»   » ಭೂಗತ ಲೋಕದಿಂದ ಪದೇ ಪದೇ ಬಂದ ಅನಾಮಧೇಯ ಕರೆ

ಭೂಗತ ಲೋಕದಿಂದ ಪದೇ ಪದೇ ಬಂದ ಅನಾಮಧೇಯ ಕರೆ

Posted By: Staff
Subscribe to Filmibeat Kannada

ಭೂಗತ ಲೋಕದ ಎಡಬಿಡದ ನೆರಳು ಬಾಲಿವುಡ್‌ ಬಗಲಲ್ಲೇ ಇನ್ನೂ ಇದೆ ಅನ್ನೋದಕ್ಕೆ ಇದು ತಾ-ಜಾ ನಿದರ್ಶನ- 'ಬಾಬಾ" ಚಿತ್ರೀಕರಣಕ್ಕೆಂದು ಚೆನ್ನೈಗೆ ನಿಗದಿತ ಶೆಡ್ಯೂಲ್‌ಗೆ ನಟಿ ಮೊನಿಷಾ ಕೊಯಿರಾಲ ಏನಾದರೂ ಹೋಗಿದ್ದಿದ್ದರೆ, ಇಷ್ಟೊತ್ತಿಗೆ ಅವರ ಅಪಹರಣವಾಗಿರುತ್ತಿತ್ತು !

ವಾರಗಳ ಹಿಂದೆಯೇ ರೂಪಿತವಾಗಿದ್ದ ಈ ಕಿಡ್ನ್ಯಾಪ್‌ ಪ್ಲಾಟ್‌ ವಾಸನೆ ಪೊಲೀಸರಿಗೆ ಈಗ ಹೊಡೆದಿದೆ. ಮೊನಿಷಾ ಒತ್ತಡ ಎಷ್ಟರ ಮಟ್ಟಿಗಿತ್ತು ಅನ್ನೋದು ಇದರಿಂದ ಗೊತ್ತಾಗುತ್ತದೆ. ಯಾವುದೋ ಅನಾಮಧೇಯ ಫೋನು ಕರೆಯಾಂದು ಮೊನಿಷಾಗೆ ಪದೇ ಪದೇ ಬರತೊಡಗಿತ್ತು. ಹುಷಾರಾದ ಮೊನಿಷಾ, 'ಬಾಬಾ" ಶೂಟಿಂಗ್‌ ಶೆಡ್ಯೂಲನ್ನು ಮೂರು ದಿನ ಹಿಂದಕ್ಕೆ ಹಾಕಿಕೊಂಡು, ಬೇಗ ಕೆಲಸ ಮುಗಿಸಿ ಬಂದರು. ಅಷ್ಟೂ ಕೆಲಸವನ್ನು ಮಾಡುವಾಗ ಅವರು ಉಸಿರನ್ನು ಬಿಗಿ ಹಿಡಿದಿದ್ದರು. ಅಪಹರಣದ ಆತಂಕದಿಂದ ಪಾರಾಗಿ ಬಂದವರೇ ಹೇಗೋ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಈಗ ಅವರಿಗೆ ಪೊಲೀಸರ ಸರ್ಪಗಾವಲು.

ಅಪಹರಣದ ಹುನ್ನಾರ ಹೂಡಿದ್ದು ಯಾರು ಅಂತ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ರಿkುೕ ಟಿವಿಯ 'ಸವಾಲ್‌ ದಸ್‌ ಕರೋಡ್‌ ಕಾ" ಎಂಬ ಫ್ಲಾಪ್‌ ಕಾರ್ಯಕ್ರಮದಲ್ಲಿ ಮೊನಿಷಾ ಕಂಡಾಪಟ್ಟೆ ದುಡ್ಡು ಮಾಡಿದ್ದಾರೆಂಬ ಕಾರಣಕ್ಕೇ ಅದರ ಮೇಲೆ ಭೂಗತ ಲೋಕದವರು ಕಣ್ಣಿಟ್ಟಿದ್ದಾರೆ ಎಂಬುದು ಪೊಲೀಸರ ಶಂಕೆ. ಈಗಲೂ ಮೊನಿಷಾ ಅಪಹರಣದ ಬೆದರಿಕೆಯಲ್ಲೇ ಇದ್ದಾರೆ !

English summary
Underworld shadow on Bollywood : Now Manisha Koirala is the target

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada