For Quick Alerts
  ALLOW NOTIFICATIONS  
  For Daily Alerts

  ನೂರೊಂದು ಮಾತು ಎದೆಯಾಳದಿಂದ...

  By Staff
  |
  • ರಾಜ್‌ ಜಗತ್ತಿನ ಅಪರೂಪದ ವ್ಯಕ್ತಿ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅಭಿಮಾನಿಗಳು ಈ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕು. ಆತ್ಮಾಹುತಿ ಯತ್ನಗಳು ದಯವಿಟ್ಟು ಬೇಡ -ಎಚ್‌.ಡಿ.ಕುಮಾರಸ್ವಾಮಿ
  • ನಾನು ವಿದೇಶ ಪ್ರವಾಸದಲ್ಲಿದ್ದೇನೆ. ಅಣ್ಣನ ಅಂತಿಮ ದರ್ಶನ ಪಡೆಯದ ನತದೃಷ್ಟ ನಾನು. ರಾಜ್‌ ನಿಧನ ಭಾರತಕ್ಕೆ ನಷ್ಟ -ಚಿರಂಜೀವಿ.
  • ಕನ್ನಡನಾಡಿನ ಚೈತನ್ಯ -ಚಂಪಾ
  • ದಿಗ್ಭ್ರಮೆಯಾಗಿದೆ. ಎಂದಿಗೂ ಯಾರ ಮನಸ್ಸಿಗೂ ನೋವು ತಂದವರಲ್ಲ -ಆರತಿ
  • ನಮ್ಮ ತಂದೆ ಅಗಲಿದಂತೆ ಆಗಿದೆ -ಮಾಲಾಶ್ರೀ
  • ಅವರು ಸತ್ತಿಲ್ಲ. ಸಾಯುವುದು ಇಲ್ಲ. ಯಾವತ್ತೂ ನಮ್ಮೊಂದಿಗೆ ಇರುತ್ತಾರೆ -ತಾರಾ
  • ಅವರದು ವೈವಿಧ್ಯಮಯ ಧ್ವನಿ. ಕಾಡುವ ಧ್ವನಿ. ಅವರು ಇರಬೇಕಿತ್ತು -ಸಿ.ಆಶ್ವಥ್‌
  • ದೊಡ್ಡ ಕಲಾವಿದ. ಭಾಳ್‌ ದೊಡ್ಡಾವ್ರು. ಅವ್ರು ಇರಬೇಕಿತ್ತು -ಗಂಗೂಬಾಯಿ ಹಾನಗಲ್‌
  • ಅವರ ಬದುಕು ನಮಗೆ ದಾರಿದೀಪ -ಹಿರಣ್ಣಯ್ಯ
  • ಅವರು ಕೇವಲ ಕನ್ನಡ ಸಿನಿಮಾಗೆ ಸೇರಿದವರಲ್ಲ. ಭಾಷೆಗೆ ರಾಜ್‌ ಐಕಾನ್‌ -ಸಿ.ಆರ್‌.ಸಿಂಹ
  • ಕನ್ನಡಾಂಬೆಯ ಮುಕುಟದ ರತ್ನ ಕಳಚಿ ಬಿತ್ತು -ಚನ್ನವೀರ ಕಣವಿ
  • ರಾಜ್ಯ ಸರ್ಕಾರ ಸ್ಮಾರಕ ನಿರ್ಮಾಣ ಮಾಡಲಿ -ವಾಟಾಳ್‌ ನಾಗರಾಜ್‌
  • ಅವರೊಂದು ನಿಧಿ. ಅವರ ನಿಧನದಿಂದ ಕನ್ನಡಕ್ಕೆ ಆಘಾತ -ಎಸ್‌.ಎಂ.ಕೃಷ್ಣ
  • ಅವರು ಚಲನಲಚಿತ್ರ ರಂಗದ ಭೀಷ್ಮ. ಅಭಿಮಾನದ ಗಣಿ. ಎಲ್ಲರಿಗೂ ನಷ್ಟ -ಶ್ರೀ ಶಿವಕುಮಾರ ಸ್ವಾಮಿ, ಸಿದ್ದಗಂಗಾ ಕ್ಷೇತ್ರ, ತುಮಕೂರು.
  • ಅವರ ಮಾರ್ಗದರ್ಶನದಿಂದ ನಾನು ಬೆಳೆದೆ. ನಾನೀಗ ತಬ್ಬಲಿ -ಶ್ರೀನಾಥ್‌
  • ಮೌಲ್ಯಗಳನ್ನು ಚಿತ್ರಗಳ ಮೂಲಕ ಗಟ್ಟಿಯಾಗಿ ಜನರ ಮನದಲ್ಲಿ ನೆಟ್ಟವರು ರಾಜ್‌ಕುಮಾರ್‌ ಮಾತ್ರ -ಯು.ಅರ್‌.ಅನಂತಮೂರ್ತಿ
  • ಕಲೆಗೆ ಸಾವಿಲ್ಲ. ಕನ್ನಡ ಅಂದ್ರೆ ರಾಜ್‌, ರಾಜ್‌ ಅಂದ್ರೆ ಕನ್ನಡ. ಈಗ ಅವರೇ ಇಲ್ಲ... ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ -ರಾಜೇಂದ್ರಸಿಂಗ್‌ ಬಾಬು
  • ಅವರು ಮಹಾಮಾನವ -ಬರಗೂರು ರಾಮಚಂದ್ರಪ್ಪ
  • ಬೆಳ್ಳಿತೆರೆ ಮಸುಕು -ದ್ವಾರಕೀಶ್‌
  • ಡಾ.ರಾಜ್‌ರಿಂದ ಸಾಂಸ್ಕೃತಿಕ ನಾಯಕತ್ವ ಸಿಕ್ಕಿತ್ತು -ಟಿ.ಎನ್‌.ಸೀತಾರಾಂ
  • ರಾಜ್‌ರಂತಹ ಇನ್ನೊಬ್ಬ ವ್ಯಕ್ತಿ ಸದ್ಯಕ್ಕೆ ನಮ್ಮ ನಡುವೆ ಕಾಣುತ್ತಿಲ್ಲ. ಹೀಗಾಗಿ ಎಲ್ಲರಿಗೂ ದುಃಖವಾಗಿದೆ -ಅನಂತನಾಗ್‌
  • ಅವರೊಬ್ಬ ಪರಿಪೂರ್ಣ ವ್ಯಕ್ತಿ. ಮನೆ-ಮನಗಳಲ್ಲಿ ಇಂದು ಶೋಕವಿದೆ -ರವಿ ಬೆಳಗೆರೆ.
  • ರಾಜ್‌ ಒಬ್ಬ ಕರ್ಮಯೋಗಿ. ಸೂರ್ಯಚಂದ್ರ ಇರುವ ತನಕ ಅವರ ಹೆಸರಿರುತ್ತದೆ. ಅವರೊಂದು ವಿಶ್ವವಿದ್ಯಾಲಯ. ಅವರಿಲ್ಲದೆ ಕನ್ನಡವಿಲ್ಲ. ಕನ್ನಡವಿಲ್ಲದೆ ಅವರಿಲ್ಲ. -ವಿಷ್ಣುವರ್ಧನ್‌.
  • ಇಂಥ ವ್ಯಕ್ತಿ ಮುಂದೆ ಸಿಕ್ಕೋದಿಲ್ಲ. ಇದು ಖಚಿತ -ಅನಿಲ್‌ ಕುಂಬ್ಳೆ
  • ನಾನು ನೋಡಿದ ಮೊದಲ ಚಿತ್ರ ಬೇಡರ ಕಣ್ಣಪ್ಪ. ಕಡೇ ಚಿತ್ರ ಶಬ್ದವೇಧಿ -ಸಿದ್ದರಾಮಯ್ಯ
  ರಾಜ್‌ ನಿಧನಕ್ಕೆ ಚಿತ್ರೋದ್ಯಮದ ಗಣ್ಯರಿಂದ ಸಂತಾಪ
  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X