»   » ಅಮ್ಮನಾಗುವ ಸಂಭ್ರಮದಲ್ಲಿ ಮೋಹಕ ಚೆಲುವೆ ಲೈಲಾ!

ಅಮ್ಮನಾಗುವ ಸಂಭ್ರಮದಲ್ಲಿ ಮೋಹಕ ಚೆಲುವೆ ಲೈಲಾ!

Subscribe to Filmibeat Kannada


ಕನ್ನಡ, ಹಿಂದಿ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿರುವ ಬಹುಭಾಷಾ ತಾರೆ ಲೈಲಾ, ಸದ್ಯದಲ್ಲಿಯೇ ತಾಯಿಯಾಗಲಿದ್ದಾರೆ!

ತಮ್ಮ ಮುಗ್ಧ ನಗೆ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ಅವರು ವರ್ಷದ ಹಿಂದಷ್ಟೇ, ಮದುವೆಯಾಗಿದ್ದರು. ನಂತರ ನಟನಾ ರಂಗದಿಂದ ದೂರ ಉಳಿದಿದ್ದರು. ಉದ್ಯಮಿಯ ಕೈಹಿಡಿದು, ಗೃಹಿಣಿಯಾಗಿ ಮನೆ ಬೆಳಗುತ್ತಿರುವ ಲೈಲಾ ಅವರೀಗ, ಮೂರು ತಿಂಗಳ ಗರ್ಭಿಣಿ. ವೈದ್ಯರು ಪೂರ್ಣ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ.

ನನ್ನ ವೈವಾಹಿಕ ಬದುಕಿನ ಮೊದಲ ಅಧ್ಯಾಯ ಆರಂಭಗೊಂಡಿದೆ. ನನ್ನ ಗಂಡನೊಂದಿಗೆ ಬದುಕು ರಸಮಯವಾಗಿದೆ. ನಮ್ಮ ಮನೆಗೆ ಹೊಸ ಅತಿಥಿ(ಮಗು) ಪ್ರವೇಶಿಸುತ್ತಿದ್ದು, ಈ ಹೊತ್ತಿನಲ್ಲಿ ಸಿನಿಮಾ ಬಗ್ಗೆ ಯೋಚಿಸಲಾರೆ. ಮುಂದಿನ ಕೆಲವು ವರ್ಷಗಳಲ್ಲಿ ಸಿನಿಮಾ ರಂಗಕ್ಕೆ ಮರಳುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಲೈಲಾ, ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ತಂದೆಗೆ ತಕ್ಕ ಮಗ’, ‘ದೇವರ ಮಗ’, ‘ರಾಮಕೃಷ್ಣ ’ ಚಿತ್ರಗಳಲ್ಲಿ ಲೈಲಾ ಅಭಿನಯಿಸಿ, ಕನ್ನಡ ಪ್ರೇಕ್ಷಕರಿಗೆ ಪರಿಚಿತರು. ಮುಂಬೈನಲ್ಲಿ ತಮ್ಮ ಗಂಡ ಮತ್ತು ತಾಯಿಯಾಂದಿಗೆ ಲೈಲಾ ನೆಲೆಸಿದ್ದು, ಕರುಳ ಕುಡಿಯ ನಿರೀಕ್ಷೆಯಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada