»   » ‘ಇಳಿ’ಸೌಂದರ್ಯವತಿ ನಗ್ಮಾ ಅಂಗಡಿ ; ಸೆಕ್ಸಿ ಶಕೀಲಾಳ ಭಾನಗಡಿ

‘ಇಳಿ’ಸೌಂದರ್ಯವತಿ ನಗ್ಮಾ ಅಂಗಡಿ ; ಸೆಕ್ಸಿ ಶಕೀಲಾಳ ಭಾನಗಡಿ

Posted By: Super
Subscribe to Filmibeat Kannada

ನಗ್ಮಾ ಎಂಬ 'ಇಳಿ"ಸೌಂದರ್ಯವತಿಯ ಜಾಣ್ಮೆ ನೋಡಿ : ಹೊಸ ಹುಡುಗಿಯರ ದಾಳಿಯಿಂದ ಅವಕಾಶಗಳು ಅಪರೂಪವಾಗುತ್ತಿರುವ ಹೊತ್ತಿನಲ್ಲಿ ನಗ್ಮಾ ಅಂಗಡಿಯಾಂದನ್ನು ತೆರೆದು ಗಲ್ಲಾದ ಮೇಲೆ ಕೂರುವ ಸಿದ್ಧತೆ ನಡೆಸಿದ್ದಾಳೆ. ಜಾಣತನವೆಂದರೆ ಇದಲ್ಲವೇ ?

ಗಂಗೂಲಿ ಎಂಬ ಬೆಂಗಾಳಿ ಕ್ರಿಕೆಟಿಗ, ಬೆಂಗಳೂರಿನ ರವಿಶಂಕರ್‌ ಆವರ ಆರ್ಟ್‌ ಆಫ್‌ ಲಿವಿಂಗ್‌ ಇತ್ಯಾದಿಗಳ ಜೊತೆಗೆ ನಗ್ಮಾ ಹೆಸರು ಇತ್ತೀಚಿನ ದಿನಗಳಲ್ಲಿ ಥಳುಕು ಹಾಕಿಕೊಂಡಿತ್ತು . ಆದರೆ, ಈಕೆಯ ಮನಸ್ಸಿನಲ್ಲಿ ಅದ್ಯಾವಾಗ ವ್ಯಾಪಾರದ ಯೋಚನೆ ಹೊಕ್ಕಿತೋ ಏನೋ- ನಗ್ಮಾ ವ್ಯಾಪಾರಿಯ ಅವತಾರ ತಾಳಿದ್ದಾಳೆ. ಸೌಂದರ್ಯದ ಮಾರುಕಟ್ಟೆಯ ನಾಡಿಮಿಡಿತ ಬಲ್ಲ ನಟೀಮಣಿ ಮಾಯಾ ನಗರಿ ಮುಂಬಯಿಯಲ್ಲಿ ಸೌಂದರ್ಯದ ಅಂಗಡಿ (fashion boutique) ಯಾಂದನ್ನು ತೆರೆದಿದ್ದಾಳೆ. ಅಂತರರಾಷ್ಟ್ರೀಯ ಬ್ರಾಂಡ್‌ಗಳಾದ Diesel, Celine ಮೂಲಕ ನಗ್ಮಾ ತರುಣಿಯರ ಪಾಕೆಟ್‌ಗೆ ಕೈ ಹಾಕಿದ್ದಾರೆ.

ಮುಂಬಯಿಯ ಪ್ರತಿಷ್ಠಿತ ಪ್ರದೇಶದವಾದ ಹಿಲ್‌ರೋಡ್‌ನಲ್ಲಿ ನಗ್ಮಾಳ ಅಂಗಡಿ ಇತ್ತೀಚೆಗಷ್ಟೇ ಪ್ರಾರಂಭವಾಯಿತು. ಅಂಗಡಿಯ ಪರದೆ ಸರಿಸಿದ್ದು ಯಾರೆಂದುಕೊಂಡಿರಿ ? ಗಂಗೂಲಿ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು . ಬಾಲಿವುಡ್‌ ನಟ ಅಕ್ಷಯಕುಮಾರ್‌ ಮೊನ್ನೆ ಸೆ.9ರ ಭಾನುವಾರ ಅಂಗಡಿಯನ್ನು ಉದ್ಘಾಟಿಸಿದರು.

ನಗ್ಮಾಗೆ ವ್ಯಾಪಾರ ಕೈಗೂಡಲಿ.

ಶಕೀಲಾ ರಂಗೀಲಾ !

ಸಭ್ಯ ಪಾತ್ರಗಳ ತೆಲುಗು ಚಿತ್ರರಂಗದಲ್ಲಿ ಶಕೀಲಾ ಎನ್ನುವ ಹೆಣ್ಣುಮಗಳಿಗೆ ಪುನರ್ಜನ್ಮ ಸಿಕ್ಕಿತು ಎಂದುಕೊಳ್ಳುತ್ತಿರುವಾಗಲೇ ಆಕೆಯ ಬಗ್ಗೆ ಗರಂಗರಂ ಸುದ್ದಿಯಾಂದು ತಮಿಳುನಾಡಿನ ತಿರುನಲ್ವೇಲಿಯಿಂದ ಹೊರಬಿದ್ದಿದೆ.

ತಿರುನಲ್ವೇಲಿಯ ಪೊಲೀಸರು ಇತ್ತೀಚೆಗೆ ಚಿತ್ರಮಂದಿರವೊಂದರ ಮೇಲೆ ದಾಳಿ ಮಾಡಿದರು. ಸಿನಿಮಾ ಮಂದಿರದಲ್ಲಿ ನೀಲಿಚಿತ್ರ ಪ್ರದರ್ಶವಾಗುತ್ತಿದೆ ಎನ್ನುವ ಅನುಮಾನ ಪೊಲೀಸರದು. ಅಲ್ಲಿ ಪ್ರದರ್ಶನವಾಗುತ್ತಿದ್ದುದು ಶಕೀಲಾ ಅಭಿನಯಿಸಿದ ಚಿತ್ರ.

ಅದೊಂದು ಕೊಳಕಾತಿಕೊಳಕ ಚಿತ್ರ ಎಂದು ಬಣ್ಣಿಸಿರುವ ಪೊಲೀಸರು, ಥಿಯೇಟರ್‌ನ ಆಪರೇಟರ್‌ನನ್ನು ಬಂಧಿಸಿದ್ದಾರೆ. ಥಿಯೇಟರ್‌ಗೀಗ ಬೀಗ ಬಿದ್ದಿದೆ. ಆಪರೇಟರ್‌ ಮೇಲಷ್ಟೇ ಅಲ್ಲ , ಶಕೀಲಾ ಮೇಲೂ ಪೊಲೀಸರು ದೂರು ಜಡಿದಿದ್ದಾರೆ.

ಇದೆಲ್ಲಾ ನಿಜವೇನಮ್ಮಾ ಶಕೀಲಾ ಎಂದರೆ-
ನನಗೇನೂ ಗೊತ್ತಿಲ್ಲ . ಎಂದಿನಂತೆ ಚಿತ್ರೀಕರಣದಲ್ಲಿ ನಾನು ಬ್ಯುಸಿಯಾಗಿದ್ದೇನೆ. ಯಾವ ಪೊಲೀಸರೂ ನನ್ನನ್ನು ಸಂಪರ್ಕಿಸಿಲ್ಲ - ಎನ್ನುತ್ತಾಳೆ.

English summary
Actress Nagma opens a boutique in Mumbai City. Police filed a case against sex queen Shakeela

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada