»   » ಮೋಟಮ್ಮನ ಹಾಡಿಗೆ ಕುಣಿಯದ ರಮೇಶ್‌

ಮೋಟಮ್ಮನ ಹಾಡಿಗೆ ಕುಣಿಯದ ರಮೇಶ್‌

Posted By:
Subscribe to Filmibeat Kannada

ನಾನು ಹಾಡ್ತೀನಿ. ಅದಕ್ಕೆ ರಮೇಶ್‌ ಕುಣೀತಾರೆ ಅಂತ ಭರಪೂರ ಭರವಸೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಹೇಳಿ, ಹಾಡಲು ಶುರುವಿಟ್ಟರು. ‘ಶರಣು ಶರಣು ದೇವರಿಗೆ...’ ಅಂತ ಮೋಟಮ್ಮ ಹಾಡುತ್ತಿದ್ದರೆ, ರಮೇಶ್‌ ಚಪ್ಪಾಳೆ ಹೊಡೆದರೇ ವಿನಃ ಅಪ್ಪಿ ತಪ್ಪಿ ಕೂಡ ಹೆಜ್ಜೆ ಹಾಕಲಿಲ್ಲ.

ಹಾಡು ಮುಗಿಸಿದ ಮೋಟಮ್ಮ, ‘ಯಾಕೆ ಕುಣೀಲಿಲ್ಲ’ ಅಂತ ಮುಜುಗರ ಪಟ್ಟುಕೊಳ್ಳದೆ ಕೇಳಿಯೇಬಿಟ್ಟರು. ಅದಕ್ಕೆ ರಮೇಶ್‌ ತಮ್ಮ ಎಂದಿನ ಖದರಿನ ಮುಗುಳ್ನಗೆ ನಕ್ಕು ಸುಮ್ಮನಾದರು.

ಮೇ 12ನೇ ತಾರೀಕು ಬೆಂಗಳೂರಲ್ಲಿ ನಡೆದ ನಗರ್ತ ಮಹಿಳಾ ಅಭಿವೃದ್ಧಿ ಸಂಘದ 3ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಡೆದ ಘಟನೆಯಿದು.

ವೇದಿಕೆಯಲ್ಲಿ ರಮೇಶ್‌ ಇದ್ದ ಕಾರಣ ಮೋಟಮ್ಮನವರ ಮಾತು ಮಹಿಳಾ ಕಲ್ಯಾಣ ವ್ಯಾಪ್ತಿಯಿಂದ ಸಿನಿಮಾದತ್ತ ವಾಲಿತು. ಬಂಡಲ್‌ ಚಿತ್ರ ತಯಾರಿಸುವ ಬದಲು ಸಮಾಜಕ್ಕೆ ಮಾದರಿಯಾಗುವ ಚಿತ್ರ ಮಾಡಿ. ಡಕಾಯಿತಿ- ರೇಪ್‌ ಸೀನ್‌ ತುರುಕಬೇಡಿ ಎಂಬುದು ಮೋಟಮ್ಮ ಕೊಟ್ಟ ಮುಫತ್‌ ಸಲಹೆ. ‘ಎಫ್‌’ ಹಾಗೂ ‘ಸಿ’ ಚಾನೆಲ್‌ಗಳನ್ನು ನೋಡಿದರೆ ತಮಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವಂತಾಗುತ್ತೆ ಎಂದ ಸಚಿವೆ, ಸಿನಿಮಾ ಚೆನ್ನಾಗಿದೆ ಅಂತ ಗೊತ್ತಾದರೆ ಥಿಯೇಟರಿಗೆ ಹೋಗಿ ನೋಡಿಯೇ ತೀರುತ್ತಾರಂತೆ.

ಚಿಕ್ಕದಾಗಿ ಮಾತಾಡಿದ ರಮೇಶ್‌, ಹೆಂಡತಿ ಕಪಾಳಕ್ಕೆ ಹೊಡೆಯುವ ಹಾಗೂ ಗಂಡನ ಕಾಲಿಗೆ ಬೀಳುವ ದೃಶ್ಯಗಳನ್ನು ತಾವು ಪ್ರಯತ್ನ ಪೂರ್ವಕವಾಗಿ ತಪ್ಪಿಸುತ್ತೇನೆ ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada