»   » ಕನ್ನಡ ಕುವರ ಡಾ.ರಾಜ್‌ಕುಮಾರ್‌ ‘ಮರಳಿ ಮಣ್ಣಿಗೆ’

ಕನ್ನಡ ಕುವರ ಡಾ.ರಾಜ್‌ಕುಮಾರ್‌ ‘ಮರಳಿ ಮಣ್ಣಿಗೆ’

Subscribe to Filmibeat Kannada

ಬೆಂಗಳೂರು : ಲಕ್ಷಾಂತರ ಅಭಿಮಾನಿಗಳ ರೋಧನ, ಶೋಕತಪ್ತ ಜನಸ್ತೋಮದ ಮಧ್ಯೆ ವರನಟ ಡಾ.ರಾಜ್‌ಕುಮಾರ್‌ ಗುರುವಾರ ಸಂಜೆ ಮರಳಿ ಮಣ್ಣಿಗೆ ಮರಳಿದರು.

ರಾಜ್‌ರ ಹಿರಿಯ ಪುತ್ರ ಶಿವರಾಜ್‌ಕುಮಾರ್‌ ತಮ್ಮ ತಂದೆಯ ಅಂತಿಮ ಕರ್ಮಗಳನ್ನು ನೆರವೇರಿಸಿದರು. ರಾಜ್ಯ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯಿತು.

ನೆಚ್ಚಿನ ನಟನ ದರ್ಶನಕ್ಕೆ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪರಿಣಾಮ, ಗದ್ದಲದ ವಾತಾವರಣ ನಿರ್ಮಾಣಗೊಂಡಿತ್ತು. ಅಭಿಮಾನಿಗಳ ಹುಚ್ಚು ಆವೇಶವನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟ ಸಾಧ್ಯವಾಗಿತ್ತು. ಹೀಗಾಗಿ ಗಡಿಬಿಡಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ರಾಜ್‌ ಚಿರಾಯು, ಕನ್ನಡಕ್ಕೆ ಜೈ ಎಂಬ ಘೋಷಣೆಗಳು ಅಲ್ಲಿ ಮುಗಿಲು ಮುಟ್ಟಿದ್ದವು. ಕನ್ನಡ ಬಾವುಟಗಳು ಎಲ್ಲೆಡೆ ಹಾರಾಡುತ್ತಿದ್ದವು.

(ದಟ್ಸ್‌ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada