»   » ಅಭಿಮಾನಿಗಳ ಅವಾಂತರ : ಹಿಂಸೆ, ವಾಹನಗಳಿಗೆ ಬೆಂಕಿ

ಅಭಿಮಾನಿಗಳ ಅವಾಂತರ : ಹಿಂಸೆ, ವಾಹನಗಳಿಗೆ ಬೆಂಕಿ

Posted By:
Subscribe to Filmibeat Kannada

ಬೆಂಗಳೂರು : ವರನಟನನ್ನು ಕಳೆದುಕೊಂಡು ಶೋಕತಪ್ತರಾಗಿರುವ ಅಭಿಮಾನಿಗಳು ಒಂದು ಕಡೆಯಾದರೆ, ರೊಚ್ಚಿಗೆದ್ದ ಅಭಿಮಾನಿ ದೇವರುಗಳು ಇನ್ನೊಂದೆಡೆ. ಈ ಸಂದರ್ಭದಲ್ಲಿ ಪರಿಸ್ಥಿತಿ ಹಿಂಸೆಗೆ ತಿರುಗಿದೆ.

ಸುಮಾರು 50ಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳು, 20ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಬಸ್‌ಗಳು, 17 ಪೊಲೀಸ್‌ ವಾಹನಗಳು ಸೇರಿದಂತೆ ನೂರಾರು ವಾಹನಗಳು ಉದ್ರಿಕ್ತರ ಆಕ್ರೋಶಕ್ಕೆ ಬುಧವಾರ ಬಲಿಯಾಗಿವೆ. ಕೋಟ್ಯಂಟರ ರೂ. ಸಾರ್ವಜನಿಕ ನಷ್ಟ ಸಂಭವಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ರಾಜ್‌ ಪಾರ್ಥಿವ ಶರೀರವನ್ನು ವೀಕ್ಷಿಸಲು ಅವಕಾಶ ಲಭ್ಯವಾಗದ ಕಾರಣ ಅಭಿಮಾನಿಗಳ ಗುಂಪು ಅಸಮಾಧಾನಗೊಂಡಿದ್ದು, ಹಿಂಸೆಗೆ ಕಾರಣ ಎನ್ನಲಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಾಗ ಲಘು ಲಾಠಿ ಪ್ರಹಾರದ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

ಈ ಗಲಭೆಯಲ್ಲಿ ಹದಿನೈದು ಪೊಲೀಸರು ಗಾಯಗೊಂಡಿದ್ದು, ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಲಾಯಿತು. ಸುಮಾರು 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಕ್ರೀಡಾಂಗಣದ ಬಳಿಯಿದ್ದ ಪೆಟ್ರೋಲ್‌ ಬಂಕ್‌, ತನ್ನ ವಹಿವಾಟನ್ನು ಸ್ಥಗಿತಗೊಳಿಸಲಿಲ್ಲವೆಂದು ಬೆಂಕಿ ಹಚ್ಚಿದ ಪ್ರಕರಣವೂ ವರದಿಯಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ರಾಜ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada