ರಾಧಿಕಾ ಮತ್ತು ದಾಮಿನಿ ಪೈಪೋಟಿಗೆ ಬಿದ್ದವರಂತೆ ಎದೆಗಾರಿಕೆ ಪ್ರದರ್ಶಿಸಿರುವ ‘ಗುಡ್‌ಲಕ್’ ಚಿತ್ರ ಈ ವಾರ ತೆರೆಕಂಡಿಲ್ಲ. ಮಸಾಲೆ ಪ್ರೇಕ್ಷಕರು ಮುಂದಿನವಾರದ ತನಕ ಕಾಯದ ಹೊರತು ಬೇರೆ ದಾರಿ ಇಲ್ಲ!
ಮಕ್ಕಳ ಚಿತ್ರ ‘ತುತ್ತೂರಿ’ ಈ ವಾರ ತೆರೆಕಂಡಿದೆ. ಜಯಮಾಲಾ ಮೇಡಂ ಖುಷಿಯಲ್ಲಿದ್ದಾರೆ. ಚಿತ್ರಕ್ಕೆ ಜನ ಬರದಿದ್ದರೂ ಪರವಾಗಿಲ್ಲ, ಅವಾರ್ಡ್ ಬಂದ್ರೆ ಸಾಕು ಅನ್ನೋದು ಅವರ ಅಭಿಲಾಷೆ!
ಈ ವಾರ ತೆರೆಕಂಡಿರುವ ‘ಜೂಲಿ’ ಚಿತ್ರ ರಮ್ಯಾ ಮೇಡಂಳ ಇನ್ನೊಂದು ಮುಖ ತೋರಿಸಿದೆ. ಸುಂಟರಗಾಳಿ ರಕ್ಷಿತಾ ಸಹಾ ಈ ಸಿನಿಮಾ ನೋಡಿ ಅಬ್ಬಬ್ಬ ಅಂತಳಂತೆ ಅನ್ನೋದು ಗಾಂಧಿನಗರದಲ್ಲಿನ ಲೇಟೆಸ್ಟ್ ಪಿಸುಗುಸು.
ಮಚ್ಚಿನ ಚಿತ್ರ ‘ಪೂಜಾರಿ’ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಚಿತ್ರದ ಮೂಲಕ ನಾಯಕ ನಟರಾಗಿ ಆದಿ ಲೋಕೇಶ್ ಬಡ್ತಿ ಪಡೆದಿದ್ದಾರೆ. ಪೂಜಾರಿ ಜೋಡಿಯಾಗಿ ವರ್ಷ ಎಂಬ ಮೋಹಕ ನಟಿ ಆಯ್ಕೆಗೊಂಡಿದ್ದಾರೆ. ‘ನೆನಪಿರಲಿ’ ಚಿತ್ರದ ಮೂಲಕ ಚಿತ್ರರಸಿಕರ ಕಣ್ ಸೆಳೆದಿದ್ದ ಈ ಚೆಲುವೆಗೆ ಚಿತ್ರದಲ್ಲಿ ಮೋಹಕ ಪಾತ್ರವಿದೆಯಂತೆ!
ಗಾಜನೂರಿನಲ್ಲಿ ಡಾ.ರಾಜ್‌ಕುಮಾರ್ ಅವರ ತಿಂಗಳ ತಿಥಿ ಶುಕ್ರವಾರ ನೆರವೇರಿತು. ರಾಜ್ ಹೆಸರಲ್ಲಿ ಪ್ರತಿವರ್ಷ ಪ್ರಶಸ್ತಿ ನೀಡುವುದಾಗಿ ರಾಘವೇಂದ್ರ ರಾಜ್‌ಕುಮಾರ್ ಘೋಷಿಸಿದ್ದಾರೆ.
ನೋಡ್ತಾ ನೋಡ್ತಾ ಮಾಸ್ಟರ್ ಕಿಶನ್‌ರ ‘ಕೇರಾಫ್ ಫುಟ್‌ಪಾತ್’ ಚಿತ್ರ ತಾರಾ ರಂಗನ್ನು ಹೆಚ್ಚಿಸಿಕೊಳ್ಳುತ್ತಿದೆ. ಜಾಕಿಶ್ರಾಫ್ ಚಿತ್ರದಲ್ಲಿದ್ದಾರೆ ಅನ್ನೋದು ಕೇಳಿ ಗಾಂಧಿನಗರ ಮೂಗಿನ ಮೇಲೆ ಬೆರಳಿಟ್ಟಿತ್ತು. ಈ ಚಿತ್ರದಲ್ಲೀಗ ನಟ ಅಂಬರೀಷ್ ಮತ್ತು ಸುದೀಪ್ ಸಹಾ ನಟಿಸುತ್ತಿದ್ದಾರೆ.
Post your views
ಮುಖಪುಟ / ಸ್ಯಾಂಡಲ್‌ವುಡ್
Story first published: Thursday, April 23, 2026, 10:06 [IST]