‘ಚಿನ್ನಾರಿ ಮುತ್ತ’ದಿಂದ ‘ಶ್ರೀ’ವರೆಗೆ
‘ಚಿನ್ನಾರಿ ಮುತ್ತ’ ಚಿತ್ರದ ವಿಜಯ ರಾಘವೇಂದ್ರ ಹೆಸರಿಗೆ ಈಗ ‘ಶ್ರೀ’ ಸೇರ್ಪಡೆಯಾಗಿದೆ. ಅವರ ಬಹು ನಿರೀಕ್ಷೆಯ ‘ಶ್ರೀ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ.
ಚಿತ್ರತಂಡ ಮೊದಲ ಹಂತದ ಚಿತ್ರೀಕರಣಕ್ಕಾಗಿ ಬ್ಯಾಂಕಾಂಗ್‌ಗೆ ತೆರಳುತ್ತಿದ್ದು, ಜೂ.20ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ಮೂರು ಹಾಡುಗಳು ಸೇರಿದಂತೆ ಚಿತ್ರದ ಶೇ.40ರಷ್ಟು ಚಿತ್ರೀಕರಣ ಬ್ಯಾಂಕಾಂಗ್‌ನಲ್ಲೇ ನಡೆಯಲಿದೆ. ‘ಜೋಗಿ’ ಚಿತ್ರದ ಮೋಹಕ ಬೆಡಗಿ ಜೆನಿಫರ್ ಕೋತ್ವಾಲ್ ‘ಶ್ರೀ’ಗೆ ಜೋಡಿಯಾಗಿದ್ದಾಳೆ.
ಸಾಫ್ಟ್ ಕ್ಯಾರೆಕ್ಟರ್‌ಗಳಲ್ಲಿಯೇ ಈವರೆಗೆ ಕಾಣಿಸಿಕೊಂಡಿದ್ದ ವಿಜಯರಾಘವೇಂದ್ರ ಅವರಿಗೆ ಚಿತ್ರದಲ್ಲೊಂದು ಸಾಹಸಮಯ ಪಾತ್ರ ಸಿಕ್ಕಿದೆ.
ಬ್ಯಾಂಕಾಂಗ್‌ಗೆ ತೆರಳಿ, ಚೀನೀಯರ ವಿಶಿಷ್ಟ ಬಾಕ್ಸಿಂಗ್ ಕಲೆ ಮುಅಯ್ ಥಾಯ್ ಕಲಿತಿರುವ ರಾಘವೇಂದ್ರ ಅವರ ವೃತ್ತಿ ಬದುಕಿನಲ್ಲಿ ಇದು ವೈವಿಧ್ಯಮಯ ಪಾತ್ರ. ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಕಾಣುವಂತಹ ಛೇಸಿಂಗ್ ದೃಶ್ಯಗಳು ಚಿತ್ರದಲ್ಲಿವೆ.
ಸ್ಟಂಟ್‌ಗೆ ಒತ್ತುಕೊಟ್ಟಿದ್ದರೂ ಪ್ರತಿಯಾಂದು ಸ್ಟಂಟ್ ಸಹಾ ಚಿತ್ರಕ್ಕೆ ಸಾಂದರ್ಭಿಕವಾಗಿದೆ. ಇದೊಂದು ಟೆಕ್ನಿಕಲಿ ಸೌಂಡ್ ಚಿತ್ರ ಎನ್ನುತ್ತಾರೆ ‘ಶ್ರೀ’ ನಿರ್ದೇಶಕ ಪ್ರಕಾಶ್. ‘ಖುಷಿ’ ಮತ್ತು ‘ರಿಷಿ’ ಚಿತ್ರಗಳ ನಿರ್ದೇಶಕ ಪ್ರಕಾಶ್ ‘ಶ್ರೀ’ಚಿತ್ರದ ಮೂಲಕ ಯಶಸ್ಸಿನ ಹ್ಯಾಟ್ರಿಕ್ ಮುಂದುವರೆಸುವರೆ ಎಂಬುದನ್ನು ಕಾದು ನೋಡಬೇಕು.
ಮೋನಾಲಿಸಾ ಚಿತ್ರದ ನಿರ್ಮಾಪಕ ಜೋಡಿ ಸಂತೋಷ್ ಮತ್ತು ದುಶ್ಯಂತ್ ‘ಶ್ರೀ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಾಹಸ ಪ್ರಧಾನವಾದ ಚಿತ್ರದಲ್ಲಿ ರವಿವರ್ಮ ಮತ್ತು ಬ್ಯಾಂಕಾಕ್‌ನ ಮಾವ್ ಸಾಹಸ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವರು.
ಅವಿನಾಶ್, ಅನಂತ್‌ನಾಗ್, ಸೆಕ್ಸ್ ಬಾಂಬ್ ಶಕೀಲಾ ಮತ್ತಿತರರ ತಾರಾಬಳಗ ಚಿತ್ರದಲ್ಲಿದೆ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications