»   » ಮಂಜುನಾಥ್ ನಿರ್ದೇಶನದ ಚಿತ್ರದಲ್ಲಿ ಇಂದ್ರಜಿತ್ ನಾಯಕ!

ಮಂಜುನಾಥ್ ನಿರ್ದೇಶನದ ಚಿತ್ರದಲ್ಲಿ ಇಂದ್ರಜಿತ್ ನಾಯಕ!

Posted By:
Subscribe to Filmibeat Kannada


ರಣಧೀರಚಿತ್ರದ ಏನ್ ಹುಡ್ಗಿರೋ, ಇದ್ಯಾಕಿಂಗೆ ಆಡ್ತೀರೋ? ಹಾಡಿನಲ್ಲಿ ಮಿಂಚಿದ್ದ ಮಾಸ್ಟರ್ ಮಂಜುನಾಥ್, ಈಗ ಮಿಸ್ಟರ್ ಮಂಜುನಾಥ್! ಅವರು ಕೊನೆಗೂ ತಮ್ಮ ಅಜ್ಞಾತವಾಸ ಮುಗಿಸಿ, ಬಣ್ಣದ ಬದುಕಿಗೆ ಮರಳಿದ್ದಾರೆ! ಆದರೆ ನಟರಾಗಿ ಅಲ್ಲ, ನಿರ್ದೇಶಕರಾಗಿ..

ಅಶೋಕ್ ಖೇಣಿ ಅವರ ನೈಸ್ ಕಂಪನಿಯಲ್ಲಿ ಒಳ್ಳೆ ಉದ್ಯೋಗ ಮಾಡುತ್ತಾ, ಸಮಾಧಾನ(?)ದ ಸಂಬಳ ಎಣಿಸುತ್ತಿರುವ ಮಂಜುನಾಥ್ ತಲೆಯಲ್ಲಿ, ಹತ್ತಾರು ಯೋಜನೆ ಮತ್ತು ಯೋಚನೆಗಳಿವೆ. ಅವುಗಳಲ್ಲಿ ಮೊದಲ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಅಂದ ಹಾಗೆ ಮಂಜುನಾಥ್ ನಿರ್ದೇಶಿಸಲಿರುವ ಚಿತ್ರದ ನಾಯಕ; ಇಂದ್ರಜಿತ್ ಲಂಕೇಶ್!

ಚಿತ್ರದ ಬಗ್ಗೆ ಇಂದ್ರಜಿತ್ ಮತ್ತು ಮಂಜುನಾಥ್ ಶುಕ್ರವಾರ ಚರ್ಚೆ ನಡೆಸಿ, ಅಂತಿಮ ರೂಪುರೇಷೆಗಳನ್ನು ಸಿದ್ಧ ಪಡಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಉಪೇಂದ್ರ, ಪ್ರೇಮ್ ಮತ್ತಿತರ ನಿರ್ದೇಶಕರು ನಾಯಕರಾದ ಉದಾಹರಣೆಗಳು ಸ್ಯಾಂಡಲ್‌ವುಡ್‌ನಲ್ಲಿವೆ. ಆ ಸಾಲಿಗೆ ಹೊಸ ಸೇರ್ಪಡೆ ಇಂದ್ರಜಿತ್ ಲಂಕೇಶ್. ಚಿತ್ರದಲ್ಲಾದರೂ ಇಂದ್ರಜಿತ್‌ರ ಇಳಿಜಾರಿನ ಬೋಳುತಲೆಯಲ್ಲಿ ಕೂದಲು ಮೊಳಕೆ ಹೊಡೆಯಲಿ!

ಈ ಬೆಳವಣಿಗೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada