ್‌ ‘ಈಡಿಯಟ್‌’ನ ಗ್ಲ್ಯಾಮರಸ್‌ ಫೇಮ್‌ನಿಂದ ಎತ್ತರಕ್ಕೇರಿದ ರಕ್ಷಿತಾಗೆ ತಮಿಳು ನಾಯಕಿಯಾಗುವ ಅವಕಾಶ ಬಂದಿದೆ.

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡಿದ ಪುನೀತ್‌ ನಾಯಕತ್ವದ ಚೊಚ್ಚಲ ಚಿತ್ರ ‘ಅಪ್ಪು’ವಿನ ತೆಲುಗು ರೀಮೇಕ್‌ ಈಡಿಯಟ್‌ ಕೂಡ ದುಡ್ಡು ಮಾಡಿದ್ದು ತಮಿಳರಿಗೆ ಸ್ಫೂರ್ತಿ ತಂದಿದೆ. ಅಪ್ಪು ತಮಿಳಿಗೂ ರೀಮೇಕಾಗುತ್ತಿದ್ದಾನೆ.

‘ಧಂ’ ಎಂಬ ಹೆಸರಿನ ಈ ಚಿತ್ರಕ್ಕೆ ಸಿಲಂಬರಸನ್‌ ಎಂಬ ತಮಿಳು ನಿರ್ಮಾಪಕರ ಜೊತೆಗೆ ರಾಕ್‌ಲೈನ್‌ ವೆಂಕಟೇಶ್‌ ಕೂಡ ಹಣ ಹೂಡುತ್ತಿದ್ದಾರೆ. ತಮಿಳು ರೀಮೇಕಿಗೆ ದೇವ ಸಂಗೀತವಿರುವುದು ಬೋನಸ್ಸು. ಎ.ವೆಂಕಟೇಶ್‌ ಚಿತ್ರವನ್ನು ನಿರ್ದೇಶಿಸಲಿದ್ದು , ಏಪ್ರಿಲ್‌ನಲ್ಲಿ ತೆರೆ ಕಾಣಲಿದೆ.

ಈಡಿಯಟ್‌ನಲ್ಲಿ ಮಿಂಚಿ, ತೆಲುಗು ಬಿಡ್ಡಾಗಳ ಮನಗೆದ್ದ ರಕ್ಷಿತಾ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ನಾಯಕಿಯಾಗಿ ಕಾಲಿಡುತ್ತಿದ್ದಾಳೆ. ಅಲ್ಲಿಗೆ, ‘ಅಪ್ಪು’ ಯಶಸ್ಸಿನ ಮೂರು ಪಟ್ಟು ಲಾಭ ರಕ್ಷಿತಾಗೆ ದಕ್ಕಿದಂತಾಯಿತು.

ಆದರೆ, ಅಪ್ಪು ಚಿತ್ರದ ಯಶಸ್ಸಿನಿಂದ ಎತ್ತರಕ್ಕೇರಿದ ರಕ್ಷಿತಾ, ಕನ್ನಡ ಚಿತ್ರರಂಗದಿಂದ ದೂರವಾಗಿರುವುದು ಅಭಿಮಾನಿಗಳ ಕೊರಗು. ‘ಅಪ್ಪು’ ನಂತರ ಸುದೀಪ್‌ ಅಭಿನಯದ ‘ಧಮ್‌’ ಚಿತ್ರದಲ್ಲಿ ನಟಿಸಿದ ರಕ್ಷಿತಾ ಆನಂತರ ಯಾವ ಕನ್ನಡ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ .

ಪುನೀತ್‌ ನಾಯಕರಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರ ‘ಅಭಿ’ಗೆ ರಕ್ಷಿತಾಳೇ ನಾಯಕಿಯಾಗಬೇಕು ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಬಯಸಿದ್ದರಂತೆ. ಆದರೆ, ಮಗಳ ಕಾಲ್‌ಷೀಟ್‌ ಸದ್ಯಕ್ಕೆ ದೊರಕುವುದಿಲ್ಲ ಎಂದು ಪಾರ್ವತಮ್ಮನವರಿಗೆ ರಕ್ಷಿತಾಳ ಅಮ್ಮ ಮಮತಾ ರಾವ್‌ ಸೂಚ್ಯವಾಗಿ ತಿಳಿಸಿದರಂತೆ. ಮಮತಾ ರಾವ್‌ ಕೂಡಾ ಸಿನಿಮಾಕ್ಕಾಗಿ ಬಣ್ಣ ಹಚ್ಚಿದವರೇ!

Post your views

ಪೂರಕ ಓದಿಗೆ-
ತುಂಡು ಬಟ್ಟೆಗೆ ತಕರಾರೆತ್ತದ ಕನ್ನಡತಿ
‘ಅಪ್ಪು’ ಸಿನಿಮಾ ವಿಮರ್ಶೆ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada