For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಂಠೀರವ ರಾಜ್‌ ನಿಧನಕ್ಕೆ ವಿಶ್ವಕನ್ನಡಿಗರ ತಲ್ಲಣ

  By Staff
  |

  ಮಾನ್ಯರೇ,

  ಕನ್ನಡ ಕುವರ ಇನ್ನಿಲ್ಲ ಎಂಬುದು ನಂಬಲಾಸಾಧ್ಯ! ಕನ್ನಡಿಗರ ಮನಗೆದ್ದ ಮಗನ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಡಾ।। ರಾಜ್‌ಗೆ ಜೈ.

  - ಮಂಜುನಾಥ ಯಳಂದೂರ್‌, ಸಿಡ್ನಿ

  *

  Sir,

  I was busy on work in my Office at Saudi Arabia. At around 1.00 pm. I shocked when one of my colleague from other dept called me reveal the message. Suddenly I opened thatskannada. Com and confirmed the news. My eyes were tears without knowingly. For a while I was not able to work.

  "E Saavu Nyayave" sariyada prashne.

  My deepest condolence & pray to god to give all strength to particularly to his family & all fellow kannadiags to sustain this great loss

  - Satheesh A

  *

  "He was great actor in Kannada" I never seen in the India others person like Dr.RajKumar, he only great man in the film Industries of Karnataka. We are Missing Great Man in the World.

  - Chandrashekar.C.N

  ‘ಕನ್ನಡ’ ‘ಕರ್ನಾಟಕ’ ಪದದೊಡನೆ ತಕ್ಷಣ ನೆನಪಾಗುತ್ತಿದ್ದ ಹೆಸರೇ ಡಾ.ರಾಜಕುಮಾರ್‌ ಅವರದು. ಅವರ ಎಲ್ಲಾ ಚಿತ್ರಗಳ ಪಾತ್ರಗಳೂ ಕೂಡ ಕನ್ನಡಿಗರ ನಯ, ವಿನಯ, ಸಹನೆ, ಸಾಹಸ, ಸ್ವಾಭಿಮಾನಗಳ ಪ್ರತಿನಿಧಿಗಳಂತಿರುತ್ತಿದ್ದವು. ರಾಜ್‌ಕುಮಾರರಂತೆಯೇ, ಉತ್ತಮವಾಗಿ ಅಭಿನಯಿಸಬಲ್ಲ ನಟ ಮುಂದೆಂದೋ ಬಂದರೂ ಬರಬಹುದು. ಆದರೆ ಅವನು ರಾಜ್‌ರಷ್ಟೇ ಉತ್ತಮ ವ್ಯಕ್ತಿಯಾಗಿರುವುದಂತೂ ಸಾಧ್ಯವಿಲ್ಲ.

  ಇಂತಹ ಸುಪುತ್ರನನ್ನು ಕಳೆದುಕೊಂಡ ಕನ್ನಡಮ್ಮನ ಮಡಿಲು ಇಂದು ಬರಿದು. ಕನ್ನಡಿಗರ ಪ್ರೀತಿಯ ‘ಅಣ್ಣ’ನಿಗೆ ನನ್ನ ಕಂಬನಿ ಬಿಂದುಗಳು.

  - ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌ು, ಅಮೆರಿಕಾ

  *

  ನಿಜಕ್ಕೂ ನಮ್ಮ ಬಂಗಾರದ ಮನುಷ್ಯ ಇಲ್ಲವಾದನೇ? ನಂಬಲು ಕಷ್ಟವಾಗುತ್ತಿದೆ. ಆತನ ಚಿತ್ರಗಳನ್ನು ನೋಡುತ್ತ ಬೆಳೆದ ನಮ್ಮ ಹೃದಯದಲ್ಲಿ ಆತ ಸದಾ ನೆಲೆಸಿರುತ್ತಾನೆ.

  - ಮೈ.ಶ್ರೀ. ನಟರಾಜ

  *

  ಡಾ। ರಾಜ್‌ ನಿಧನದಿಂದ ಅಪಾರ ದುಃಖ. ನಿಜವಾಗಿಯೂ ಬಂಗಾರದ ಮನುಷ್ಯನನ್ನು ಕಳಕೊಂಡೆವು....

  ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ.

  - ಶ್ರೀವತ್ಸ ಜೋಶಿ

  *

  ನಮಗೆಲ್ಲಾ ಇದು ಅತ್ಯಂತ ದುಃಖಕರವಾದ ಸಂಗತಿ. ಆದರೆ ತಮ್ಮ ನೂರಾರು ಚಿತ್ರಗಳ ಮೂಲಕ ರಾಜ್‌ಕುಮಾರ ನಮ್ಮೆಲ್ಲರ ತನು-ಮನಗಳಲ್ಲಿ ಚಿರಂಜೀವಿಯಾಗಿ ಇರುತ್ತಾರೆ.

  - ಶೇಷಾದ್ರಿ ವಾಸು

  *

  ನಮ್ಮ ಬಂಗಾರದ ಮನುಷ್ಯ ಇನ್ನಿಲ್ಲ! ಮುಂದೇನು? ಗೊತ್ತಿಲ್ಲ.

  - ಎಸ್‌. ಎಮ್‌. ಪೆಜತ್ತಾಯ, ಬಾಳೆಹೊಳೆ

  *

  ಡಾ. ರಾಜ್‌ರವರ ಅಗಲಿಕೆಯಿಂದ ಮೆಲ್ಬರ್ನ್‌ ಕನ್ನಡ ಬಳಗ ತತ್ತರಿಸಿದೆ. ಡಾ. ರಾಜ್‌ರವರು ವಿಧಿವಶರಾದ ಸುದ್ದಿಯನ್ನು ಪ್ರಥಮ ಬಾರಿಗೆ ಬಿತ್ತರಿಸುತ್ತಿದ್ದ ‘ದಟ್ಸ್‌ ಕನ್ನಡ.ಕಾಂ’ ನಲ್ಲಿ ಅಚಾನಕವಾಗಿ ವೀಕ್ಷಿಸಿದ ಮೆಲ್ಬರ್ನ್‌ ಕನ್ನಡಿಗರಿಗೆ ‘ಈ ಟೀವಿ’ ಯ ವಾರ್ತೆಯಲ್ಲಿ ನೋಡುವವರೆಗೂ ನಂಬಿಕೆಯೇ ಬರಲಿಲ್ಲ. ಈ ಅಕಾಲಿಕ ವಾರ್ತೆಯಿಂದ ತಲ್ಲಣಗೊಂಡ ಕನ್ನಡಿಗ ಮಿತ್ರರೆಲ್ಲರೂ ದೂರವಾಣಿಯ ಮೂಲಕ ಪರಸ್ಪರ ಸಂಪರ್ಕಿಸಿ, ಸಾಂತ್ವಾನ ಹೇಳುತ್ತಿದ್ದ ದೃಶ್ಯ ಕಾಣುತ್ತಿತ್ತು.

  ಮೆಲ್ಬರ್ನ್‌ ಕನ್ನಡ ಸಂಘದ ಪ್ರಸಕ್ತ ಸಾಲಿನ 20ನೇ ವಾರ್ಷಿಕೋತ್ಸಕ್ಕೆ ಡಾ. ರಾಜ್‌ರವರನ್ನು ಕರೆತರಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಬಗ್ಗೆ ಅವರ ಪುತ್ರ ಪುನೀತ್‌ರೊಂದಿಗೆ ಚರ್ಚಿಸುತ್ತಿದ್ದ ಮಿತ್ರ ಶರ್ಮರಂತೂ ತಮ್ಮ ಆರಾಧ್ಯ ನಾಯಕನಟನ ಅಗಲಿಕೆಯನ್ನು ನಂಬಲೇ ಇಲ್ಲ. ಹಲವರು ತಮ್ಮ ಸಂಜೆಯ ಪಾಳಿಯಿಂದ ರಜೆ ಪಡೆದು ಮನೆಗೆ ಮರಳಿದರೆ, ಕೆಲವು ಕನ್ನಡಿಗರು ತಮ್ಮ ವ್ಯಾಪಾರ-ವ್ಯವಹಾರಗಳನ್ನು ನಿಲ್ಲಿಸಿ ಈ-ಟೀವಿಯಲ್ಲಿ ವಾರ್ತೆಯನ್ನು ವೀಕ್ಷಿಸಲು ಮನೆಗೆ ಧಾವಿಸಿ ಬಂದರು.

  ಹಿರಿಯ ಕಿರಿಯರೆನ್ನದೇ ಎಲ್ಲ ಕನ್ನಡಿಗ ಬಳಗದವರೂ ಆಡುತ್ತಿದ್ದ ಮಾತು ಒಂದೇ; ಇದು ಕನ್ನಡ ನಾಡು-ನುಡಿಗೆ ಆಗಿಹ ಬೃಹತ್‌ ನಷ್ಟ. ಅದರಲ್ಲೂ ಚಿತ್ರರಂಗದ ಮೂಲಕ ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಹಾಗೂ ಕನ್ನಡವನ್ನೇ ಕೊನೆತನಕ ಉಸಿರಾಗಿರಿಸಿಕೊಂಡು ಅಗಲಿದ ಡಾ. ರಾಜ್‌ರವರು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ, ಅವರ ಚೇತನ ಎಂದೆಂದಿಗೂ ನಮ್ಮೊಡನೆ ಇರುವುದೆಂಬ ವಿಶ್ವಾಸ ಎಲ್ಲರದು.

  ಮೆಲ್ಬರ್ನ್‌ ಕನ್ನಡ ಬಳಗದವರೆಲ್ಲರೂ ಡಾ. ರಾಜ್‌ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸುವುದರೊಂದಿಗೇ ಡಾ. ರಾಜ್‌ ಕುಟುಂಬದವರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದೂ ಪ್ರಾರ್ಥಿಸಿರುತ್ತಾರೆ. ಹಾಗೆಯೇ ಮುಂಬರುವ ದಿವಸಗಳಲ್ಲಿ ಡಾ. ರಾಜ್‌ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನೂ ಏರ್ಪಡಿಸಲೂ ನಿರ್ಧರಿಸಿದ್ದಾರೆ.

  - ಚಿ. ಶೇ. ಅನಿಲ್‌ ಕುಮಾರ್‌, ಇಂಚರ, ಮೆಲ್ಬರ್ನ್‌

  *

  ಮಾನ್ಯರೇ,

  ನನ್ನ ನೆನಪಿನಾಳದಲ್ಲಿ ಅಣ್ಣಾವ್ರು ನೆಲೆಸಿದ್ದಾರೆ. 1968ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ 3ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ ಮಾತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

  ನಾವಿದ್ದ ಹರದನಹಳ್ಳಿಯೊಂದು ಪುಟ್ಟ ಹಳ್ಳಿ. ಸಣ್ಣ ಪುಟ್ಟ ವಸ್ತುಗಳು ಮಾತ್ರ ಸಿಗುತ್ತಿತ್ತು. ತಿಂಗಳಿಗೊಮ್ಮೆ ಅಂಗಡಿ ಸಾಮಾನುಗಳನ್ನು ತರಲು ನಗರಕ್ಕೇ ಬರಬೇಕಿತ್ತು. ನಗರದಲ್ಲಿ ನಮ್ಮ ದೊಡ್ಡಪ್ಪನವರು ವಾಸವಾಗಿದ್ದರು. ಅಂದು ನಾನು ನನ್ನ ತಾಯಿ ಮತ್ತು ತಂಗಿ (ನನಗಿಂತ 2 ವರ್ಷಗಳಷ್ಟು ಚಿಕ್ಕವಳು) ಅಂಗಡಿ ಸಾಮಾನುಗಳನ್ನು ತರಲು ನಗರಕ್ಕೆ ಬಂದಿದ್ದೆವು.

  ಅಂಗಡಿ ಇದ್ದುದು ಪೇಟೆ ಬೀದಿಯಲ್ಲಿ. ದೊಡ್ಡಪ್ಪನವರ ಮನೆ ಇದ್ದುದು ದೇವಾಂಗ ಬೀದಿಯಲ್ಲಿ, ಬಸ್‌ ನಿಲ್ದಾಣದ ಎದುರು. ಅಂಗಡಿ ಸಾಮಾನುಗಳನ್ನು ತೆಗೆದುಕೊಂಡು ಹಾಗೆಯೇ ದೊಡ್ಡಪ್ಪನವರ ಮನೆಗೆ ಬಂದಿದ್ದೆವು. ನಗರದಲ್ಲಿಯ ಎಕ್ಸ್‌ಟೆನ್‌ಷನ್ನಿನಲ್ಲಿ ಅಣ್ಣಾವ್ರ (ಡಾ।। ರಾಜಕುಮಾರ) ತಂಗಿಯ ಮನೆ ಇದ್ದಿತ್ತು. ಆಗಾಗ ಅಣ್ಣಾವ್ರು ತಮ್ಮ ತಂಗಿಯ ಮನೆಗೆ ಬರುತ್ತಿದ್ದರಂತೆ. ಈ ವಿಷಯವನ್ನು ನಾನು ಕೇಳುತ್ತಿದ್ದೆನಷ್ಟೆ.

  ನಾವೆಲ್ಲರೂ ದೊಡ್ಡಪ್ಪನವರ ಮನೆಯ ಒಳಗಿದ್ದಾಗ, ಹೊರಗಡೆ ಜನಗಳ ಕೂಗು ಕೇಳಿಬಂದಿತ್ತು. ಅದೇನೆಂದು ನೋಡಲು ಮನೆಯಲ್ಲಿದ್ದವರೆಲ್ಲರೂ ಆಚೆಗೆ ಬಂದಿದ್ದೆವು. ಅಲ್ಲಿದ್ದವರಲ್ಲಿ ನಾನೊಬ್ಬನೇ ಗಂಡು ಹುಡುಗ. ಬಸ್‌ ನಿಲ್ದಾಣದೆದುರಿಗೆ ವಿಪರೀತ ಜನಗಳು ತುಂಬಿದ್ದರು. ತುಂಬಾ ಜನಗಳು ಮನೆಯ ಮುಂದಿನಿಂದ ಬಸ್‌ ನಿಲ್ದಾಣದ ಕಡೆಗೆ ಓಡುತ್ತಿದ್ದರು.

  ಆಗ ನನ್ನ ದೊಡ್ಡಮ್ಮ ಯಾರನ್ನೋ ಕೇಳಿದ್ದರು, ‘ಯಾಕೆ ಏನಾಯ್ತು ಅಲ್ಲಿ?’ ಅದಕ್ಕೆ ಒಬ್ಬರು, ‘ಮುತ್ತಣ್ಣಾವ್ರು ಬಂದವ್ರೆ - ಊರಲ್ಲೆಲ್ಲಾ ಮೆರವಣಿಗೆ ಬರ್ತವ್ರಂತೆ - ಅವ್ರದ್ದು ನೂರನೇ ಸಿನೆಮಾ ಬಂತಲ್ಲ - ಈಗ ನಟಸಾರ್ವಭೌಮ ಬತ್ತದಂತೆ’, ಎಂದಿದ್ದರು. ಅಣ್ಣಾವ್ರು, 100ನೇ ಚಿತ್ರ, ಮೆರವಣಿಗೆ, ಈ ಮಾತುಗಳು ನನ್ನ ಕಿವಿಗೆ ಬೀಳುತ್ತಿದ್ದಂತೆಯೇ ಮೈಯಲ್ಲೆಲ್ಲಾ ಏನೋ ಹೊಸ ಶಕ್ತಿ ಓಡಾಡಿದ ಹಾಗಾಗಿತ್ತು. ಮನೆಯಲ್ಲಿ ಗಂಡಸರು ದೊಡ್ಡವರು ಯಾರೂ ಇರಲಿಲ್ಲ. ದೊಡ್ಡಮ್ಮ ಅಮ್ಮ ಕರೆಯುತ್ತಿದ್ದರೂ ಕೇಳದಂತೆ ಬಸ್‌ ನಿಲ್ದಾಣದ ಕಡೆಗೆ ಓಡಿದ್ದೆ.

  ಉತ್ತರ ದಿಕ್ಕಿನಿಂದ ಜನಗಳ ಸಾಗರ ಬರುತ್ತಿತ್ತು. ಎಲ್ಲರೂ ರಸ್ತೆಯ ಬದಿಗಳಲ್ಲಿ ನಿಂತು ನೋಡುತ್ತಿದ್ದರು. ಅಕ್ಕ ಪಕ್ಕ ಇರುವ ಅಂಗಡಿಯವರುಗಳು ಮಕ್ಕಳಿಗೆಲ್ಲರಿಗೂ ಪೆಪ್ಪರ್‌ಮೆಂಟ್‌ ಕೊಡುತ್ತಿದ್ದರು. ಅಲ್ಲದೇ ಕೆಲವು ಹಿರಿಯರು ಎಲ್ಲರಿಗೂ ಕಡಲೆಪುರಿಯನ್ನೂ ಹಂಚುತ್ತಿದ್ದರು. ಮೂರು ನಾಲ್ಕು ಲಾರಿಗಳು ಜನಗಳನ್ನು ತುಂಬಿಕೊಂಡು ನಿಧಾನಕ್ಕೆ ಬರುತ್ತಿದ್ದವು. ಮಧ್ಯೆ ಇದ್ದ ಒಂದು ಲಾರಿಯ ಮೇಲ್ಭಾಗದಲ್ಲಿ ಅಣ್ಣಾವ್ರು ನಿಂತಿದ್ದು ಸುತ್ತಲೂ ನೆರೆದಿದ್ದವರಿಗೆಲ್ಲರಿಗೂ ಕೈ ಬೀಸುತ್ತಿದ್ದರು.

  ಅಣ್ಣಾವ್ರ ಜೊತೆಗೆ ಅವರ ಕುಟುಂಬವೂ ಇತ್ತು. ಪಕ್ಕದಲ್ಲಿದ್ದವರ್ಯಾರೋ ಒಬ್ಬರು ಅಣ್ಣಾವ್ರ ಮಗಳು ಲಕ್ಷ್ಮಿಯನ್ನು ಎತ್ತಿ ಅವರ ಕೈಗಿತ್ತಿದ್ದರು. ಆಗ ಎಲ್ಲರೂ ಹೋ ಎಂದು ಕೂಗಿದರು. ಲಕ್ಷ್ಮಿಗೆ ಆಗ 1 ಅಥವಾ 2 ವರ್ಷಗಳಿರಬೇಕು. ಅವಳೇ ಅವರ ದೊಡ್ಡ ಮಗಳು. ಸುತ್ತಲಿದ್ದ ಜನಗಳೆಲ್ಲರಲ್ಲೂ ವಿದ್ಯುತ್‌ ಪ್ರವಹಿಸಿದಂತಾಗಿತ್ತು. ಎಲ್ಲರೂ ಮಂತ್ರಮುಗ್ಧರಾಗಿ ನಿಂತಿದ್ದರು. ಅಣ್ಣಾವ್ರಿದ್ದ ಲಾರಿಯ ಹಿಂದೆ ಮುಂದೆ ಇದ್ದ ಇತರೇ ಲಾರಿಗಳಲ್ಲಿ ಜನಗಳು ಬಹಳ ಇರಲಿಲ್ಲ. ಲಾರಿಗಳ ಚಾಲಕರು ಇತರ ಜನಗಳನ್ನು ಹತ್ತಲು ಕರೆಯುತ್ತಿದ್ದರು. ನನಗೆ ಅದೆಲ್ಲಿಂದ ಬುದ್ಧಿ ಬಂದಿತೋ ಏನೋ, ಹಿಂದೆ ಮುಂದೆ ನೋಡದೇ, ಲಾರಿ ಎಲ್ಲಿಗೆ ಹೋಗುತ್ತಿದೆ ಎಂಬುದನ್ನೂ ತಿಳಿದುಕೊಳ್ಳದೇ ಒಂದು ಲಾರಿಯ ಕಡೆ ಓಡಿದ್ದೆ.

  ದೊಡ್ಡವರೊಬ್ಬರು ನನ್ನನ್ನು ಎತ್ತಿ ಅನಾಮತ್ತಾಗಿ ಲಾರಿಯೊಳಗೆ ಹಾಕಿದ್ದರು. ಆನಂತರ ನೋಡಿದರೆ, ಆ ಲಾರಿಯಲ್ಲೇ ಅಣ್ಣಾವ್ರು ಇದ್ದದ್ದು. ಆ ಲಾರಿಯೊಳಗಿದ್ದ ಮಕ್ಕಳೆಲ್ಲರ ತಲೆ ನೇವರಿಸುತ್ತಿದ್ದರು. ನನಗಂತೂ ಅತೀವ ಆನಂದವಾಗಿತ್ತು. ಆ ಲಾರಿಯೊಳಗೆ ಇದ್ದವರಿಗೆಲ್ಲರಿಗೂ ಹಣ್ಣುಗಳನ್ನೂ ತಿನಿಸುಗಳನ್ನೂ ಕೊಡುತ್ತಿದ್ದರು. ಮೆರವಣಿಗೆಯು 2 ಘಂಟೆಗಳ ಕಾಲ ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಿ ಕೊನೆಗೆ ಬಸ್‌ ನಿಲ್ದಾಣದ ಹತ್ತಿರಕ್ಕೆ ಬಂದು ನಮ್ಮಗಳನ್ನು ಇಳಿಸಿದ್ದರು. ಅಂದು ನಾನು ಅಣ್ಣಾವ್ರನ್ನು ಹತ್ತಿರದಿಂದ ನೋಡಿದ್ದೆ. ಅಂದಿನಿಂದ ನಾನು ಅಣ್ಣಾವ್ರ ಪಕ್ಕಾ ಭಕ್ತನಾದೆ.

  ಮುಂದೆ ಬಿಡುಗಡೆಯಾದ ಅಣ್ಣಾವ್ರ ಎಲ್ಲ ಚಿತ್ರಗಳನ್ನೂ ನೋಡಲು ಪ್ರಯತ್ನಿಸಿದ್ದೆ (ಕೆಲವು ಚಿತ್ರಗಳನ್ನು ನೋಡಲಾಗಲಿಲ್ಲ).

  - ತಳಕು ಶ್ರೀನಿವಾಸ್‌, ಮುಂಬಯಿ.

  *

  ಅಣ್ಣನ ಅಸ್ತಂಗತಕ್ಕೆ ಆಗಸದ ಅಳಲೊ ಗೊತ್ತಿಲ್ಲ. ಹೈರಾಬಾದಿನಲ್ಲೂ ಸ್ಮಶಾನ ಮೌನ. ಬೆಳಕಿಲ್ಲ, ಬರಿ ಮಳೆ, ಗುಡುಗು ಸಿಡಿಲು.

  ವಿಶ್ವ ಕನ್ನಡಿಗರೆಲ್ಲ ‘ಸುವರ್ಣ’ ವರ್ಷದ ಸಂಭ್ರಮದಲ್ಲಿರ ಬೇಕಾದರೆ ‘ಅಣ್ಣ ಇನ್ನಿಲ್ಲ’. ಇನ್ನೆಲ್ಲಿಯ ಸಂಭ್ರಮ.

  - ಗುರು ಪಿ. ಚತುರ್ವೇದಿ, ಸಿಕಂದರಾಬಾದ್‌.

  *

  Sir,

  I was reading the news about Raj demisal. It is hard to believe and digest that news.

  I have a comment about your news. You have written "Rajkumar Entered music world through Sanaadhi Appanna " ; But this is wrong. He entered through "Sampatthige Savaal" in 1973 or 1974.

  - Hassan Parthasarathy, Salt Lake City, UT

  ಅಭಿಮಾನಿಗಳೇ, ನಿಮ್ಮ ಸಂಕಟ-ಸಂತಾಪ ನಮ್ಮೊಂದಿಗೆ ಹಂಚಿಕೊಳ್ಳಿ

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X