»   » ಮೇ 12ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾದವರಿವರು...

ಮೇ 12ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾದವರಿವರು...

Posted By: Staff
Subscribe to Filmibeat Kannada

ಕರ್ನಾಟಕ ಟೆಲಿವಿಷನ್‌ ಒಕ್ಕೂಟದ ಹೊಸ ಅಧ್ಯಕ್ಷರಾಗಿ ಮುನ್ನುಡಿ ಖ್ಯಾತಿಯ ಪಿ.ಶೇಷಾದ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಮೇ 12, ಭಾನುವಾರ ಚುನಾವಣೆ ನಡೆಯಿತು.

2002ರಿಂದ 2004ರ ಅವಧಿಯಲ್ಲಿ ಶೇಷಾದ್ರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಒಕ್ಕೂಟದ ಇತರೆ ಹುದ್ದೆಗಳಿಗೆ ಆಯ್ಕೆಯಾಗಿರುವವರಿವರು....

ವೈಶಾಲಿ ಕಾಸರವಳ್ಳಿ ಮತ್ತು ಕೆ.ಎಸ್‌. ಶ್ರೀಧರ್‌ (ಉಪಾಧ್ಯಕ್ಷರು)
ಬಿ.ಸುರೇಶ್‌ ಹಾಗೂ ರವಿಕಿರಣ್‌ (ಕಾರ್ಯದರ್ಶಿಗಳು)
ಶ್ರೀನಾಥ್‌ ಮೇಲಿನಕೊಪ್ಪ (ಜಂಟಿ ಕಾರ್ಯದರ್ಶಿ)
ಎಂ.ಎಸ್‌.ದತ್ತಾತ್ರೇಯ ಉರುಫ್‌ ಗೋವಾ ದತ್ತು (ಖಜಾಂಚಿ)
ಸುಂದರಶ್ರೀ, ಉಮಾಮಹೇಶ್ವರ್‌, ಶಶಿಕುಮಾರ್‌, ಶೈಲಜಾ ನಾಗ್‌, ರಾಜೇಂದ್ರ ಸಿಂಗ್‌, ಶ್ರೀನಿವಾಸ ಎಂ, ಜಯರಾಮ ನಾಯಕ್‌, ಉಮೇಶ್‌ ನಾಗೋರ್‌, ಕಿಟ್ಟಿ ಕಲಾಗಂಗೋತ್ರಿ, ಕೃಷ್ಣಮೂರ್ತಿ ಬೆನಕ, ರಮೇಶ್‌ ಪಂಡಿತ್‌ ಮತ್ತು ರಾಜಶೇಖರ್‌ (ಕಾರ್ಯಕಾರಿ ಸಮಿತಿ ಸದಸ್ಯರು) .

ಸಾರಿಕಾ ರಾಜೇ ಅರಸ್‌ ಸುನಿಲ್‌ ಪುರಾಣಿಕ್‌, ಕೆಎಸ್‌ಎಲ್‌ ಸ್ವಾಮಿ, ಬಿ.ವಿ.ರಾಧಾ ಸೇರಿದಂತೆ ಸುಮಾರು 150 ಕಿರುತೆರೆ ಕಲಾವಿದರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪಿ.ಶೇಷಾದ್ರಿ ಸೂಕ್ತ ವ್ಯಕ್ತಿ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಈ ಕಾರಣಕ್ಕೇ ಶೇಷಾದ್ರಿ ಅವಿರೋಧವಾಗಿ ಆಯ್ಕೆಯಾದರು.

ಒಕ್ಕೂಟದಲ್ಲಿ ಪ್ರಸ್ತುತ 600 ಕಿರುತೆರೆ ಕಲಾವಿದರು ಸದಸ್ಯರಾಗಿದ್ದು, ಈ ಸಂಖ್ಯೆಯನ್ನು ಇನ್ನು 3 ತಿಂಗಳಲ್ಲಿ 1000ಕ್ಕೆ ಮುಟ್ಟಿಸುವುದು ತಮ್ಮ ಗುರಿ ಎಂದು ಹೊಸದಾಗಿ ಆಯ್ಕೆಯಾದ ಕಾರ್ಯದರ್ಶಿ ರವಿಕಿರಣ್‌ ಹೇಳಿದರು.(ಇನ್ಫೋ ವಾರ್ತೆ)

English summary
Seshadri heads TV artistes association

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada