»   » ಬಹು ನಿರೀಕ್ಷಿತ ‘ಗಂಡ ಹೆಂಡತಿ’ಗೆ ‘ಎ’ ಸರ್ಟಿಫಿಕೇಟ್‌!

ಬಹು ನಿರೀಕ್ಷಿತ ‘ಗಂಡ ಹೆಂಡತಿ’ಗೆ ‘ಎ’ ಸರ್ಟಿಫಿಕೇಟ್‌!

Subscribe to Filmibeat Kannada

‘ಗಂಡ ಹೆಂಡತಿ’ ಚಿತ್ರಕ್ಕೆ ಇನ್ನು ಯಾರ ಕಾಟವೂ ಇಲ್ಲ! ಚಿತ್ರಕ್ಕೆ ಸ್ಥಳೀಯ ಸೆನ್ಸಾರ್‌ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿ ಕೈತೊಳೆದು ಕೊಂಡಿದೆ. ಚಿತ್ರದ ಯಾವುದೇ ದೃಶ್ಯಕ್ಕೂ ಕತ್ತರಿ ಹಾಕದೇ ಸೆನ್ಸಾರ್‌ ಮಂಡಳಿ ಗ್ರೀನ್‌ ಸಿಗ್ನಲ್‌ ನೀಡಿದೆ. ಇದರಿಂದಾಗಿ ನಿರ್ಮಾಪಕ ಶೈಲೇಂದ್ರ ಬಾಬು ಹರ್ಷಗೊಂಡಿದ್ದಾರೆ.

ಬ್ಲೂ ಫಿಲಂನಂತೆ ಚಿತ್ರ ಮೂಡಿಬಂದಿದೆ. ಸಭ್ಯರಂತೂ ಚಿತ್ರಮಂದಿರದಲ್ಲಿ ಕೂರಲಾಗುವುದಿಲ್ಲ. ಸೆನ್ಸಾರ್‌ ಮಂಡಳಿ ಅರ್ಧಕ್ಕರ್ಧ ಕತ್ತರಿ ಹಾಕುತ್ತದೆ ಎಂದು ವಾರಪತ್ರಿಕೆಯಾಂದು ಇತ್ತೀಚೆಗೆ ಸುದ್ದಿ ಪ್ರಕಟಿಸಿತ್ತು. ಆಮೇಲೆ ಸುದ್ದಿ ಬರೆದ ವರದಿಗಾರ ಮತ್ತು ನಿರ್ದೇಶಕರ ಮಧ್ಯೆ ಕೋಳಿ ಜಗಳವೇ ನಡೆದಿತ್ತು. ನಂತರ ರವಿಶ್ರೀವತ್ಸರ ಕ್ಷಮೆಯಾಂದಿಗೆ ವಿವಾದಕ್ಕೆ ತೆರೆಬಿದ್ದಿತ್ತು.

ಈ ಚಿತ್ರದ ಬಗ್ಗೆ ಮೊದಲಿಂದಲೂ ಸಾಕಷ್ಟು ಪಿಸುಗುಸುಗಳಿವೆ. ಇದು ‘ಮರ್ಡರ್‌’ ಚಿತ್ರದ ಕನ್ನಡ ರೂಪ. ಕನ್ನಡದ ಮೊಟ್ಟಮೊದಲ ಹಸಿಬಿಸಿ ಚಿತ್ರ ಎಂಬುದು ಕೆಲವು ಪತ್ರಕರ್ತರ ದೂರು. ‘ಇಲ್ಲ, ಇದು ಹೊಸ ತಲೆಮಾರಿನ ಪ್ರಯೋಗಶೀಲ ಚಿತ್ರ... ಇದು ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು’ ಎಂದು ನಿರ್ದೇಶಕ ರವಿ ಶ್ರೀವತ್ಸ ಸಮರ್ಥನೆ ನೀಡುತ್ತಲೇ ಬಂದಿದ್ದಾರೆ.

ಈ ಎಲ್ಲದರ ನಡುವೆ ಚಿತ್ರ ಸೆನ್ಸಾರ್‌ ಮನೆಯಿಂದ ಹೊರಬಂದಿದ್ದು, ಬೆಳ್ಳಿತೆರೆಗೆ ಲಗ್ಗೆ ಹಾಕಲು ಸಿದ್ಧತೆ ನಡೆಸಿದೆ.

ತಮ್ಮ ಹಿಂದಿನ ‘ ಕುಟುಂಬ’, ‘ಗೌರಮ್ಮ’ದಂತೆಯೇ ‘ ಗಂಡ ಹೆಂಡತಿ’ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬ ವಿಶ್ವಾಸ ನಿರ್ಮಾಪಕ ಶೈಲೇಂದ್ರ ಬಾಬು ಅವರಲ್ಲಿದೆ. ಆಡಿಯೋ ಕ್ಯಾಸೆಟ್‌ ಕಂಪನಿ ತೆರೆದು, ತಾವೇ ಚಿತ್ರದ ಧ್ವನಿಸುರಳಿಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.

‘ಡೆಡ್ಲಿ ಸೋಮ’ ಮೂಲಕ ಗಮನ ಸೆಳೆದ ರವಿಶ್ರೀವತ್ಸ, ಚಿತ್ರದ ಗೆಲುವಿಗಾಗಿ ತಿಣುಕಾಡಿದ್ದಾರೆ. ಪತ್ರಕರ್ತ ರವಿಬೆಳಗೆರೆಯನ್ನು ಹಿರಿತೆರೆಗೆ ಎಳೆದು ತಂದಿದ್ದಾರೆ. 45ದಿನ ಬ್ಯಾಂಕಾಂಗ್‌ನಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಚಿತ್ರವನ್ನು ಶೃಂಗಾರದಿಂದ ಸಿಂಗಾರ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿಸಿದ್ದಾರೆ. ಇಷ್ಟರ ಮೇಲೆ ಚಿತ್ರದ ಗೆಲುವು; ರಸಿಕ ಪ್ರೇಕ್ಷಕರ ಚಿತ್ತ!

ವಿಶಾಲ್‌ ಹೆಗಡೆ, ತಿಲಕ್‌, ಸಂಚನಾ, ಮಂಜುಭಾಷಿಣಿ ತಾರಾಗಣದಲ್ಲಿದ್ದಾರೆ.

Post your views

ಇದನ್ನೂ ಓದಿ :
ಗಂಡ ಹೆಂಡತಿ -ದ್ಶಶ್ಯಾವಳಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada