»   » ರಾಜ್‌ ಅಂತ್ಯಕ್ರಿಯೆಗೆ ಬಿಜೆಪಿ ನಾಯಕ ಎಲ್‌.ಕೆ.ಆಡ್ವಾಣಿ

ರಾಜ್‌ ಅಂತ್ಯಕ್ರಿಯೆಗೆ ಬಿಜೆಪಿ ನಾಯಕ ಎಲ್‌.ಕೆ.ಆಡ್ವಾಣಿ

Posted By:
Subscribe to Filmibeat Kannada

ಬೆಂಗಳೂರು : ರಾಜ್‌ ನಿಧನದ ಹಿನ್ನೆಲೆ, ಲೋಕಸಭೆಯ ಪ್ರತಿಪಕ್ಷದ ನಾಯಕ ಮತ್ತು ಬಿಜೆಪಿ ಮುಖಂಡ ಎಲ್‌.ಕೆ.ಆಡ್ವಾಣಿ, ತಮ್ಮ ಭಾರತ್‌ ಸುರಕ್ಷಾ ಯಾತ್ರೆಯನ್ನು ಕರ್ನಾಟಕದಲ್ಲಿ ಕೈಬಿಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್‌ ಅಂತಿಮಯಾತ್ರೆಯಲ್ಲಿ ಆಡ್ವಾಣಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಬಿಜಾಪುರ, ಬಾಗಲಕೋಟೆ, ನರಗುಂದ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಕೆಲವು ನಗರಗಳಲ್ಲಿ ಯಾತ್ರೆ ಹಿನ್ನೆಲೆ ಸಾರ್ವಜನಿಕ ಸಭೆಗಳಲ್ಲಿ ಆಡ್ವಾಣಿ ಭಾಷಣ ಕಾರ್ಯಕ್ರಮ ಘೋಷಿಸಲಾಗಿತ್ತು. ದಿಢೀರ್‌ ಸಂಭವಿಸಿದ ವರನಟನ ಸಾವಿನಿಂದ ಬಿಜೆಪಿ ಕಾರ್ಯಕ್ರಮ ಬದಲಾಗಿದೆ.

ಸಂತಾಪ : ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ, ಪ್ರಧಾನಿ ಮನಮೋಹನ್‌ ಸಿಂಗ್‌, ಕರ್ನಾಟಕದ ರಾಜ್ಯಪಾಲ ಟಿ.ಎನ್‌.ಚತುರ್ವೇದಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ರಾಜ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada