»   » ಗಂಗರಾಜು, ಸುದೀಪ್‌ ಮನೆಮೇಲೆ ತೆರಿಗೆ ಇಲಾಖೆ ದಾಳಿ

ಗಂಗರಾಜು, ಸುದೀಪ್‌ ಮನೆಮೇಲೆ ತೆರಿಗೆ ಇಲಾಖೆ ದಾಳಿ

Subscribe to Filmibeat Kannada

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು, ನಟ ಸುದೀಪ್‌ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುದ್ದಿಗಾರರಿಗೆ ಈ ಬಗ್ಗೆ ವಿವರಣೆ ನೀಡಿರುವ ಗಂಗರಾಜು, ಅಧಿಕಾರಿಗಳು ನಮ್ಮ ಕಚೇರಿಗೆ ಬಂದದ್ದು ನಿಜ. ಅವರು ಕೆಲವು ಮಾಹಿತಿಗಳನ್ನು ಕೇಳಿದರು. ನಾನು ಅವುಗಳನ್ನು ಒಪ್ಪಿಸಿದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವುದರಿಂದ ನನಗೇನು ಭಯವಿಲ್ಲ ಎಂದಿದ್ದಾರೆ.

ಗಂಗರಾಜು ಕಚೇರಿಯಲ್ಲಿ ಕೇವಲ 6000 ರೂ. ಪತ್ತೆಯಾಗಿದೆ. ಸುದೀಪ್‌ ಮನೆ ದಾಳಿಯ ವಿವರಗಳು ಇನ್ನೂ ಲಭ್ಯವಾಗಿಲ್ಲ. ನಟ-ನಟಿಯರು, ನಿರ್ಮಾಪಕರು ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಈ ವಾರ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

(ದಟ್ಸ್‌ ಕನ್ನಡ ವಾರ್ತೆ)

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada