»   » ಇನ್ನಷ್ಟು ಕಾದಂಬರಿ ಆಧಾರಿತ ಚಿತ್ರ -ದ್ವಾರ್ಕಿ

ಇನ್ನಷ್ಟು ಕಾದಂಬರಿ ಆಧಾರಿತ ಚಿತ್ರ -ದ್ವಾರ್ಕಿ

Posted By: Super
Subscribe to Filmibeat Kannada

ಭದ್ರಾವತಿ : ಹೆಚ್ಚು ಹೆಚ್ಚು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಇನ್ನು ಮುಂದೆಯೂ ಕಾದಂಬರಿ ಆಧಾರಿತ ಚಿತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದೇನೆ ಎಂದು ನಟ-ನಿರ್ದೇಶಕ ದ್ವಾರಕೀಶ್‌ ಹೇಳಿದ್ದಾರೆ.

ತಮ್ಮ ನಿರ್ಮಾಣದ 'ಆಪ್ತಮಿತ್ರ" ಚಿತ್ರ ಭದ್ರಾವತಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ತೆರೆಕಂಡ ಸಂದರ್ಭದಲ್ಲಿ ಭದ್ರಾವತಿಗೆ ಆಗಮಿಸಿದ್ದ ದ್ವಾರಕೀಶ್‌ ಸುದ್ದಿಗಾರರೊಂದಿಗೆ ಮಾತನಾಡಿದರು. ಹನ್ನೊಂದು ವರ್ಷಗಳ ಹಿಂದಿನ ಮಣಿಚಿತ್ರತ್ತಾಳ್‌ ಚಿತ್ರದ ರಿಮೇಕ್‌ ಚಿತ್ರವಾದ ಆಪ್ತಮಿತ್ರ ಕರ್ನಾಟಕದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದರು.

ನನ್ನ ಹಾಗೂ ವಿಷ್ಣುವರ್ಧನ್‌ (ಆಪ್ತಮಿತ್ರ) ನಡುವಿನ ಸ್ನೇಹ ಸಂಬಂಧ ಮುಂದುವರೆಯುತ್ತದೆ. ವಿಷ್ಣು ನಾಯಕತ್ವದಲ್ಲಿ ಕಾದಂಬರಿ ಆಧಾರಿತ ಹೊಸ ಚಿತ್ರ ತಯಾರಿಸುವ ಯೋಜನೆ ರೂಪಿಸುತ್ತಿದ್ದೇನೆ ಎಂದೂ ದ್ವಾರಕೀಶ್‌ ತಿಳಿಸಿದರು.

ನಟಿ ಸೌಂದರ್ಯ, ವಿಷ್ಣುವರ್ಧನ್‌, ಗುರುಕಿರಣ್‌ 'ಆಪ್ತಮಿತ್ರ" ಚಿತ್ರಕ್ಕೆ ಜೀವತುಂಬಿದ್ದಾರೆ. ಮನೆ ಹೊಕ್ಕಿರುವ ಟಿ.ವಿ ಸೆಟ್‌ಗಳಿಂದ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ರೀಮೇಕ್‌, ಸ್ವಮೇಕ್‌ ಚಿತ್ರ ಎನ್ನುವುದಕ್ಕಿಂತ ಚಿತ್ರದ ಯಶಸ್ಸು ಮಾತ್ರ ಮುಖ್ಯವಾಗುತ್ತದೆ. ಪ್ರೇಕ್ಷಕರ ನಿರ್ಧಾರವೇ ಅಂತಿಮ ಎಂದರು.

ಈ ಸಂದರ್ಭದಲ್ಲಿ ದ್ವಾರಕೀಶ್‌ಪುತ್ರರು ಹಾಗೂ ಚಿತ್ರಮಂದಿರದ ಮಾಲೀಕ ರಾಜು ಹಾಜರಿದ್ದರು.

(ಇನ್ಫೋ ವಾರ್ತೆ)

English summary
Dwarakish promises more novel based films

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada