»   » ಪಲ್ಲವಿ ಚಿತ್ರಮಂದಿರಕ್ಕೆ ಕಲ್ಲು, ಸುಟ್ಟು ಬೂದಿಯಾದ ಬಸ್‌ಗಳು

ಪಲ್ಲವಿ ಚಿತ್ರಮಂದಿರಕ್ಕೆ ಕಲ್ಲು, ಸುಟ್ಟು ಬೂದಿಯಾದ ಬಸ್‌ಗಳು

Subscribe to Filmibeat Kannada

ಬೆಂಗಳೂರು : ರಾಜ್‌ ಅಂತಿಮಯಾತ್ರೆಯ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ವ್ಯಾನ್‌ನಲ್ಲಿ, ಕಂಠೀರವ ಸ್ಪುಡಿಯೋಗೆ ಮೆರವಣಿಗೆ ಮೂಲಕ ಗುರುವಾರ ಮಧ್ಯಾಹ್ನ ಕರೆದೊಯ್ಯಲಾಗುತ್ತಿದೆ.

ಲಕ್ಷಾಂತರ ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಕಂಠೀರವ ಕ್ರೀಡಾಂಗಣದ ಸಮೀಪ ಮತ್ತು ನಗರದ ಕೆಲವೆಡೆ ರಾಜ್‌ ಅಭಿಮಾನಿಗಳು ರೊಚ್ಚಿಗೆದ್ದ ಪರಿಣಾಮ ಹಿಂಸಾಚಾರ ಸಂಭವಿಸಿದೆ. ಅಶ್ರುವಾಯು ಸಿಡಿಸುವುದು ಮತ್ತು ಲಾಠಿ ಪ್ರಹಾರದ ಮೂಲಕ ಪರಿಸ್ಥಿತಿ ಹತೋಟಿಗೆ ಪೊಲೀಸರು ಮುಂದಾಗಿದ್ದಾರೆ.

ಪೊಲೀಸರು ಮತ್ತು ಅಭಿಮಾನಿಗಳ ಮಧ್ಯೆ ಒಂದು ರೀತಿಯ ಕಣ್ಣಾಮುಚ್ಚಾಲೆ ನಡೆದಿದೆ. ಕಲ್ಲು ತೂರಾಟ, ಬೆಂಕಿ ಹಚ್ಚುವ ಪ್ರಕರಣಗಳು ನಡೆದಿವೆ. ಪಲ್ಲವಿ, ನಟರಾಜ ಚಿತ್ರಮಂದಿರಗಳಿಗೆ ಅಭಿಮಾನಿಗಳು ಕಲ್ಲು ಬೀಸಿದ್ದಾರೆ. ನಾಲ್ಕು ಬಸ್‌ಗಳು ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿವೆ.

ದರ್ಶನ : ನಟ ರಜನಿಕಾಂತ್‌, ಪ್ರಭುದೇವ್‌, ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ ರಾವ್‌, ಕಂಠೀರವ ಕ್ರೀಡಾಂಗಣದಲ್ಲಿ ರಾಜ್‌ರ ಅಂತಿಮ ದರ್ಶನ ಪಡೆದರು.

ಬಂದ್‌ : ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಘೋಷಿತ ಬಂದ್‌ ಜಾರಿಗೆ ಬಂದಿದೆ. ರಾಜಧಾನಿ ನಗರದಲ್ಲಿ ಅಂಗಡಿಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ಬಸ್‌ನಿಲ್ದಾಣ ಬಿಗೋ ಎನ್ನುತ್ತಿದೆ.

ಕನ್ನಡ ಧ್ವಜಗಳೊಂದಿಗೆ, ಕನ್ನಡಪರ ಘೋಷಣೆಗಳನ್ನು ಕೂಗಿಕೊಂಡು, ರಸ್ತೆಗಳಲ್ಲಿ ರಾಜ್‌ ಅಭಿಮಾನಿಗಳು ಸುತ್ತಾಡುತ್ತಿರುವ ದೃಶ್ಯ ಕಂಡು ಬಂದಿದೆ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ವಿರಳ ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಕೇಬಲ್‌ ಬಂದ್‌ : ರಾಜ್‌ ಶೋಕಾಚರಣೆ ಹಿನ್ನೆಲೆ ರಾಜಧಾನಿಯಲ್ಲಿ ಕನ್ನಡ ಚಾನಲ್‌ಗಳನ್ನು ಹೊರತುಪಡಿಸಿ, ಉಳಿದ ಭಾಷೆಯ ಚಾನಲ್‌ಗಳನ್ನು ಕೇಬಲ್‌ ನಿರ್ವಾಹಕರು ಬಂದ್‌ ಮಾಡಿದ್ದಾರೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada