»   » ನೂರು ದಿನ ಪೂರೈಸಿದ ಸಂದರ್ಭದಲ್ಲಿ ವಿಷ್ಣುವನ್ನು ನೆನೆಯೋಣ.

ನೂರು ದಿನ ಪೂರೈಸಿದ ಸಂದರ್ಭದಲ್ಲಿ ವಿಷ್ಣುವನ್ನು ನೆನೆಯೋಣ.

Posted By: Staff
Subscribe to Filmibeat Kannada

ವಿಷ್ಣುವರ್ಧನ್‌ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ?

ಸದ್ಯಕ್ಕೆ ವಿಷ್ಣುವರ್ಧನ್‌ ಅವರು ಅಭಿನಯಿಸುತ್ತಿರುವ ಚಿತ್ರದ ಹೆಸರು 'ವೀರ'. ತೆಲುಗಿನ ಮುತ್ಯಾಲ ಸುಬ್ಬಯ್ಯ 'ವೀರ'ದ ನಿರ್ದೇಶಕರು. ಶೂಟಿಂಗ್‌ ಅರ್ಧಕ್ಕೆ ನಿಂತಿದೆ. ಕಥೆ ಇನ್ನಷ್ಟು ಗಟ್ಟಿಯಾಗಬೇಕು ಎಂದು ವಿಷ್ಣು ಅಪ್ಪಣೆ ಹೊರಡಿಸಿರುವ ಕಾರಣ, ಶೂಟಿಂಗ್‌ ನಿಂತಿದೆ. ಯಾವಾಗ ಆರಂಭವಾಗುತ್ತದೆಂಬುದು ನಿರ್ಮಾಪಕ ಮೇಡಿಕೊಂಡ ಮುರಳೀಕೃಷ್ಣ ಅವರಿಗೆ ಗೊತ್ತಿಲ್ಲ.

ವಿಷ್ಣು ದುಬೈಗೆ ಹೋಗುತ್ತಿರೋದು ನಿಜವಾ ?

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್‌-ಸೆಪ್ಟಂಬರ್‌ ತಿಂಗಳಲ್ಲಿ ವಿಷ್ಣು ಅಮೆರಿಕ ಪ್ರವಾಸ ಕೈಗೊಳ್ಳಬೇಕಿತ್ತು. ಅವರಿಗೆ ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷ ಆಹ್ವಾನವಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದ ವಿಷ್ಣು ಅಮೆರಿಕ ಫ್ಲೈಟ್‌ ಮಿಸ್‌ ಮಾಡಿಕೊಂಡರು. ಅದನ್ನು ಸರಿ ತೂಗಿಸಲೋ ಎಂಬಂತೆ ಅವರೀಗ ದುಬೈಗೆ ಹೊರಟಿದ್ದಾರೆ. ಈ ಪ್ರವಾಸ ಒಂದು ರೀತಿಯಲ್ಲಿ ಅವರ ಸಿನಿಮಾಗಳ ಪ್ರೊಮೊಷನ್‌ ಕಾರ್ಯಕ್ರಮವೂ ಹೌದು. ದುಬೈನಲ್ಲಿ ವಿಷ್ಣು ಅವರ 'ಸಿಂಹಾದ್ರಿಯ ಸಿಂಹ' ಹಾಗೂ 'ಕೋಟಿಗೊಬ್ಬ' ಚಿತ್ರದ ಪ್ರದರ್ಶನ ನಡೆಯಲಿದ್ದು, ಸಿನಿಮಾ ಪ್ರದರ್ಶನದೊಂದಿಗೆ 'ಗುರು' ತಂಡದ ರಸಮಂಜರಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಷ್ಣು ಎರಡು ಹಾಡು ಹಾಡಲಿದ್ದಾರಂತೆ.

ಸಿಂಹಾದ್ರಿಯ ಸಿಂಹದ ಶತ ದಿನೋತ್ಸವ ನಡೆಯುವುದೆಲ್ಲಿ ?

ಈ ಮುನ್ನ ಸಿಂಹಾದ್ರಿಯ ಸಿಂಹ ಚಿತ್ರದ ಶತದಿನ ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಡೆಸಲು ಚಿತ್ರದ ನಿರ್ಮಾಪಕ ವಿಜಯಕುಮಾರ್‌ ಪ್ಲಾನ್‌ ಮಾಡಿದ್ದರು. ಆದರೆ, ಸಿಂಹ ತಲೆ ಅಲ್ಲಾಡಿಸಿರುವುದರಿಂದ ಶತದಿನ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್‌ ಆಗಿದೆ. ದಿನಾಂಕ ಇನ್ನೂ ಪಕ್ಕಾ ಆಗಿಲ್ಲ.

English summary
Vishnuvardhans next movie is Veera. Muthyala subbayya of tollywood to direct this movie
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada