»   » ಮಸ್ತುಮಸ್ತು ಹುಡುಗಿ ರವೀನಾ ಟಂಡನ್‌ಗೆ 2ನೇ ಮಗು!

ಮಸ್ತುಮಸ್ತು ಹುಡುಗಿ ರವೀನಾ ಟಂಡನ್‌ಗೆ 2ನೇ ಮಗು!

Subscribe to Filmibeat Kannada


ಮುಂಬಯಿ, ಜುಲೈ 13 : ಉಪೇಂದ್ರ ಚಿತ್ರದಲ್ಲಿ ಮಸ್ತು ಮಸ್ತು ಹಾಡಿಗೆ ಹೆಜ್ಜೆ ಹಾಕಿದ್ದ ಬಾಲಿವುಡ್ ಬೆಡಗಿ ರವೀನಾ ಟಂಡನ್‌, ಈಗ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ತಾಯಿ ಮಗು ಆರೋಗ್ಯದಿಂದಿದ್ದಾರೆ. ಇನ್ನೂ ಒಂದು ವಾರ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ ಎಂದು ವೈದ್ಯರು ಶುಕ್ರವಾರ ತಿಳಿಸಿದ್ದಾರೆ.

ಈಗಾಗಲೇ ಹೆಣ್ಣುಮಗುವೊಂದಕ್ಕೆ ಜನ್ಮನೀಡಿದ್ದ ರವೀನಾ, ಈಗ ಗಂಡು ಮಗುವಿನ ತಾಯಿ. ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಸಹಜ ಹೆರಿಗೆಯೇ ಆಗಿದೆ. ರವೀನಾ ಪತಿ ಅನಿಲ್ ತಡಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹೊಸ ಅತಿಥಿಯ ಆಗಮನದಿಂದ ರವೀನಾರ ಎರಡು ವರ್ಷದ ಮಗಳು ರಶಾಗೆ ತಮ್ಮ ಸಿಕ್ಕಿದ್ದಾನೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada