»   » ಚಂದ್ರಗೌಡ ಕುಲಕರ್ಣಿ (ಕಡದಳ್ಳಿ)

ಚಂದ್ರಗೌಡ ಕುಲಕರ್ಣಿ (ಕಡದಳ್ಳಿ)

Subscribe to Filmibeat Kannada


ಬರಿ ನೆನಪಲ್ಲ...

  • ಚಂದ್ರಗೌಡ ಕುಲಕರ್ಣಿ (ಕಡದಳ್ಳಿ)
    chandragoudak@yahoo.com
ಬರಿ ನೆನಪಲ್ಲ... ನಿನ್ನ ನೆನಪು ಬರಿ ನೆನಪಲ್ಲ,
ನಮಗೆ ಸಾವಿರದ ಸಂಸ್ಕೃತಿಯ ಚಿತ್ರಶಾಲೆ !

ಸಾಗರಾಳಕಿಳಿದು ಮುತ್ತು ಹೆಕ್ಕಿ ತಂದವ ನೀ ಆಗಸದೆತ್ತರಕೇರಿ
ಚುಕ್ಕೆಗಳ ಮುಟ್ಟಿ ಬಂದವನೀ ನಿನ್ನ ನೆನಪು ಬರಿ ನೆನಪಲ್ಲ.
ನಮಗೆ ಸಾವಿರದ ಸಂಸ್ಕೃತಿಯ ಚಿತ್ರಶಾಲೆ !

ನವಿಲಿಗೆ ನಾಟ್ಯ, ಅರಗಿಳಿಗೆ ಮಾತು, ಹಂಸೆಗೆ ನಡೆ,
ಲತೆಗೆ ಬಳುಕು ಬಂದುದೇ ನಿನ್ನಿಂದ...
ನಿನ್ನ ನೆನಪು ಬರಿ ನೆನಪಲ್ಲ, ನಮಗೆ ಸಾವಿರದ ಸಂಸ್ಕೃತಿಯ ಚಿತ್ರಶಾಲೆ !

ಕನ್ನಡಿಗನ ಮನಸಲ್ಲಿ ಮಧುರ ಕನಸ ಬಿತ್ತಿದವ
ನೀ ಕನಸಿನ ಪಾತ್ರಗಳಿಗೆ ಉಸಿರಾದವ, ಹಸಿರಾದವ!

ಮಾತಿಗೆ ಮಾತಿನ ಮತಿಯ ನೀಡಿದವ ಅಭಿನಯಕೆ
ಅನುನಯದ ಗತಿಯ ಕಲಿಸಿದವ ಭಾವ ಅನುಭಾವಕೆ
ಜೀವವಾದವ ನೀ... ನಿನ್ನ ನೆನಪು ಬರಿ ನೆನಪಲ್ಲ,
ನಮಗೆ ಸಾವಿರದ ಸಂಸ್ಕೃತಿಯ ಚಿತ್ರಶಾಲೆ !

ಗತವೈಭವದ ಸೊಬಗಿನೈಸಿರಿಗೆ ಕನ್ನಡಿ ಹಿಡಿದು,
ಪುರಾಣ-ಐತಿಹ್ಯ-ಜಾನಪದದ ನಾಡಿ ಮಿಡಿದು,
ಕಲೆ ಕಲಾವಿದರ ಬದುಕ ಬಗೆದು ಸಹೃದಯನಾಸ್ಥಾನಕೆ
ಕರೆದು ತಂದ ಭಗೀರಥ ನೀ... ನಿನ್ನ ನೆನಪು ಬರಿ ನೆನಪಲ್ಲ,
ನಮಗೆ ಸಾವಿರದ ಸಂಸ್ಕೃತಿಯ ಚಿತ್ರಶಾಲೆ !

ನೀನು ಕನ್ನಡದೊಳಗೊ ಕನ್ನಡ ನಿನ್ನೊಳಗೊ ನೀನು
ಕನ್ನಡಗಳೆರಡೂ ಕನ್ನಡಿಗನ ಎದೆಯಾಳಗೊ !
ಕಲೆಯು ನಿನ್ನೊಳಗೊ ನಿನ್ನೊಳು ಕಲೆಯಾ ನೀನು
ಕಲೆಗಳೆರಡೂ ಸಹೃದಯನ ಹೃದಯದೊಳಗೊ ಯಾರು ಬಲ್ಲರಿದನು ?

ಬಲ್ಲಿದನು ನೀ ಎಂದೆಂದೂ ಬಾಯಿ ಬಿಡಲಿಲ್ಲ ಬಡಾಯಿ ಕೊಚ್ಚಲಿಲ್ಲ !
ಬಡಪಾಯಿಗಳನೆಲ್ಲ ದೇವರೆಂದವ ನೀ
‘ಅಭಿಮಾನಿ ದೇವರೆ, ದೇವರೆ ‘ ಎನ್ನುತ್ತ ಸಾಗಿದವ ನೀ...
ನಿನ್ನ ನೆನಪು ಬರಿ ನೆನಪಲ್ಲ, ನಮಗೆ ಸಾವಿರದ ಸಂಸ್ಕೃತಿಯ ಚಿತ್ರಶಾಲೆ !

Post your views


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada