ಪೇಜ್ 3, ವೀರ್ ಝಾರಾ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ
ನವದೆಹಲಿ : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು, ‘ಪೇಜ್ 3’ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿದೆ.
ಹಿಂದಿಯ ‘ವೀರ್ ಝಾರಾ’, ತಮಿಳಿನ ‘ಆಟೋಗ್ರಾಫ್’ ಚಿತ್ರಗಳು ಅತ್ಯುತ್ತಮ ಜನಪ್ರಿಯ ಚಿತ್ರಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಹಿಂದಿ ನಿರ್ದೇಶಕ ಸುಧೀರ್ ಮಿಶ್ರಾ ಅಧ್ಯಕ್ಷತೆಯ ಆಯ್ಕೆ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿದೆ. ನೇತಾಜಿ ಸುಭಾಸ್ ಚಂದ್ರ ಬೋಸ್ ಜೀವನಸಾರ ಬಿಂಬಿಸುವ ‘ಬೋಸ್’ ಚಿತ್ರಕ್ಕೆ ನರ್ಗೀಸ್‌ದತ್ ಪ್ರಶಸ್ತಿ ಲಭಿಸಿದೆ.
ಇತರ ಪ್ರಶಸ್ತಿಗಳ ವಿವರ :
ಅತ್ಯುತ್ತಮ ನಟ : ಸೈಫ್ ಆಲಿ ಖಾನ್( ಚಿತ್ರ -ಹಮ್ ತುಮ್)
ಅತ್ಯುತ್ತಮ ನಟಿ : ತಾರಾ(ಚಿತ್ರ -ಹಸೀನಾ)
ಅತ್ಯುತ್ತಮ ನಿರ್ದೇಶಕ : ಬುದ್ಧದೇವ್ ದೇಶ್‌ಗುಪ್ತಾ(ಬೆಂಗಾಲಿ ಚಿತ್ರ -ಸ್ವಪ್ನೇರ್ ದಿನ್)
ಅತ್ಯುತ್ತಮ ಬಾಲ ನಟ : ಓಮ್ ಉತ್ಕಾರ್( ಚಿತ್ರ -ಚೋಟಾ ಸಿಪಾಯಿ)
ಅತ್ಯುತ್ತಮ ಗಾಯಕ : ಉದಿತ್ ನಾರಾಯಣ್(ಸ್ವದೇಸ್)
ಅತ್ಯುತ್ತಮ ಗಾಯಕಿ : ಚಿತ್ರಾ ಸುಬ್ರಮಣ್ಯ(ಆಟೋಗ್ರಾಫ್)
ಅತ್ಯುತ್ತಮ ಗೀತ ಸಾಹಿತ್ಯ : ಬಿ.ವಿಜಯ್(ಆಟೋಗ್ರಾಫ್)
ಅತ್ಯುತ್ತಮ ವಸ್ತ್ರವಿನ್ಯಾಸ : ಹಸೀನಾ
ಅತ್ಯುತ್ತಮ ಸಾಮಾಜಿಕ ಪರಿಣಾಮಕಾರಿ ಚಿತ್ರ : ಹಸೀನಾ
ಕನ್ನಡದ ಅತ್ಯುತ್ತಮ ಚಿತ್ರ : ಬೇರು
(ಪಿಟಿಐ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications