»   » ತಾರಾಗೆ ಪ್ರಥಮ ರಾಷ್ಟ್ರಪ್ರಶಸ್ತಿಯ ಹಾರ

ತಾರಾಗೆ ಪ್ರಥಮ ರಾಷ್ಟ್ರಪ್ರಶಸ್ತಿಯ ಹಾರ

Subscribe to Filmibeat Kannada

ಬೆಂಗಳೂರು : ನಟಿ ಮತ್ತು ನಿರ್ಮಾಪಕಿ ತಾರಾ ಅವರು ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಹಸೀನಾ’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ಸಂದಿದೆ.

ಸುದ್ದಿ ಕೇಳಿ ನನಗೆ ಖುಷಿಯಾಯಿತು...ರೋಮಾಂಚನವಾಯಿತು ಎಂದು ತಾರಾ ರಾಷ್ಟ್ರಪ್ರಶಸ್ತಿ ಪಡೆದ ಖುಷಿಯನ್ನು ಬುಧವಾರ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

ಈ ಎಲ್ಲದರ ಕೀರ್ತಿ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರಿಗೆ ಸಲ್ಲಬೇಕು. ತಂತ್ರಜ್ಞರಿಂದ ಹಿಡಿದು ಪ್ರತಿಯಾಬ್ಬರು ಚಿತ್ರಕ್ಕೆ ಶ್ರಮಿಸಿದ್ದಾರೆ. ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದು ಹಸೀನಾ ನಿರ್ಮಾಪಕಿಯೂ ಆದ ತಾರಾ ಅಭಿಪ್ರಾಯಪಟ್ಟಿದ್ದಾರೆ.

ನನ್ನ ಕೆಲಸಕ್ಕೆ ಪ್ರಶಸ್ತಿ ಪ್ರೋತ್ಸಾಹ ನೀಡಿದೆ. ಶೀಘ್ರದಲ್ಲಿಯೇ ಮತ್ತೊಂದು ಹೊಸ ಚಿತ್ರವನ್ನು ನಿರ್ಮಾಣ ಮಾಡುವ ಗುರಿ ಹೊಂದಿರುವುದಾಗಿ ಹೇಳಿದರು.

ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಹಸೀನಾ ಚಿತ್ರದಲ್ಲಿ ತಾರಾ ನಟಿಸಿದ್ದಾರೆ.

ನಾಲ್ಕು ಪ್ರಶಸ್ತಿ : ಅತ್ಯುತ್ತಮ ನಟಿ, ವಸ್ತ್ರವಿನ್ಯಾಸ, ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿಗಳನ್ನು ‘ಹಸೀನಾ’ ಪಡೆದಿದೆ. ಪಿ.ಶೇಷಾದ್ರಿ ನಿರ್ದೇಶನದ ‘ಬೇರು’ ಚಿತ್ರ ಪ್ರಾದೇಶಿಕ ವಿಭಾಗದಲ್ಲಿ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿದೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada