»   » ಸೌಂದರ್ಯದ ಬಗ್ಗೆ ಅತಿ ಕಾಳಜಿಯನ್ನು ತೋರುವ ಸಿನಿಮಾ

ಸೌಂದರ್ಯದ ಬಗ್ಗೆ ಅತಿ ಕಾಳಜಿಯನ್ನು ತೋರುವ ಸಿನಿಮಾ

Posted By: *ದಟ್ಸ್‌ಕನ್ನಡ ಬ್ಯೂರೊ
Subscribe to Filmibeat Kannada

'ನಾನು ನರ್ಷಕ್ಕೆ ನಾಲ್ಕು ಬಾರಿ ರಕ್ತದಾನ ಮಾಡುತ್ತೇನೆ!"
- ತಾರಾ

ಇದು ಸಿನಿಮಾ ಡೈಲಾಗಲ್ಲ . ಡೈಲಾಗ್‌ ಡೆಲಿವರಿಯಾದದ್ದು ಸಿನಿಮಾ ಸೆಟ್ಟಿನಲ್ಲೂ ಅಲ್ಲ . ಸ್ಥಳ : ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸಮ್ಮುಖ ನರ್ಸಿಂಗ್‌ ಹೋಂ. ಸಂದರ್ಭ : ಸಮ್ಮುಖ ನರ್ಸಿಂಗ್‌ ಹೋಂ ಹಾಗೂ ರೋಟರಿ ಬೆಂಗಳೂರು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ.

ತಾರಾ ಆಗಷ್ಟೇ ರಕ್ತ ನೀಡಿದ್ದರು. ಅವರ ಮುಖದಲ್ಲಿ ಬಳಲಿಕೆಯಿರಲಿಲ್ಲ ; ಧನ್ಯತಾಭಾವ ನೆಲೆಸಿತ್ತು . ಅನ್ನದಾನದಿಂದ ಹೊಟ್ಟೆ ತುಂಬುತ್ತದೆ. ವಿದ್ಯಾದಾನದಿಂದ ಜ್ಞಾನ ಹೆಚ್ಚುತ್ತದೆ. ಆದರೆ ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಯುತ್ತದೆ. ಆ ಕಾರಣದಿಂದಲೇ ರಕ್ತದಾನ ಮಹಾದಾನ ಎಂದು ತಾರಾ ಬಣ್ಣಿಸಿದರು.

ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ಎದುರಾಗುವ ಕಷ್ಟ ನಷ್ಟಗಳ ಅನುಭವ ನನಗಿದೆ ಎಂದ ತಾರಾ, ವರ್ಷದಲ್ಲಿ ಮೂರ್ನಾಲ್ಕು ಬಾರಿ ತಾವು ರಕ್ತದಾನ ಮಾಡುವುದಾಗಿ ತಿಳಿಸಿದರು.

ರಕ್ತದಾನದ ಬಗೆಗಿನ ಮೂಢನಂಬಿಕೆಗಳನ್ನು ಕುರಿತು ರೋಟರಿ ಸಂಸ್ಥೆಯ ಶ್ರೀಕಾಂತ್‌ ಮಾತನಾಡಿದರು. ರಕ್ತದಾನದಿಂದ ನಿಶ್ಯಕ್ತಿ ಉಂಟಾಗುತ್ತದೆ, ವ್ಯಕ್ತಿ ಸಣ್ಣಗಾಗುತ್ತಾನೆ, ರಕ್ತ ಕಡಿಮೆಯಾಗುತ್ತದೆ ಎನ್ನುವುದೆಲ್ಲ ಮೂಢನಂಬಿಕೆ. ರಕ್ತದಾನನಿಂದ ಹೊರಹೋದ ರಕ್ತವನ್ನು ಶರೀರ ತಂತಾನೇ ತುಂಬಿಕೊಳ್ಳುತ್ತದೆ. ರಕ್ತ ಕಡಿಮೆಯಾಗುವ ಪ್ರಶ್ನೆಯೇ ಇಲ್ಲ ಎಂದು ಶ್ರೀಕಾಂತ್‌ ಹೇಳಿದರು.

ಸಮ್ಮುಖ ನರ್ಸಿಂಗ್‌ ಹೋಂನ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಶಿರೇಖಾ ಸತೀಶ್‌, ರೋಟರಿ ಸಂಸ್ಥೆಯ ಕೆ.ರಘುನಾಥ್‌ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. 300 ಕ್ಕೂ ಹೆಚ್ಚು ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾರಾ ಭಾಗವಹಿಸುವಿಕೆಯಿಂದ ರಕ್ತದಾನ ಶಿಬಿರಕ್ಕೆ ತಾರಾಕಳೆ ಬಂತೆನ್ನಿ !

ತಾರಾ ಓ ತಾರಾ

English summary
Film actress Tara donated blood in Sammukha Nursing Home. She donates blood 4 times in an year !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada