»   » ರಾಜ್‌ ಅಗಲಿಕೆ : ಐದು ಬಲಿ, ನೂರಾರು ಮಂದಿಗೆ ಗಾಯ

ರಾಜ್‌ ಅಗಲಿಕೆ : ಐದು ಬಲಿ, ನೂರಾರು ಮಂದಿಗೆ ಗಾಯ

Posted By:
Subscribe to Filmibeat Kannada

ಬೆಂಗಳೂರು : ರಾಜಧಾನಿ ನಗರದಲ್ಲಿ ಹಿಂಸೆ ಭುಗಿಲೆದ್ದಿದ್ದು, ಐವರು ವ್ಯಕ್ತಿಗಳು ಗೋಲಿಬಾರ್‌ನಲ್ಲಿ ಗುರುವಾರ ಮೃತಪಟ್ಟಿದ್ದಾರೆ.

ರಾಜ್‌ ಪಾರ್ಥಿವ ಶರೀರದ ಮೆರವಣಿಗೆ ಸಾಗುತ್ತಿದ್ದಾಗ ಗಲಭೆ ಸಂಭವಿಸಿತು. ಬಸವೇಶ್ವರ ವೃತ್ತದಲ್ಲಿ ಜನರನ್ನು ಚದುರಿಸಲು ಪೊಲೀಸರು ಗೋಲಿಬಾರ್‌ ಮಾಡಿದಾಗ, ಐವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವ ಚಟುವಟಿಕೆ ಮುಂದುವರೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಪರದಾಡುತ್ತಿದ್ದಾರೆ. ಗದ್ದಲದಲ್ಲಿ ಪೊಲೀಸರು ಸೇರಿದಂತೆ ನೂರಾರು ಮಂದಿ ಗಾಯಗೊಂಡಿದ್ದಾರೆ.

ಅಭಿಮಾನಿ ಬಲಿ : ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಡಾ.ರಾಜ್‌ ಸಾವಿನ ಸುದ್ದಿಯ ಆಘಾತದಿಂದ ಅಭಿಮಾನಿಯಾಬ್ಬ ಮೃತಪಟ್ಟಿರುವುದು ತಡವಾಗಿ ವರದಿಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ವ್ಯಾಪಾರಿ ವಾಮದೇವಪ್ಪ(60) ಎಂದು ಗುರ್ತಿಸಲಾಗಿದೆ. ಡಾ.ರಾಜ್‌ ನಿಧನದ ದೃಶ್ಯಗಳನ್ನು ಟೀವಿಯಲ್ಲಿ ವೀಕ್ಷಿಸಿದ ಅವರು, ಬುಧವಾರ ಹೃದಯಾಘಾತಕ್ಕೆ ಒಳಗಾದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿದಾದರೂ, ಮಾರ್ಗ ಮಧ್ಯೆ ವಾಮದೇವಪ್ಪ ಮೃತಪಟ್ಟರು ಎನ್ನಲಾಗಿದೆ.

ಮನವಿ : ಅಭಿಮಾನಿಗಳು ಶಾಂತರೀತಿಯಿಂದ ವರ್ತಿಸಬೇಕು. ಉದ್ರೇಕದಿಂದ ಹಿಂಸಾಚಾರಕ್ಕಿಳಿದು, ಅಪ್ಪಾಜಿ ವ್ಯಕ್ತಿತ್ವಕ್ಕೆ ಮಸಿ ಬಳಿಯಬಾರದು ಎಂದು ನಟರಾದ ಶಿವರಾಜ್‌ ಕುಮಾರ್‌ ಮತ್ತು ರಾಘವೇಂದ್ರರಾಜ್‌ಕುಮಾರ್‌, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada