»   » ಕನ್ನಡದ ಹುಡುಗಿ ಆಗಬಹುದಾಗಿದ್ದ ಐಶ್ವರ್ಯ ಈಗ ತಮಿಳ್ಮಣಿ

ಕನ್ನಡದ ಹುಡುಗಿ ಆಗಬಹುದಾಗಿದ್ದ ಐಶ್ವರ್ಯ ಈಗ ತಮಿಳ್ಮಣಿ

Posted By: Staff
Subscribe to Filmibeat Kannada

ಕ್ಷ್ಮಿ ಇನ್ನೂ ಕನ್ನಡ ಹಿರಿತೆರೆಯಲ್ಲಿ ಮುಖದೋರುತ್ತಿರುವಾಗಲೇ ಆಕೆಯ ಪುತ್ರಿ ಅಮ್ಮನ ಅನುಭವದ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳದೆ ಅಡ್ಡ ದಾರಿ ಹಿಡಿದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸ್ಮರಣೆ ಯಾಕೆಂದರೆ, ಲಕ್ಷ್ಮಿ ಪುತ್ರಿ ಐಶ್ವರ್ಯ ಈಗ ಅಧಿಕೃತವಾಗಿ ಎರಡನೇ ಹಾಗೂ ಅನಧಿಕೃತವಾಗಿ ಮೂರನೇ ಮದುವೆ ಆಗಲು ಹೊರಟಿದ್ದಾಳೆ. ಈಗ ಈಕೆ ಒಂದು ಹೆಣ್ಣು ಮಗುವಿನ ತಾಯಿಯೂ ಹೌದು.

ಐಶ್ವರ್ಯ ಅನ್ವರ್ಥ ನಾಮಿ. ಸೌಂದರ್ಯಕ್ಕೂ ಕೊರೆ ಇರಲಿಲ್ಲ. ಪ್ರತಿಭೆಯೂ ಭರಪೂರ. ಅಮ್ಮ ಹೇಳಿದ ಮಾತು ಕೇಳಿದ್ದಿದ್ದರೆ, ಇಷ್ಟೊತ್ತಿಗೆ ಕನ್ನಡ ಚಿತ್ರಗಳಲ್ಲಿ ಕೊಂಚವಾದರೂ ಹೆಸರು ಮಾಡಿರಬಹುದಿತ್ತು. ಆದರೆ ಇನ್ನೂ ಐಸ್‌ ಕ್ರೀಂ ತಿನ್ನುವ ವಯಸ್ಸಲ್ಲೇ ತನ್ವೀರ್‌ ಎಂಬಾತನ ಲವ್ವಲ್ಲಿ ಬಿದ್ದಳು. 'ಬೇಡಮ್ಮಾ, ನನ್ನ ಮಾತು ಕೇಳು. ಆ ತನ್ವೀರ್‌ ಒಳ್ಳೆಯವನಲ್ಲ" ಅಂತ ಅಮ್ಮ ಲಕ್ಷ್ಮಿ ಥೇಟ್‌ 'ಬೆಂಕಿಯ ಬಲೆ" ಧಾಟಿಯಲ್ಲೇ ಹೇಳಿದರೂ ಐಶ್ವರ್ಯ ಕಿವಿಗೊಡಲಿಲ್ಲ. ಓಡಿ ಹೋಗಿ, ತನ್ವೀರ್‌ನನ್ನು ಮದುವೆಯಾದಳು. ಕೆಲವೇ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವೂ ಹುಟ್ಟಿತು. ಆಮೇಲೇ ಗೊತ್ತಾದದ್ದು ತನ್ವೀರ್‌ ಒಬ್ಬ ಡ್ರಗ್‌ ಅಡಿಕ್ಟ್‌, ಫ್ಲರ್ಟ್‌ ಅಂತ. ತನ್ವೀರನಿಂದ ಡಿವೋರ್ಸ್‌ ಪಡೆದು, ಕಂಪ್ಯೂಟರ್‌ ಕೆಲಸಕ್ಕೆ ಸೇರಿದಳು ಐಶ್ವರ್ಯ.

ಕೆಲಸದಲ್ಲಿ ಚುರುಕುತನ ತೋರುವ ಮುನ್ನವೇ ಆ ಕಂಪ್ಯೂಟರ್‌ ಕಂಪನಿಯ ಒಡೆಯ ಐಶ್ವರ್ಯಾ ಪಾದದಡಿಯಲ್ಲಿ ಕುಳಿತಿದ್ದ. ಅವನಿಗೂ ತಥಾಸ್ತು ಅಂದಳು ಐಶ್ವರ್ಯ. ತನು- ಮನ ಸಕಲವನ್ನೂ ಆತನಿಗೆ ಅರ್ಪಿಸಿದ ಐಶ್ವರ್ಯ ಆ ಒಡೆಯನ ಜೊತೆ ಮದುವೆ ಮಾತ್ರ ಆಗಲಿಲ್ಲ. ಆಮೇಲೇನಾಯಿತೋ ಏನೋ ಅವನಿಂದಲೂ ಕಳಚಿಕೊಂಡಳು. ಸೀದಾ ಅಜ್ಜಿ ಮನೆಗೆ ಹೋಗಿ ಟೆಂಟ್‌ ಹಾಕಿದಳು.

ಸ್ವಲ್ಪ ಕಾಲ ಐಶ್ವರ್ಯ ಸೈಲೆಂಟ್‌. ಆಮೇಲೆ ಲಗ್ಗೆ ಇಟ್ಟಿದ್ದು ತಮಿಳು ಕಿರುತೆರೆಗೆ. ಸಾಕಷ್ಟು ಸೀರಿಯಲ್‌ಗಳು ಸಿಕ್ಕಿ, ಒಂದಷ್ಟು ದುಡ್ಡು ಅಂತ ಕಾಣತೊಡಗಿದೊಡನೆ ಮತ್ತೆ ಐಶ್ವರ್ಯ ಮನಸ್ಸು ಪುಳಕಿತವಾಯಿತು. ಆಗ ಹತ್ತಿರಾದದ್ದು ಕರಾಟೆ ಮಣಿಯ ಮಗ ರಾಜು. ಇಬ್ಬರಲ್ಲೂ ಮೊಳಕೆಯಾಡೆದ ಪ್ರೇಮ ಈಗ ಹೆಮ್ಮರವಾಗಿದೆ. ಸದ್ಯದಲ್ಲೇ ಮಹಾಬಲೇಶ್ವರದಲ್ಲಿ ಮಣಿ- ಐಶ್ವರ್ಯ ಮದುವೆ. ಅಮ್ಮ ಲಕ್ಷ್ಮಿ ಈ ಮದುವೆಗೆ ಅಟೆಂಡ್‌ ಮಾಡುವ ಬಗ್ಗೆ ವಿಷಯ ತಿಳಿದಿಲ್ಲ. ತೀರಾ ಹತ್ತಿರದವರಿಗೆ ಮಾತ್ರ ಈ ಮದುವೆಗೆ ಬುಲಾವು. ಐಶ್ವರ್ಯಾಳ ಮೊದಲಿಬ್ಬರು ಸಂಗಾತಿಗಳೂ ಮದುವೆಗೆ ಹಾಜರಾಗುವ ಆತಂಕವಿದೆಯಂತೆ !

English summary
Marriage bell rings again and again for Laksmis daughter Aishwarya!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada