»   » ‘ಹಾಲಿವುಡ್‌’ನ ಗ್ರಾಫಿಕ್ಸ್‌ ಗಿಮಿಕ್ಕಿಗೇ 1 ಕೋಟಿ ರು.

‘ಹಾಲಿವುಡ್‌’ನ ಗ್ರಾಫಿಕ್ಸ್‌ ಗಿಮಿಕ್ಕಿಗೇ 1 ಕೋಟಿ ರು.

Posted By: Super
Subscribe to Filmibeat Kannada

ಇತ್ತೀಚೆಗೆ ಕೆಸೆಟ್‌ ಬಿಡುಗಡೆ ಸಮಾರಂಭಗಳ ಮುಖ್ಯ ಅತಿಥಿಯಾಗಿ ಪದೇಪದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿರುವ ಕೋಟಿ ಥೈಲಿವಾಲ ರಾಮು ಕನಸು ಮನಸಲ್ಲೆಲ್ಲಾ 'ಹಾಲಿವುಡ್‌" ಕಾಟವೋ ಕಾಟ.

ಫೆಲಿಸಿಟಿಯೆಂಬ ಆಸ್ಟ್ರೇಲಿಯನ್‌ ನಾಯಕಿಯನ್ನು ಬೆಂಗಳೂರಿಗೆ ಕರಕೊಂಡು ಬಂದು ತೋರಿದಾಗ ಸಿಕ್ಕ ಪ್ರತಿಕ್ರಿಯೆಯೂ ಅಂಥಾ ಚೆನ್ನಾಗಿಲ್ಲ. ಸದ್ಯದ ಸ್ಥಿತಿಯಲ್ಲಿ ಉಪ್ಪಿ ನಸೀಬೂ ಸೊನ್ನೆ. ಅವರ ಚಿತ್ರಗಳೇ ಹೋದ ಪುಟ್ಟ ಬಂದ ಪುಟ್ಟ ಎಂಬಂತಾಗಿರುವಾಗ ರಾಮು ಈಗೇನು ಮಾಡಬೇಕು ಹೇಳಿ?

ಅದನ್ನು ರಾಮುಗೆ ತಿಳಿಹೇಳುವ ಅಗತ್ಯವೇನೂ ಇಲ್ಲ. ಯಾಕೆಂದರೆ, ಅವರು ಜಾಣ ನಿರ್ಮಾಪಕ. 'ಹಾಲಿವುಡ್‌" ಏನೋ ಡಬ್ಬಕ್ಕೆ ತುಂಬಿಕೊಂಡಿದೆ. ಇನ್ನೇನಿದ್ದರೂ ಬಾಕಿ ಇರೋದು ಟಚ್‌ ಅಪ್‌ ಕೆಲಸ. ಇದೇ ಬಲು ಮುಖ್ಯ ಅನ್ನೋದು ರಾಮುಗೆ ಚೆನ್ನಾಗಿ ಗೊತ್ತು. ಖರ್ಚಿಗೆ ಹಿಂದೂಮುಂದು ನೋಡುವ ಆಸಾಮಿ ಇವರಲ್ಲವೇ ಅಲ್ಲ. ಇದು ಉಪ್ಪಿ ವರಸೆಗೆ ಒಪ್ಪುವುದೂ ಹೌದು. ಮಲೆಯಾಳಿ ಮಾಂತ್ರಿಕ ದಿನೇಶ್‌ ಬಾಬು ಅಚ್ಚುಕಟ್ಟುತನಕ್ಕಾದರೂ ಉಪ್ಪಿ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರೆ ಮಾತ್ರ 'ಹಾಲಿವುಡ್‌"ಗೆಲ್ಲುವ ಸಾಧ್ಯತೆ ಇದೆ ಅನ್ನುತ್ತಿದ್ದಾರೆ ಸ್ಯಾಂಡಲ್‌ವುಡ್‌ ಪಂಡಿತರು.

ಅನೇ ಆಗಲಿ ರಾಮು ಸದ್ಯಕ್ಕಂತೂ ನಗುತ್ತಲೇ ಇದ್ದಾರೆ. ಪತ್ನಿ ಮಾಲಾಶ್ರೀಯನ್ನು ನಾಯಕಿಯಾಗಿ ಪುನರ್‌ ಲಾಂಚ್‌ ಮಾಡುವ ಸಾಹಸವನ್ನು ಮುಂದೂಡಿರುವ ಅವರು 'ಹಾಲಿವುಡ್‌"ಗೆ ಜೀವ ತುಂಬುವುದರಲ್ಲೇ ಬ್ಯುಸಿ. ಗ್ರಾಫಿಕ್‌ ತಂತ್ರವೇ ಈ ಚಿತ್ರದ ವಿಶೇಷವಂತೆ. ಸಾಲದ್ದಕ್ಕೆ ಮೂರು ಪಾತ್ರಗಳಲ್ಲಿ ಉಪ್ಪಿಯನ್ನು ನೋಡುವ ಭಾಗ್ಯ (?). ಗ್ರಾಫಿಕ್‌ ತಂತ್ರವನ್ನೇ ಚಿತ್ರದ ಟ್ರಂಪ್‌ಕಾರ್ಡ್‌ ಮಾಡಿಕೊಳ್ಳಲೆಂದೇ ರಾಮು ಒಂದು ಕೋಟಿ ರುಪಾಯಿ ಸುರಿದಿದ್ದಾರೆ. ಹೆಚ್ಚೂಕಮ್ಮಿ ಇದು ಉಪ್ಪಿಯ ಸಂಭಾವನೆಗೆ ಸಮವಾಯಿತು.

ಉಪ್ಪಿಯ ಜೊತೆಗೆ ಬಾಲವಿರುವ ಒಂದು ಕೋತಿಯ ನಟನೆ 'ಹಾಲಿವುಡ್‌"ನ ಹೈಲೈಟಂತೆ !

English summary
Mega Producer Ramu pours money on Upendras Hollywood. Graphics and a monkey is the highlight of this movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada