For Quick Alerts
  ALLOW NOTIFICATIONS  
  For Daily Alerts

  ವಾರಸುದಾರನೆಪದಲ್ಲಿ ಇಬ್ಬರು ಬಿಗ್ ಡಾನ್‌ಗಳ ಭೇಟಿ!

  By Staff
  |

  ಬೆಂಗಳೂರು ಜುಲೈ 13 : ಪತ್ರಕರ್ತ ರವಿ ಬೆಳಗೆರೆ ಇನ್ನೊಂದು ಚಿತ್ರಕ್ಕಾಗಿ ಬಣ್ಣ ಹಚ್ಚಿಕೊಂಡಿದ್ದಾರೆ. ಏನ್ ಗುರು ಇದು, ನಿಮ್ಗೆ ಸಿನಿಮಾ ಹುಚ್ಚು ಜಾಸ್ತಿಯಾಯಿತಾ? ಅಂದರೆ, ಚಿತ್ರದ ನಿರ್ದೇಶಕರು ಉತ್ತರ ಕೊಡ್ತಾರೆ. ಅವರ ಹೆಸರು; ಗುರು!

  ವಾರಸುದಾರ ಚಿತ್ರ ನಗರದ ಧರ್ಮಸ್ಥಳ ಶ್ರೀಮಂಜುನಾಥನ ಸನ್ನಿಧಿಯಲ್ಲಿ ಸೆಟ್ಟೇರಿದೆ. ಈ ಚಿತ್ರದಲ್ಲಿ ಅಕ್ಷರ ಲೋಕದ ಡಾನ್(?) ರವಿಗೊಂದು ಮುಖ್ಯಪಾತ್ರ. ಚಿತ್ರದ ನಾಯಕ ಸಂದೀಪ್ ಮತ್ತು ನಾಯಕಿ ಅಶ್ವಿನಿ,ಇಬ್ಬರೂ ಹೊಸಬರೇ. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲು ಪಾಪಿಗಳ ಲೋಕದ ಒಂದು ಕಾಲದ ಡಾನ್ ಮುತ್ತಪ್ಪ ರೈ ಆಗಮಿಸಿದ್ದರು.

  ಈ ಸಂದರ್ಭದಲ್ಲಿ ರವೀಂದ್ರ ನಾಥ ಠಾಗೂರ್, ಕೆಎಫ್‌ಸಿಸಿ ಅಧ್ಯಕ್ಷ ತಲ್ಲಂ, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಮತ್ತಿತರರು ಹಾಜರಿದ್ದರು.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X