»   » ಕಣ್ಣು ಕೊಟ್ಟ ‘ಬೇಡರ ಕಣ್ಣಪ್ಪ’ : ಇಬ್ಬರು ಅಂಧರಿಗೆ ಬೆಳಕು

ಕಣ್ಣು ಕೊಟ್ಟ ‘ಬೇಡರ ಕಣ್ಣಪ್ಪ’ : ಇಬ್ಬರು ಅಂಧರಿಗೆ ಬೆಳಕು

Subscribe to Filmibeat Kannada

ಬೆಂಗಳೂರು : ರಾಜ್‌ಕುಮಾರ್‌ ಜೀವಂತವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಬಯಕೆಯ ಪರಿಣಾಮ, ಅವರ ಕಣ್ಣುಗಳು ನಮ್ಮೊಂದಿಗೆ ಉಳಿದಿವೆ!

ನಿಧನದ ನಂತರ ತಮ್ಮ ಕಣ್ಣುಗಳನ್ನು ದೃಷ್ಟಿಹೀನರಿಗೆ ಅಳವಡಿಸಬೇಕೆಂಬ ರಾಜ್‌ ಬಯಕೆ ಕಾರ್ಯರೂಪಕ್ಕೆ ಬಂದಿದೆ. ಅವರ ವಿಚಾರಪೂರ್ಣ ಮುಂದಾಲೋಚನೆಯಿಂದ ಇಬ್ಬರು ಅಂಧರು ಗುರುವಾರ ದೃಷ್ಟಿ ಪಡೆದಿದ್ದಾರೆ.

ನಾರಾಯಣ ನೇತ್ರಾಲಯದ ವೈದ್ಯರು, ರಾಜ್‌ ನಿಧನದ ನಂತರ ಬುಧವಾರ 3.15ರ ಸುಮಾರಿನಲ್ಲಿ ಎರಡೂ ಕಣ್ಣುಗಳನ್ನು ಸಂಗ್ರಹಿಸಿದರು. ಅವರ ಕಣ್ಣುಗಳನ್ನು ಗುರುವಾರ ಬಾಲಕ(15) ಮತ್ತು ವೃದ್ಧ(55)ನಿಗೆ ವೈದ್ಯರು ಕಸಿ ಮಾಡಿದ್ದಾರೆ.

ಶಿವನಿಗೆ ತಮ್ಮ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣುಕೊಟ್ಟಿದ್ದ ರಾಜ್‌, ತಮ್ಮ ನಿಜ ಬದುಕಿನಲ್ಲೂ ಕಣ್ಣಪ್ಪನ ಮನಸ್ಥಿತಿಯನ್ನು ಬಿಂಬಿಸಿದ್ದಾರೆ.

ಬಯಕೆ : ತಮ್ಮ ಕಡೆಯ ಅವಧಿಯನ್ನು ಹುಟ್ಟೂರಾದ ಗಾಜನೂರಿನಲ್ಲಿ ಕಳೆಯಲು ರಾಜ್‌ ನಿರ್ಧರಿಸಿದ್ದರು. ತಮ್ಮ ಜೀವಿತಾವಧಿಯಲ್ಲಿ ಮಾನಸ ಸರೋವರ ಕಾಣುವ ಆಸೆ ಸಹಾ ಅವರಿಗಿತ್ತು. ಆದರೆ ಈ ಎರಡು ಬಯಕೆಗಳು ಬಯಕೆಗಳಾಗಿಯೇ ಉಳಿದಿವೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada